ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ದಂಪತಿ

Suvarna News   | Asianet News
Published : Jan 19, 2021, 03:25 PM IST
ಇಬ್ಬರು ಮಕ್ಕಳೊಂದಿಗೆ  ಆತ್ಮಹತ್ಯೆಗೆ ಶರಣಾದ ದಂಪತಿ

ಸಾರಾಂಶ

ದಂಪತಿ ತಮ್ಮಿಬ್ಬರು ಪುಟ್ಟ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. 

ಬೆಳಗಾವಿ (ಜ.19): ಇಬ್ಬರು ಮಕ್ಕಳ ಜೊತೆ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. 

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ತಮ್ಮಿಬ್ಬರು ಪುಟ್ಟ ಮಕ್ಕಳೊಂದಿಗೆ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಂಪತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ಮೃತರನ್ನು ಪ್ರವೀಣ್ ಶೆಟ್ಟರ್ (37), ಪತ್ನಿ ರಾಜೇಶ್ವರಿ (27), ಮಕ್ಕಳಾದ 8 ವರ್ಷದ ಅಮೃತಾ, 6 ವರ್ಷದ ಅದ್ವಿಕ್ ಎಂದು ಗುರುತಿಸಲಾಗಿದೆ. 

ಗುಂಡಿಗೆ ಗಟ್ಟಿ ಇದ್ರೆ ಮಾತ್ರ ನೋಡಿ : ನೋಡ ನೋಡುತ್ತಿದ್ದಂತೆ ನಡೆದೇಹೋಯ್ತು ಆತ್ಮಹತ್ಯೆ ..

ರಾಮದುರ್ಗ ಪಟ್ಟಣದಲ್ಲಿ ಗೊಬ್ಬರದ ಮಳಿಗೆ ಹೊಂದಿದ್ದ ರಮೇಶ್ ಶೆಟ್ಟರ್ ಅವರು ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ತಿಳಿದು ಬಂದಿಲ್ಲ.  

ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಈ ಘಟನೆ ನಡೆದಿದೆ. 

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು