ಸ್ನೇಹಿತನಿಗೆ ಕೊರೋನಾ ಸೋಂಕು ತಗುಲಿಸಿದ ಕುಚುಕು ಗೆಳೆಯ

Published : Apr 20, 2020, 12:29 PM IST
ಸ್ನೇಹಿತನಿಗೆ ಕೊರೋನಾ ಸೋಂಕು ತಗುಲಿಸಿದ ಕುಚುಕು ಗೆಳೆಯ

ಸಾರಾಂಶ

ವಿಜಯಪುರದಲ್ಲಿ ಮೂರು ಕುಟುಂಬಗಳಲ್ಲಿಯೇ ಇದ್ದ ಕೊರೋನಾ ಈಗ ನಾಲ್ಕನೇ ಕುಟುಂಬಕ್ಕೂ ಆವರಿಸಿದೆ|  ಪಿ.362ರ 60 ವರ್ಷದ ರೋಗಿ ಮತ್ತು ಈ ಮೊದಲೇ ಅಸುನೀಗಿರುವ ಪಿ.257ರ 69 ವರ್ಷದ ವ್ಯಕ್ತಿ ಇಬ್ಬರೂ ಕುಚುಕು ಗೆಳೆಯರಾಗಿದ್ದರು|

ವಿಜಯಪುರ(ಏ.20): ನಗರದಲ್ಲಿ ಕೊರೋನಾ ರುದ್ರನರ್ತನ ಮಾಡುತ್ತಿದೆ. ಇದುವರೆಗೆ ಸಂಬಂಧದಲ್ಲಿಯೇ ಇದ್ದ ಕೊರೋನಾ ಈಗ ಸ್ನೇಹಿತರನ್ನೂ ವ್ಯಾಪಿಸಿದೆ. ಈ ಮೂಲಕ ಇದುವರೆಗೆ ಕೇವಲ ಮೂರು ಕುಟುಂಬಗಳಲ್ಲಿಯೇ ಇದ್ದ ಕೊರೋನಾ ಈಗ ನಾಲ್ಕನೇ ಕುಟುಂಬವನ್ನು ಆವರಿಸಿದಂತಾಗಿದೆ.

ವಿಜಯಪುರದಲ್ಲಿ ಶನಿವಾರ ಪತ್ತೆಯಾದ ಪಿ.362ರ 60 ವರ್ಷದ ರೋಗಿ ಮತ್ತು ಈ ಮೊದಲೇ ಅಸುನೀಗಿರುವ ಪಿ.257ರ 69 ವರ್ಷದ ವ್ಯಕ್ತಿ ಇಬ್ಬರೂ ಕುಚುಕು ಗೆಳೆಯರಾಗಿದ್ದರು. ಪಿ.221ರ ವೃದ್ಧೆಯಿಂದ ಸೋಂಕಿತನಾಗಿದ್ದ ಪಿ.257 ವೃದ್ಧ ಏ.13ರಂದೇ ಅಸುನೀಗಿದ್ದ. 

ಕೊರೋನಾ ಸೋಂಕಿತರ ಮೊಬೈಲ್ ಸೀಜ್ ಮಾಡಿದ ಪೊಲೀಸರು..!

ಈ ವೃದ್ಧ ಪಿ.362ರ 60 ವರ್ಷದ ವೃದ್ಧನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಆತನಿಗೂ ಆತ್ಮೀಯ ಗೆಳೆಯನೇ ಸೋಂಕು ತಗುಲಿಸಿ ಹೋಗಿದ್ದಾನೆ. ಹೀಗಾಗಿ ಸೋಂಕಿತ ಎಂಬ ದೃಢಪಟ್ಟ ಹಿನ್ನೆಲೆಯಲ್ಲಿ ಪಿ.362 ವೃದ್ಧನಿಗೆ ಈಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 

PREV
click me!

Recommended Stories

ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ಕೊಟ್ಟಿದ್ದ ವೈದ್ಯನ ಮೇಲಿನ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್!
ಬೆಂಗಳೂರಿನಲ್ಲಿ ಭಾರತ-ವೆಸ್ಟ್ ಇಂಡೀಸ್ ಪಂದ್ಯ ವೀಕ್ಷಿಸುವವರಿಗೆ ಗುಡ್‌ನ್ಯೂಸ್; ಮುಂಜಾನೆ 1.30ರವರೆಗೆ ಮೆಟ್ರೋ ಸಂಚಾರ!