ಶಿವಮೊಗ್ಗ (ಜೂ.18): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಏಕಾಏಕಿ ಕುಸಿತ ಕಂಡಿದೆ. ಬುಧವಾರ ಕೇವಲ 130 ಪಾಸಿಟಿವ್ ಪ್ರಕರಣ ಮಾತ್ರ ಕಂಡುಬಂದಿದೆ.
ಇದೇ ವೇಳೆಗೆ 918 ಮಂದಿ ಬಿಡುಗಡೆಯಾಗಿದ್ದು, 4 ಮಂದಿ ಕೋವಿಡ್ ಕಾರಣಕ್ಕೆ ಮೃತಪಟ್ಟಿದ್ದಾರೆ.
ಕೋವಿಡ್‌ನೊಂದಿಗೆ ಇಳಿಕೆಯತ್ತ ಬ್ಲ್ಯಾಕ್ ಫಂಗಸ್..! ...
ಇಡೀ ರಾಜ್ಯದಲ್ಲಿ ಪ್ರಕರಣ ಇಳಿಮುಖವಾಗುತ್ತಿದ್ದರೂ, ಜಿಲ್ಲೆಯಲ್ಲಿ ಮಾತ್ರ ಸೋಂಕಿತರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರುತ್ತಿರಲಿಲ್ಲ. ಅಲ್ಪ ಪ್ರಮಾಣದ ಇಳಿಕೆ ಮಾತ್ರ ಕಾಣಿಸಿತ್ತು. ಆದರೆ, ಬುಧವಾರ ಏಕಾಏಕಿ 130 ಪ್ರಕರಣ ಮಾತ್ರ ಕಾಣಿಸಿಕೊಂಡಿದ್ದು, ಆಶಾದಾಯಕ ಬೆಳವಣಿಗೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 4053 ಸಕ್ರಿಯ ಸೋಂಕಿತರಿದ್ದು, ಇದರಲ್ಲಿ 937 ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆ, ಕೋವಿಡ್ ಆಸ್ಪತ್ರೆಯಲ್ಲಿ 539, ಕೋವಿಡ್ ಕೇರ್ ಸೆಂಟರ್‌ನಲ್ಲಿ 1189 ಮಂದಿ, ಖಾಸಗಿ ಆಸ್ಪತ್ರೆಯಲ್ಲಿ 649 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.