ರಾಜೇಂದ್ರ ಶ್ರೀಗಳ ಜಯಂತಿ : ಮೃಗಾಲಯಕ್ಕೆ 1 ಲಕ್ಷ ರು. ದೇಣಿಗೆ

Sujatha NR   | Asianet News
Published : Aug 26, 2020, 07:14 AM IST
ರಾಜೇಂದ್ರ ಶ್ರೀಗಳ ಜಯಂತಿ : ಮೃಗಾಲಯಕ್ಕೆ 1 ಲಕ್ಷ ರು. ದೇಣಿಗೆ

ಸಾರಾಂಶ

ಸುತ್ತೂರು ಜಗದ್ಗುರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 105ನೇ ಜಯಂತಿಯ ಮೈಸೂರು ಮೃಗಾಲಯಕ್ಕೆ ಒಂದು ಲಕ್ಷ ದೇಣಿಗೆ ನೀಡಲಾಗುತ್ತಿದೆ.

ಮೈಸೂರು (ಆ.26): ಸುತ್ತೂರು ಜಗದ್ಗುರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 105ನೇ ಜಯಂತಿಯು ಆ.29ರಂದು ನೆರವೇರಲಿದ್ದು, ಅಂದು ಮೈಸೂರು ಮೖಗಾಲಯದ ಪಶು- ಪಕ್ಷಿಗಳ ಆಹಾರದ ನಿರ್ವಹಣೆಗಾಗಿ ಶ್ರೀಮಠದಿಂದ 1 ಲಕ್ಷ ರು. ಮೊತ್ತದ ಚೆಕ್‌ ಅನ್ನು ಮೃಗಾಲಯಕ್ಕೆ ನೀಡಲಾಗಿದೆ.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರಿಗೆ ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ ಚೆಕ್‌ ಹಸ್ತಾಂತರಿಸಿದರು. 

ಮೈಸೂರಿನ ಮೃಗಾಲಯಕ್ಕೆ 10 ವರ್ಷಗಳಿಂದಲೂ ರಾಜೇಂದ್ರ ಶ್ರೀಗಳ ಜಯಂತಿಯಂದು ಮೖಗಾಲಯದ ಪಶು-ಪಕ್ಷಿಗಳ ಆಹಾರದ ನಿರ್ವಹಣೆಗಾಗಿ 1 ಲಕ್ಷ ರು. ನೀಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಪ್ರೊ.ಮೊರಬದ ಮಲ್ಲಿಕಾರ್ಜುನ, ಬಿ.ನಿರಂಜನಮೂರ್ತಿ ಇದ್ದರು.
 

PREV
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ