ಪುತ್ತಿಗೆ ಸ್ವಾಮೀಜಿ ವಿರುದ್ಧ ದಾವೆ, ವಿದೇಶಕ್ಕೆ ಹೋಗಿದ್ದೆ ತಪ್ಪಾಯ್ತಾ?

By Web Desk  |  First Published May 8, 2019, 6:13 PM IST

ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಸನ್ಯಾಸ ದೀಕ್ಷೆ ನೀಡಿರುವ ಕ್ರಮ ಪ್ರಶ್ನಿಸಿ  ಪೇಜಾವರ ಮಠದಿಂದ ಪೀಠತ್ಯಾಗ ಮಾಡಿದ್ದ ಯತಿ ವಿಶ್ವವಿಜಯರು  ನ್ಯಾಯಾಲಯದ ಮೆಟ್ಟಿಲು ಏರಲಾಗಿದೆ.


ಉಡುಪಿ(ಮೇ. 08)  ಪುತ್ತಿಗೆ ಸ್ವಾಮೀಜಿಯ ಶಿಷ್ಯ ಸ್ವೀಕಾರದ ವಿರುದ್ದ ಉಡುಪಿ ಕೋರ್ಟ್ ನಲ್ಲಿ ದಾವೆ ಹೂಡಲಾಗಿದೆ. ಪುತ್ತಿಗೆ ಮಠದ ಸ್ವಾಮೀಜಿ ಸುಗುಣೇಂದ್ರ ತೀರ್ಥರು ಮಾಡಿದ್ದ ವಿದೇಶಯಾನಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೇಜಾವರ ಮಠದಿಂದ ಪೀಠತ್ಯಾಗ ಮಾಡಿದ್ದ ಯತಿ ವಿಶ್ವವಿಜಯರು  ದೂರು ದಾಖಲಿಸಿದ್ದಾರೆ.

ವಿದೇಶಯಾನ ಮಾಡಿದ್ದರಿಂದ ಸುಗುಣೇಂದ್ರ ತೀರ್ಥರಿಗೆ ಸನ್ಯಾಸ ದೀಕ್ಷೆ ಕೊಡುವ ಅಧಿಕಾರ ಇಲ್ಲ. ಸಾಫ್ಟ್ ವೇರ್ ಇಂಜಿನಿಯರ್ ಯುವಕನನ್ನು ಉತ್ತರಾಧಿಕಾರಿ ಮಾಡಿದ್ದು ಸರಿಯಲ್ಲ. ಇಂಜಿನಿಯರಿಂಗ್ ಕಲಿತ ಪ್ರಶಾಂತ ಆಚಾರ್ಯ ಗೆ ಸನ್ಯಾಸ ದೀಕ್ಷೆ ನೀಡಿದ್ದನ್ನು ಪ್ರಶ್ನಿಸಿ ದೂರು ದಾಖಲಿಸಿದ್ದಾರೆ.

Latest Videos

undefined

ಉಡುಪಿ ಪುತ್ತಿಗೆ ಮಠಕ್ಕೆ ಉತ್ತರಾಧಿಕಾರಿ ನೇಮಕ:  ಶ್ರೀ ಸುಗುಣೇಂದ್ರ ತೀರ್ಥರಿಂದ ಶಿಷ್ಯ ಸ್ವೀಕಾರ

ಸನ್ಯಾಸ ಸ್ವೀಕರಿಸಿದ ವ್ಯಕ್ತಿ ವೇದ, ವೇದಾಂತ, ತರ್ಕ, ವ್ಯಾಕರಣ, ಸಂಸ್ಕೃತ ಅಧ್ಯಯನ ಮಾಡಿಲ್ಲ ಉತ್ತರಾಧಿಕಾರಿಯಾಗುವ ಮೂಲಭೂತ ಅರ್ಹತೆಯೇ ಇಲ್ಲ ಎಂದು ಹೇಳಿದ್ದು ಸನ್ಯಾಸ ಸ್ವೀಕರಿಸಿರುವ  ಸುಶ್ರೀಂದ್ರ ತೀರ್ಥ (ಪ್ರಶಾಂತ ಆಚಾರ್ಯ) ಅನರ್ಹತೆ ಮಾಡಬೇಕು ಎಂದು  ಆಗ್ರಹಿಸಿದ್ದಾರೆ.


 

click me!