ಬೆಂಗಳೂರು (ಡಿ.14): ನಗರದಲ್ಲಿ ಕೋವಿಡ್ (Covid) ಸೋಂಕಿತ ಪ್ರಕರಣಗಳ (Case) ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಸೋಮವಾರ 121 ಜನರಲ್ಲಿ ಸೋಂಕು ದೃಢಪಟ್ಟಿದೆ. ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳ ಪತ್ತೆಯಿಂದ ಸೋಂಕಿತರ ಸಂಖ್ಯೆ 12,59,025ಕ್ಕೆ ಏರಿಕೆಯಾಗಿದೆ. 188 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ ಬಿಡುಗಡೆಯಾದವರ ಸಂಖ್ಯೆ 12,37,124ಕ್ಕೆ ಏರಿಕೆಯಾಗಿದೆ. ನಾಲ್ವರ ಸಾವಿನೊಂದಿಗೆ ಮೃತರಾದವರ ಒಟ್ಟು ಸಂಖ್ಯೆ 16,369ಕ್ಕೆ ಮುಟ್ಟಿದೆ. ನಗರದಲ್ಲಿ ಸದ್ಯ ಸಕ್ರಿಯವಾಗಿರುವ 5,531 ಸೋಂಕಿತ ಪ್ರಕರಣಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ (Hospital) ಚಿಕತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ (Health Department) ವರದಿ ಮಾಹಿತಿ ನೀಡಿದೆ.
ಕಳೆದ ಕೆಲವು ದಿನಗಳಿಂದ ಬಿಬಿಎಂಪಿ (BBMP) ವ್ಯಾಪ್ತಿಯ ಬೆಳ್ಳಂದೂರು ವಾರ್ಡ್ 7, ಎಚ್‌ಎಸ್‌ಆರ್ ಬಡಾವಣೆ 5 ಹಾಗೂ ದೊಡ್ಡಾನೆಕ್ಕುಂದಿ, ಬೇಗೂರು, ಹಗದೂರು, ಹೊರಮಾವು ವಾರ್ಡ್‌ಗಳಲ್ಲಿ ತಲಾ 4 ಮತ್ತು ಉತ್ತರಹಳ್ಳಿ, ಹೆಮ್ಮಿಗೆಪುರ, ಬ್ಯಾಟರಾಯನಪುರ, ಹೂಡಿ ವಾರ್ಡ್‌ಗಳಲ್ಲಿ ತಲಾ 3 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
undefined
ಕಂಟೈನ್ಮೆಂಟ್ ವಲಯ 101ಕ್ಕೆ ಏರಿಕೆ : ಕಳೆದೊಂದು ವಾರದಿಂದ ಪಾಲಿಕೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಕೊರೋನಾ (Corona) ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 52 ಅಪಾರ್ಟ್ ಮೆಂಟ್‌ಗಳನ್ನು ಕಂಟೈನ್ಮೆಂಟ್ ವಲಯವನ್ನಾಗಿ ಮಾಡಲಾಗಿದೆ. ಅಪಾರ್ಟ್ ಮೆಂಟ್‌ಗಳಲ್ಲಿ ಕೋವಿಡ್ ನಿಯಮಗಳ ನಿರಂತರ ಉಲ್ಲಂಘನೆಯಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಇಲ್ಲಿನ ನಿವಾಸಿಗಳ ಸಭೆ, ಸಮಾರಂಭಗಳಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ಜಾಗೃತಿ ವಹಿಸುವಲ್ಲಿ ವಿಫಲವಾಗುತ್ತಿರುವುದು ಕೋವಿಡ್ ಹೆಚ್ಚಲು ಕಾರಣವೆಂಬ ಆರೋಪಗಳು ಕೇಳಿಬಂದಿವೆ.
ಅದೇ ರೀತಿ 48 ಪ್ರತ್ಯೇಕ ಮನೆಗಳು, ಒಂದು ವಿದ್ಯಾರ್ಥಿ ನಿಲಯದಲ್ಲೂ (Hostel) ಸೋಂಕಿತರು ಪತ್ತೆಯಾಗಿದ್ದು, ಮೈಕ್ರೋ ಕಂಟೈನ್ಮೆಂಟ್‌ಗಳನ್ನಾಗಿ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳ ಪೈಕಿ ಬೊಮ್ಮನಹಳ್ಳಿಯಲ್ಲಿ ಅಧಿಕ 34 ಕಂಟೈನ್ಮೆಂಟ್ ವಲಯಗಳನ್ನು ಬಿಬಿಎಂಪಿ ಗುರುತಿಸಿದೆ. ಉಳಿದಂತೆ ದಕ್ಷಿಣ 17, ಮಹದೇವಪುರ 15, ಪೂರ್ವ 15, ಯಲಹಂಕ 8, ಪಶ್ಚಿಮ 7, ದಾಸರಹಳ್ಳಿ ಮತ್ತು ಆರ್‌ಆರ್‌ನಗರದಲ್ಲಿ ತಲಾ 3 ಕಂಟೈನ್ಮೆಂಟ್ ವಲಯಗಳು ಸಕ್ರಿಯವಾಗಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಮತ್ತೊಂದು ಒಮಿಕ್ರಾನ್ : ರಾಜ್ಯದಲ್ಲಿ ಇಂದು(ಡಿ.12) ಹೊಸದಾಗಿ 330 ಜನರಿಗೆ ಕೊರೋನಾ (Cornavirus( ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. 304 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಇನ್ನು ಒಂದು ಒಮಿಕ್ರಾನ್ (Omicron) ಪತ್ತೆಯಾಗಿದೆ.ಈ ಮೂಲಕ ಒಮಿಕ್ರಾನ್ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 30,00,435 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 38,261 ಸೋಂಕಿತರು ಮೃತಪಟ್ಟಿದ್ದಾರೆ. 29,54,817 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 7328 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ. 0.27 ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Covid Vaccination: ಲಸಿಕೆ ನೀಡಿಕೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕರ್ನಾಟಕ
ರಾಜಧಾನಿ ಬೆಂಗಳೂರಿನಲ್ಲಿ ಇಂದು(ಭಾನುವಾರ) ಹೊಸದಾಗಿ 205 ಜನರಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. 147 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5602 ಸಕ್ರಿಯ ಪ್ರಕರಣಗಳು ಇವೆ.
ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ರಾಯಚೂರು, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಭಾನುವಾರ ಯಾವುದೇ ಕೊರೋನಾ ಪ್ರಕರಣ ವರದಿಯಾಗಿಲ್ಲ.
ಜಿಲ್ಲಾವಾರು ಕೊರೋನಾ ಪ್ರಕರಣಗಳ ವಿವರ
ಬಾಗಲಕೋಟೆ 0, ಬಳ್ಳಾರಿ 3, ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 205, ಬೀದರ್ 1, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 2, ಚಿತ್ರದುರ್ಗ 2, ದಕ್ಷಿಣ ಕನ್ನಡ 15, ದಾವಣಗೆರೆ 4, ಧಾರವಾಡ 3, ಗದಗ 0, ಹಾಸನ 5, ಹಾವೇರಿ 1, ಕಲಬುರಗಿ 1, ಕೊಡಗು 40, ಕೋಲಾರ 3, ಕೊಪ್ಪಳ 0, ಮಂಡ್ಯ 5, ಮೈಸೂರು 13, ರಾಯಚೂರು 0, ರಾಮನಗರ 0, ಶಿವಮೊಗ್ಗ 11, ತುಮಕೂರು 5, ಉಡುಪಿ 1, ಉತ್ತರ ಕನ್ನಡ 2, ವಿಜಯಪುರ 1, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.
ಒಮಿಕ್ರಾನ್ 3ನೇ ಪ್ರಕರಣ ಮತ್ತೆ
ಬೆಂಗಳೂರು: ಕರ್ನಾಟಕದಲ್ಲಿ ಒಮಿಕ್ರಾನ್ 3ನೇ ಪ್ರಕರಣ ಭಾನುವಾರ ಪತ್ತೆಯಾಗಿದೆ. ಖುದ್ದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರೇ ಅದನ್ನು ದೃಢಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ oಮಿಕ್ರಾನ್ ಪತ್ತೆಯಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ 5 ಮಂದಿ ಹಾಗೂ ದ್ವಿತೀಯ ಮಟ್ಟದಲ್ಲಿ 15 ಮಂದಿ ಸಂಪರ್ಕಕ್ಕೆ ಬಂದಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಬಂದ 34 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದ್ದು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.