ಬೆಳಗಾವಿ(ಡಿ.14): ಬೆಳಗಾವಿಯ ವಿಧಾನಮಂಡಲ(Belagavi Session) ಅಧಿವೇಶನಕ್ಕೆ ಪರ್ಯಾಯವಾಗಿ ‘ಮಹಾಮೇಳಾವ್’(mahamelava) ನಡೆಸಿ ಪುಂಡಾಟ ಮೆರೆಯಲು ಮುಂದಾಗಿದ್ದ ಎಂಇಎಸ್(MES) ಮುಖಂಡ ದೀಪಕ್ ದಳವಿ ಮುಖಕ್ಕೆ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮಸಿ ಬಳಿದ ಘಟನೆ ಸೋಮವಾರ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಂಇಎಸ್ ಮುಖಂಡರು ಮಂಗಳವಾರ ಬೆಳಗಾವಿ ಬಂದ್‌ಗೆ ಕರೆ(Belagavi Bandh) ನೀಡಿದ್ದಾರೆ. ಅಧಿವೇಶದನ ಮೊದಲ ದಿನವೇ ಬೆಳಗಾವಿ ಹೈಡ್ರಾಮಕ್ಕೆ ಸಾಕ್ಷಿಯಾಗಿದೆ.
ಮೂರು ವರ್ಷಗಳ ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ಮತ್ತೆ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಭಾಷಾ, ಗಡಿ ವಿಚಾರ ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ತಗಾದೆ ತೆಗೆಯುತ್ತಲೇ ಬಂದಿರುವ ಎಂಇಎಸ್ ಮುಖಂಡರು ಜಿಲ್ಲಾಡಳಿತದ ಅನುಮತಿ ಇಲ್ಲದಿದ್ದರೂ ಅಧಿವೇಶನಕ್ಕೆ ಪರಾರಯಯವಾಗಿ ಮಹಾಮೇಳಾವ್ ನಡೆಸಲು ಮುಂದಾಗಿದ್ದರು. ನಗರದ ಟಿಳಕವಾಡಿ ಪ್ರದೇಶದಲ್ಲಿರುವ ವ್ಯಾಕ್ಸಿನ್ ಡೀಪೊದಲ್ಲಿ ರಾತ್ರೋರಾತ್ರಿ ವೇದಿಕೆಯನ್ನೂ ನಿರ್ಮಿಸಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಪಾಲಿಕೆ ಅಧಿಕಾರಿಗಳು ಬಲವಂತವಾಗಿ ವೇದಿಕೆ ತೆರವುಗೊಳಿಸಿದ್ದು, ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿತ್ತು.
Anti Conversion Act: 'ಇದೇ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್ ಆಗುತ್ತೆ'
ಇನ್ನೇನು ಎಲ್ಲರೂ ಸ್ಥಳದಿಂದ ಹೊರಡಬೇಕು ಅನ್ನುವಷ್ಟರಲ್ಲಿ ಸ್ಥಳಕ್ಕಾಗಮಿಸಿದ ಕರ್ನಾಟಕ(Karnataka) ನವ ನಿರ್ಮಾಣ ಪಡೆಯ ಯುವ ಘಟಕದ ಅಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಎಂಇಎಸ್ ಮುಖಂಡ ದೀಪಕ್‌ದಳವಿ ಮೇಲೆ ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದರು. ಆಗ ದಳವಿ ಜತೆಗಿದ್ದ ಮಾಜಿ ಶಾಸಕ ಮನೋಹರ ಕಿಣೇಕರ ಸೇರಿ ಮತ್ತಿಬ್ಬರ ಮೇಲೂ ಮಸಿ(Black Ink) ಎರಚಲ್ಪಟ್ಟಿದೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ, ಸ್ಥಳದಲ್ಲೇ ಇದ್ದ ಪೊಲೀಸರು ಮಸಿ ಎರಚಿದ ಆರೋಪಿಗಳನ್ನು ಬಂಧಿಸಿದರು. ಘಟನೆಗೆ ಸಂಬಂಧಿಸಿ ಕರ್ನಾಟಕ ನವ ನಿರ್ಮಾಣ ಪಡೆದ ಯುವ ಘಟಕದ ಅಧ್ಯಕ್ಷ ಸಂಪತ್ ಕುಮಾರ್ ದೇಸಾಯಿ ಸೇರಿ ಮೂವರ ವಿರುದ್ಧ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Belagavi Assembly Session: ಕಾಂಗ್ರೆಸ್ ಶಾಸಕಿ ನಿಂಬಾಳ್ಕರ್ ನೇತೃತ್ವದಲ್ಲಿ ಸಂಘರ್ಷ ಪಾದಯಾತ್ರೆ
ಮಸಿ ಬಳಿದ ಪ್ರಕರಣ ಖಂಡಿಸಿ ಎಂಇಎಸ್ ಕಾರ್ಯಕರ್ತರು ವ್ಯಾಕ್ಸಿನ್ ಡಿಪೋದಿಂದ ಟಿಳಕವಾಡಿ ಪೊಲೀಸ್ ಠಾಣೆವರೆಗೂ ರಾರಯಲಿ ನಡೆಸಿ ಆಕ್ರೋಶ ಹೊರಹಾಕಿದರು. ಮಸಿ ದಾಳಿ ವಿಚಾರವನ್ನು ಮಹಾರಾಷ್ಟ್ರದಲ್ಲಿರುವ ಎನ್‌ಸಿಪಿ, ಶಿವಸೇನೆ ಮುಖಂಡರ ಗಮನಕ್ಕೆ ತಂದು ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಹಾಲಿನ ಅಭಿಷೇಕ: ಮಸಿ ದಾಳಿಗೆ ತುತ್ತಾದ ದೀಪಕ್ ದಳವಿ, ಕಿಣೇಕರ್ ಮತ್ತಿತರ ಮುಖಂಡರಿಗೆ ಇದೇ ವೇಳೆ ಎಂಇಎಸ್ ಕಾರ್ಯಕರ್ತರು ಹಾಲಿನ ಅಭಿಷೇಕ ನಡೆಸಿದ ಪ್ರಸಂಗವೂ ನಡೆಯಿತು. ಈ ಮಧ್ಯೆ, ಎಂಇಎಸ್ ಮುಖಂಡರು ಮಂಗಳವಾರ ಕರೆ ನೀಡಿರುವ ಬೆಳಗಾವಿ ಬಂದ್‌ಗೆ ಯಾವುದೇ ಅನುಮತಿ ನೀಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವೇದಿಕೆಯೇ ತೆರವು, ಮಹಾಮೇಳಾವ್ ರದ್ದು
ಬೆಳಗಾವಿ: ಬೆಳಗಾವಿ ಅಧಿವೇಶನಕ್ಕೆ ಪರ್ಯಾಯವಾಗಿ ಜಿಲ್ಲಾಡಳಿತದ ಅನುಮತಿ ಇಲ್ಲದೆ ವ್ಯಾಕ್ಸಿನ್ ಡೀಪೋ ಸಮೀಪದ ರಸ್ತೆಯಲ್ಲೇ ವೇದಿಕೆ ನಿರ್ಮಿಸಿ ಸೋಮವಾರ ಮಹಾಮೇಳಾವ್ (ಮಹಾಸಮ್ಮೇಳನ) ಆಯೋಜಿಸಲು ಮುಂದಾಗಿದ್ದ ಎಂಇಎಸ್ ಮುಖಂಡರಿಗೆ ಭಾರೀ ಮುಖಭಂಗವಾಗಿದೆ. ಮಹಾಮೇಳಾವ್‌ಗಾಗಿ ನಿರ್ಮಿಸಿದ್ದ ವೇದಿಕೆಯನ್ನು ಪೊಲೀಸರು ಬಲವಂತವಾಗಿ ತೆರವುಗೊಳಿಸಿದ್ದು, ಅನುಮತಿ ಇಲ್ಲದೆ ಯಾವುದೇ ಸಮಾವೇಶ ನಡೆಸದಂತೆ ಸ್ಪಷ್ಟಎಚ್ಚರಿಕೆಯನ್ನೂ ನೀಡಿದ್ದಾರೆ. ಈ ವೇಳೆ ಪೊಲೀಸರು, ಪಾಲಿಕೆ ಅಧಿಕಾರಿಗಳ ಜತೆ ಎಂಇಎಸ್ ಮುಖಂಡರು ಭಾರೀ ಹೈಡ್ರಾಮವನ್ನೇ ನಡೆಸಿದ್ದು, ಒಂದು ಹಂತದಲ್ಲಿ ವೇದಿಕೆ ಹತ್ತಿ ವಿರೋಧವನ್ನೂ ವ್ಯಕ್ತಪಡಿಸಿದರು. ಆದರೂ ಕೊನೆಗೆæ ಪೊಲೀಸರ ಎಚ್ಚರಿಕೆಗೆ ಅವರು ಮಣಿಯಲೇಬೇಕಾಯಿತು.