ಹಸುವಿಗೆ ಇದ್ದಷ್ಟು ಬುದ್ಧಿ ಮನುಷ್ಯನಿಗೆ ಇದ್ದಿದ್ರೇ ಕೊರೋನಾ ನಮ್ಮತ್ರ ಬರ್ತಿರಲಿಲ್ವೇನೋ..?

By Kannadaprabha News  |  First Published Apr 20, 2020, 12:17 PM IST

ಸಾಮಾಜಿಕ ಅಂತರ ಕಾಯ್ದುಕೊಂಡು ಮಾದರಿಯಾದ ದೇವರ ಗೂಳಿ| ಬಸವನಾಡಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡ ಬಸವನ ಪೋಟೋ ವೈರಲ್| ಕಿರಾಣಿ ಮುಂದೆ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡ ಬಸವ(ಗೂಳಿ)|ಲಾಕ್‌ಡೌನ್ ಹಿನ್ನೆಲೆ ತಿಂಡಿ ತಿನಿಸಿಗಾಗಿ ಕಿರಾಣಿ ಮುಂದೆ ನಿಂತ ಹಸು|


ಬಸವನಬಾಗೇವಾಡಿ(ಏ.20): ಹಲವು ಬಾರಿ ಮನವಿ ಮಾಡಿಕೊಂಡರೂ ಸಾರ್ವಜನಿಕರು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವಳ್ಳಿ ಅನೇಕ ಕಡೆ ವಿಫರಾಗುತ್ತಿದ್ದಾರೆ. ಆದರೆ ಬಸವನಾಡಿನಲ್ಲಿ ದೇವರ ಹಸುವೊಂದು ಸಾಮಾಜಿಕ ಅಂತರ ಕಾಯ್ದುಕೊಂಡು ಕಿರಾಣಿ ಅಂಗಡಿ ಮುಂದೆ ನಿಂತಿರುವ ವಿಡಿಯೋವೊಂದು ವೈರಲ್ ಆಗಿದೆ. 

ಬಸವನಬಾಗೇವಾಡಿ ಪಟ್ಟಣದ ಕಿರಾಣಿ ಅಂಗಡಿಯೊಂದರ ಮುಂಭಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗಲು ರಚನೆ ಮಾಡಲಾಗಿರುವ ನಿರ್ಧಿಷ್ಟ ಬಾಕ್ಸ್‌ನಲ್ಲಿಯೇ ಹಸು ನಿಲ್ಲುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಜನರಿಗೆ ಸಂದೇಶ ನೀಡಿದೆ.

Tap to resize

Latest Videos

undefined

ವಿಜಯಪುರದಲ್ಲಿ ಐವರ ಮೇಲೆ ಕೊರೋನಾ ಪಾಸಿಟೀವ್ ಶಂಕೆ; ಹೋಂ ಕ್ವಾರಂಟೈನ್‌ನಲ್ಲಿ

ಈ ರೀತಿ ಶಿಶ್ತುಬದ್ಧವಾಗಿ ನಿಂತು ಸಾಮಾಜಿಕ ಅಂತರ ಮಾಡುತ್ತಿರುವ ಹಸುವಿನ ಫೊಟೋವನ್ನು ಕ್ಲಿಕ್ಕಿಸಿದ್ದು, ಈ ಫೋಟೋ ಹಾಗೂ ವಿಡಿಯೋ ಹೆಚ್ಚು ಶೇರ್‌ ಆಗುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದೆ. 
 

click me!