
ಪಾಂಡವಪುರ (ಆ.26): ಕೊರೋನಾಗೆ ಹೆದರಿ ವ್ಯಕ್ತಿಯೊಬ್ಬ ನಾಲೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದ ಹಾರೋಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಚಿಕ್ಕಣ್ಣ(60) ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಮೂರು ದಿನಗಳ ಹಿಂದೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಕೊರೋನಾ ಪರೀಕ್ಷೆಗೊಳಪಟ್ಟಿದ್ದು, ಸೋಮವಾರ ಫಲಿತಾಂಶ ಬರುವುದಿತ್ತು. ಅಲ್ಲದೇ ಚಿಕ್ಕಣ್ಣ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದರು.
ರಾಜ್ಯದಲ್ಲಿ ದಿನಕ್ಕೆ 1 ಲಕ್ಷ ಕೋವಿಡ್ ಪರೀಕ್ಷೆ ನಡೆಸಲು ಶಿಫಾರಸು...
ಆದರೆ, ನನಗೆ ಕೊರೋನಾ ಸೋಂಕು ತಗಲಿರಬಹುದು ಎಂಬ ಭಯದಿಂದ ಚಿಕ್ಕಣ್ಣ ವರದಿ ಬರುವುದಕ್ಕೂ ಮುನ್ನವೇ ಗ್ರಾಮದ ವಿಶ್ವೇಶ್ವರಯ್ಯನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದೇ ದಿನ 8 ಸಾವಿರ ದಾಟಿದ ಪಾಸಿಟಿವ್ ಕೇಸ್ : ಸಾವಲ್ಲೂ ದಾಖಲೆ...
ವರದಿ ಬರುವ ಮುನ್ನವೇ ಕೊರೋನಾಘೆ ಹೆದರಿ ಅನೇಕರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದು, ಮಂಡ್ಯದ ಈ ವೃದ್ಧ ಆತ್ಮಹತ್ಯೆಗೆ ಶರಣಾಗಿದ್ದಾನೆ.