ಚಿಂಚೋಳಿ ಉಪಚುನಾವಣೆಯ ಪ್ರಚಾರದ ನಡುವೆಯೂ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಎಂ.ಡಿ ಮೆಡಿಸಿನ್ ಪರೀಕ್ಷೆ ಎದುರಿಸಿದರು. ಪರೀಕ್ಷೆ ಬಳಿಕ ಅವಿನಾಶ್ ಜಾಧವ್ ಹಲವು ವಿಷಯಗಳ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಹಾಗಾದ್ರೆ ಏನೆಲ್ಲ ಹೇಳಿದ್ದಾರೆ ನೋಡಿ.
ಕಲಬುರಗಿ, (ಮೇ.08): ಚಿಂಚೋಳಿ ಉಪಚುನಾವಣೆಯ ಪ್ರಚಾರದ ನಡುವೆಯೂ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಎಂ.ಡಿ ಮೆಡಿಸಿನ್ ಪರೀಕ್ಷೆ ಎದುರಿಸಿದರು.
ಅಬ್ಬರದ ಪ್ರಚಾರದಿಂದ ಕೊಂಚಬಿಡುವು ಮಾಡಿಕೊಂಡ ಅವಿನಾಶ್ ಜಾಧವ್, ಇಂದು (ಬುಧವಾರ) ಕಲಬುರಗಿಯ ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದರು.
ಜಾಧವ್‌ಗೆ ಸೆಡ್ಡು; ಕಾಂಗ್ರೆಸ್‌ನಿಂದ ಸೀಕ್ರೆಟ್ ರಣತಂತ್ರ!
ಪರೀಕ್ಷೆ ಮುಗಿಸಿ ಹೊರಬಂದ ನಂತರ ಸುವರ್ಣ ನ್ಯೂಸಗೆ ಅವಿನಾಶ ಜಾಧವ್ ಪ್ರತಿಕ್ರಿಯಿಸಿದ್ದು, ತಂದೆಯವರ ಲೋಕಸಭಾ ಚುಮಾವಣೆಯ ಕಾರಣ ಓದಲು ಆಗಿರಲಿಲ್ಲ. ಆದ್ರೂ ಅಟೆಮ್ಟ್ ಮಾಡಿದ್ದೇನೆ. ಮುಂದೆ ಇನ್ನೂ ಮೂರು ಪತ್ರಿಕೆಯ ಪರೀಕ್ಷೆ ಇದೆ ಎಂದರು.
ರಾಜಕೀಯ ಪರೀಕ್ಷೆಗೆಯೇ ಈಗ ಹೆಚ್ಚು ಆದ್ಯತೆ ಕೊಟ್ಟಿದ್ದು, ಚಿಂಚೋಳಿ ಉಪಚುನಾವಣೆಯ ಅಗ್ನಿ ಪರೀಕ್ಷೆ ಸದ್ಯ ಮಹತ್ವದ್ದಾಗಿದೆ. ನಮ್ಮ ತಂದೆಯವರು ಮಾಡಿರುವ ಜನ ಸೇವೆ ನನಗೆ ಅಲ್ಲಿ ನೆರವಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅವಿನಾಶ್ ಜಾಧವ್ ಅವರು ಕಲಬುರಗಿಯ ಕೆಬಿಎನ್ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಡಿ ಓದುತ್ತಿದ್ದಾರೆ. ಮತ್ತೊಂದೆಡೆ ಚಿಂಚೋಳಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.