ಮೈಸೂರು ಜಿಲ್ಲಾ ಪೊಲೀಸರಿಗೆ ತಲೆ ನೋವಾದ ಕೊರೋನಾ ಪಾಸಿಟಿವ್| ಸೋಂಕಿತನ ಸಂಪರ್ಕದಲ್ಲಿದ್ದ ಎಲ್ಲರ ಗಂಟಲು ದ್ರವ ಸಂಗ್ರಹಣೆ ಮಾಡಿ ಪರೀಕ್ಷೆಗೆ ಕಳುಹಿಸಿ, ಕ್ವಾರಂಟೈನ್| ಎಸ್.ಪಿ. ರಿಷ್ಯಂತ್ ಸೇರಿ 36 ಜನರು ಸೆಕೆಂಡರಿ ಸಂಪರ್ಕ|
ಮೈಸೂರು(ಜೂ.22): ಜಿಲ್ಲೆಯ ನಂಜನಗೂಡು ಗ್ರಾಮಾಂತರ ಠಾಣೆಯ ಕಾನ್ಸ್‌ಟೇಬಲ್‌ವೊಬ್ಬರಿಗೆ ಮಹಾಮಾರಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಮೈಸೂರು ಜಿಲ್ಲಾ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
ವಿಶೇಷ ತನಿಖಾ ತಂಡದಲ್ಲಿದ ಸೋಂಕಿತ ಕಾನ್ಸಟೇಬಲ್ ಅಡಿಷನಲ್ ಎಸ್‌ಪಿ ಸ್ನೇಹಾ ಸೇರಿ 22 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಸೋಂಕಿತನ ಸಂಪರ್ಕದಲ್ಲಿದ್ದ ಎಲ್ಲರ ಗಂಟಲು ದ್ರವ ಸಂಗ್ರಹಣೆ ಮಾಡಿ ಪರೀಕ್ಷೆಗೆ ಕಳುಹಿಸಿ, ಕ್ವಾರಂಟೈನ್ ಮಾಡಲಾಗಿದೆ.
undefined
ಆಸ್ತಿಗಾಗಿ ಕಲಹ: ಹೊಲದಲ್ಲಿ ಕೆಲಸ ಮಾಡ್ತಿದ್ದ ಅಣ್ಣನನ್ನು ಕೊಂದ ತಮ್ಮ
ಇನ್ನೂ ಸೋಂಕಿತ ಕಾನ್ಸ್‌ಟೇಬಲ್ ಎಸ್.ಪಿ. ರಿಷ್ಯಂತ್ ಸೇರಿ 36 ಜನರು ಸೆಕೆಂಡರಿ ಸಂಪರ್ಕ ಹೊಂದಿದ್ದಾರೆ. ಸೋಂಕಿತ ಪೇದೆ ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಠಾಣೆಯ ಬುಲೆಟ್ ನಾಪತ್ತೆ ಪ್ರಕರಣದ ತನಿಖೆಯಲ್ಲಿದ್ದರು. ಇದೀಗ ಪೇದೆಗೆ ಮಹಾಮಾರಿ ಕೊರೋನಾ ಸೋಂಕು ಅಂಟಿದ್ದರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಆತಂಕ ಎದರಾಗಿದೆ.
ಮೈಸೂರು ಐಜಿ, ಎಸ್‌ಪಿ ಕಚೇರಿಗೆ ವಕ್ಕರಿಸಿದ ಕೊರೋನಾ
ಐಜಿಪಿ(ದಕ್ಷಿಣ ವಲಯ) ವಿಪುಲ್‌ಕುಮಾರ್, ಎಸ್‌ಪಿ ರಿಷ್ಯಂತ್ ಹಾಗೂ ಎಎಸ್‌ಪಿ ಸ್ನೇಹ ಅವರನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಪೇದೆಗೆ ಕೊರೋನಾ ಸೋಂಕು ದೃಢಪಡುತ್ತಿದ್ದಂತೆ ಎಸ್‌ಪಿ ಕಚೇರಿಯ 18 ಸಿಬ್ಬಂದಿಗಳಿಗೆ ರಜೆ ಕೊಡಲಾಗಿದೆ.ಅಧಿಕಾರಿಗಳು ಸದ್ಯ ಮನೆಯಿಂದಲೇ ಜಿಲ್ಲೆಯ ಕಾನೂನು ಸುವ್ಯವಸ್ಥೆ ಪಾಲಿಸುತ್ತಿದ್ದಾರೆ.
ಈ ಸಂಬಂಧ ಮಹಾನಗರ ಪಾಲಿಕೆ ಇಡೀ ಕಟ್ಟಡವನ್ನ ಸ್ಯಾನಿಟೈಸ್ ಮಾಡಿದೆ. ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಕೊರೋನಾ ಪ್ರಕರಣಳು ಪತ್ತೆಯಾಗುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.