ತಲಕಾವೇರಿ ಭೂ ಕುಸಿತದಲ್ಲಿ ಮೃತಪಟ್ಟ ನಾರಾಯಣಾಚಾರ ಪುತ್ರಿಯನ್ನು ಬಂದಿದ್ದ ಪರಿಹಾರದ ಚೆಕ್ಕನ್ನು ವಾಪ್ ಕೊಟ್ಟಿದ್ದಾರೆ.
ಮಡಿಕೇರಿ (ಆ.26): ಹೆಸರು ಬದಲಾವಣೆ ಗೊಂದಲದ ಹಿನ್ನೆಲೆಯಲ್ಲಿ, ತಲಕಾವೇರಿಯ ಗಜಗಿರಿ ಭೂಕುಸಿತದಲ್ಲಿ ಮೃತಪಟ್ಟತಲಕಾವೇರಿಯ ಅರ್ಚಕ ನಾರಾಯಣಾಚಾರ್ ಅವರ ಪುತ್ರಿಯರಿಗೆ ನೀಡಲಾದ ಪರಿಹಾರ ಚೆಕನ್ನು ಅವರು ಹಿಂತಿರುಗಿಸಿದ್ದಾರೆ.
ತಲಕಾವೇರಿಯಲ್ಲಿ ಆ.5ರಂದು ಸಂಭವಿಸಿದ ಭೂಕುಸಿತದಲ್ಲಿ ನಾರಾಯಣಾಚಾರ್ ಮೃತಪಟ್ಟಿದ್ದರು. ಅವರ ಇಬ್ಬರು ಪುತ್ರಿಯರಿಗೆ ಆ.15ರಂದು ತಲಾ 2.5 ಲಕ್ಷ ಪರಿಹಾರ ಚೆಕ್ ವಿತರಿಸಲಾಗಿತ್ತು.
ನಾರಾಯಣಾಚಾರ್ ಪುತ್ರಿಯರು ಅನ್ಯ ಧರ್ಮಕ್ಕೆ ಮತಾಂತರವಾದ ಹಿನ್ನೆಲೆಯಲ್ಲಿ ಹೆಸರು ಬದಲಾವಣೆಯಾಗಿದೆ. ವಿದೇಶದಿಂದ ಬಂದಿದ್ದ ಪುತ್ರಿಯರು ತಮ್ಮ ಪಾಲಕರು ನಾಪತ್ತೆಯಾಗಿರುವ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಗೆ ದೂರು ನೀಡಿದ್ದ ದೂರಿನಲ್ಲಿ ಶಾರದಾ ಆಚಾರ್, ನಮಿತಾ ಆಚಾರ್ ಎಂದು ನಮೂದಿಸಿದ್ದರು.
ಆಪರೇಷನ್ ಬ್ರಹ್ಮಗಿರಿ: ಕೊಚ್ಚಿ ಹೋದವರ ಮತ್ತೊಂದು ಮೃತದೇಹ ಪತ್ತೆ
ಈ ಹೆಸರಿಗೆ ಜಿಲ್ಲಾಡಳಿತ ಚೆಕ್ ನೀಡಿತ್ತು. ಪುತ್ರಿಯರು ಚೆಕ್ಕನ್ನು ಭಾಗಮಂಡಲ ನಾಡ ಕಚೇರಿಗೆ ಹಿಂತಿರುಗಿಸಿ ನಮಿತಾ ನಜೇರತ್, ಶೆನೋನ್ ಫರ್ನಾಂಡಿಸ್ ಹೆಸರಿಗೆ ಚೆಕ್ ನೀಡುವಂತೆ ಮನವಿ ಮಾಡಿದ್ದಾರೆ. ಮೂಲ ಹೆಸರು ಕಾನೂನುಬದ್ಧವಾಗಿ ಬದಲಾಗಿರುವುದಕ್ಕೆ ದಾಖಲೆ ಸಲ್ಲಿಸುವಂತೆ ಉಪ ತಹಸೀಲ್ದಾರ್ ಸೂಚನೆ ನೀಡಿದ್ದಾರೆ.
ಚೆಕ್ ವಾಪಸ್ ನೀಡಿರುವುದು ಗಮನಕ್ಕೆ ಬಂದಿದೆ. ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಚೆಕ್ಕನ್ನು ನಾರಾಯಣಾಚಾರ್ ಮಕ್ಕಳಿಗೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.
ಪರಿಹಾರಕ್ಕಾಗಿ ಅತ್ತೆಯೊಂದಿಗೆ ಜಗಳವಾಡಿದ ಪುತ್ರಿಯರು:
ಕೊಡಗು ಜಿಲ್ಲೆ ತಲಕಾವೇರಿಯಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಮೃತಪಟ್ಟಿದ್ದ ಪ್ರಧಾನ ಅರ್ಚಕ ನಾರಾಯಣಾಚಾರ್ ಹಾಗೂ ಅವರ ಸಹೋದರ ಆನಂದ ತೀರ್ಥ ಸ್ವಾಮೀಜಿ ಇವರಿಬ್ಬರ ಕುಟುಂಬದವರಿಗೆ ಹಂಚಿದ್ದ ಪರಿಹಾರ ಹಣದಲ್ಲಿ ನಮಗೂ ಶೇ.50ರಷ್ಟು ಪಾಲು ಬರಬೇಕೆಂದು ನಾರಾಯಣಾಚಾರ್ ಅವರ ಮಕ್ಕಳು ಸೋದರ ಅತ್ತೆ ಸುಶೀಲಾ ಅವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದಾರೆ.
ನಾರಾಯಣಾಚಾರ್ ಅಣ್ಣರಾದ ಆನಂದ ತೀರ್ಥರು ಬ್ರಹ್ಮಚಾರಿ ಆಗಿದ್ದರಿಂದ ಅವರ ಪರಿಹಾರದ ಹಣವನ್ನು ಸಹೋದರಿ ಸುಶೀಲಾರಿಗೆ ನೀಡಲಾಗಿತ್ತು. ಹಾಗೆಯೇ ನಾರಾಯಣಾಚಾರ್ ಇಬ್ಬರು ಹೆಣ್ಣು ಮಕ್ಕಳಿಗೆ ಶನಿವಾರ ತಲಾ 2.5 ಲಕ್ಷ ರು. ಪರಿಹಾರ ಚೆಕ್ ವಿತರಿಸಲಾಗಿತ್ತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಾರಾಯಣಾಚಾರ್ ಮಕ್ಕಳು ಆನಂದ ತೀರ್ಥ ಅವರನ್ನು ನಾವೇ ನೋಡಿಕೊಂಡಿದ್ದೆವು. ಹೀಗಾಗಿ ಸುಶೀಲಾರಿಗೆ ಪರಿಹಾರದ ಚೆಕ್ ನೀಡಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಅರ್ಚಕರ ಮನೆಯಲ್ಲಿತ್ತಂದೆ 30 ಲಕ್ಷ ಕ್ಯಾಶ್
ಆ.5ರಂದು ರಾತ್ರಿ ಭಾರಿ ಮಳೆಯಿಂದ ಭೂಕುಸಿತ ಸಂಭವಿಸಿ ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣಾಚಾರ್ ಸೇರಿದಂತೆ ಐವರು ಭೂಸಮಾಧಿಯಾಗಿದ್ದರು. ಎರಡು ದಿನ ಕಾರ್ಯಾಚರಣೆ ಆರಂಭಿಸಲು ಮಳೆ ಅಡ್ಡಿಯಾಗಿತ್ತು. ನಂತರ ಸತತವಾಗಿ ನಡೆದ ಕಾರ್ಯಾಚರಣೆ ಬಳಿಕ ನಾರಾಯಣಾಚಾರ್, ಆನಂದ ತೀರ್ಥ, ರವಿ ಕಿರಣ್ ಸಹಿತ ಮೂವರ ಮೃತದೇಹಗಳು ಪತ್ತೆಯಾಗಿದ್ದವು.
ಭೂಕುಸಿತ ಉಂಟಾಗಿ 16 ದಿನವಾದರೂ ಕಣ್ಮರೆಯಾಗಿರುವ ಇನ್ನಿಬ್ಬರ ಸುಳಿವು ಸಿಕ್ಕಿಲ್ಲ. ಮಳೆ ಹಾಗೂ ಮಂಜಿನ ವಾತಾವರಣದಲ್ಲಿ ಕಾರ್ಯಾಚರಣೆ ಸಹ ಕಷ್ಟಕರವಾಗಿತ್ತು. ನಾರಾಯಣ ಆಚಾರ್ ಅವರ ಪತ್ನಿ ಶಾಂತಾ ಹಾಗೂ ಶ್ರೀನಿವಾಸ್ ಅವರ ಸುಳಿವು ಸಿಗಲೇ ಇಲ್ಲ. 16 ದಿನಗಳ ಕಾಲ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್, ಅಗ್ನಿ ಶಾಮಕ, ಅರಣ್ಯ ಇಲಾಖೆ ಹಾಗೂ ಹೋಂ ಗಾರ್ಡ್ಸ್ ಸೇರಿ ಸುಮಾರು 100ಕ್ಕೂ ಅಧಿಕ ಮಂದಿಯ ಸಹಯೋಗ ಹಾಗೂ ಮೂರು ಹಿಟಾಚಿ ಬಳಸಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿತ್ತು. ಆದರೆ ಇಬ್ಬರ ಪತ್ತೆ ಸಾಧ್ಯವಾಗಿಲ್ಲ. ಆದ್ದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಲು ಸರ್ಕಾರಕ್ಕೆ ಪತ್ರ ಬರೆಯಲು ಜಿಲ್ಲಾಡಳಿತ ನಿರ್ಧರಿಸಿತ್ತು.
ಪರಿಹಾರದ ಚೆಕ್‌ಗಾಗಿ ಕುಟುಂಬಸ್ಥರ ನಡುವೆ ಕಾದಾಟ!