ಗಬ್ಬದ ಹಸು ಕಾಲು ಕಡಿದು ಕಸಾಯಿಖಾನೆಗೆ ಸಾಗಿಸಲು ಯತ್ನಿಸಿದ ಪಾಪಿ

By Kannadaprabha News  |  First Published Apr 20, 2020, 11:53 AM IST

ಗಬ್ಬದ ಹಸು ಕಾಲು ಕಡಿದು ಕಾರಿನಲ್ಲಿ ಸಾಗಿಸಲು ಯತ್ನ| ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದ ಘಟನೆ| ಹಸುವನ್ನ ಕಸಾಯಿಖಾನೆಗೆ ಸಾಗಿಸಲು ಯತ್ನಿಸಿ ಆರೋಪಿಯನ್ನ ಬಂಧಿಸಿದ ಪೊಲೀಸರು|


ತೀರ್ಥಹಳ್ಳಿ(ಏ.20): ಗಬ್ಬದ ಹಸು ಕಾಲು ಕಡಿದು ಕಾರಿನಲ್ಲಿ ಸಾಗಿಸಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಕಸಾಯಿಖಾನೆಗೆ ಸಾಗಿಸಲು ಶುಕ್ರವಾರ ರಾತ್ರಿ ಪಟ್ಟಣದ ಬಾಳೇಬೈಲು ಸರ್ಕಾರಿ ಶಾಲೆಯ ಹತ್ತಿರ ಹಸುವಿನ ಕಾಲು ಕಡಿದು ಮಾರುತಿ ರಿಟ್ಜ್‌ ಕಾರಿಗೆ ತುಂಬಿಸಲು ಯತ್ನಿಸಿದ್ದರು.

Tap to resize

Latest Videos

ಶಿವಮೊಗ್ಗದ ಮೆಗ್ಗಾನ್‌ನಲ್ಲಿ 50 ವೆಂಟಿಲೇಟರ್‌ ಸೌಲಭ್ಯ: ಸಂಸದ B Y ರಾಘವೇಂದ್ರ

ಸಾರ್ವಜನಿಕರು ಸ್ಥಳಕ್ಕೆ ತಕ್ಷಣವೇ ಧಾವಿಸಿದ್ದರಿಂದ ದನದ ಕಾಲು ಕಡಿದವರು ತಮ್ಮ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಸಿದ್ದೇಶ್ವರ ಬಡಾವಣೆಯ ಸಲೀಂ (36)ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
 

click me!