Covid-19 Crisis: ಬೆಂಗ್ಳೂರಲ್ಲಿ ಏಕಾಏಕಿ ಏರಿದ ಕೊರೋನಾ..!

By Girish GoudarFirst Published May 22, 2022, 5:24 AM IST
Highlights

*  ಪರೀಕ್ಷೆ ಹೆಚ್ಚಿಸದಿದ್ದರೂ ಪ್ರಕರಣ ಹೆಚ್ಚಳ
*  150 ಮಂದಿ ಸೋಂಕು
*  100ರ ಆಸುಪಾಸಿನಲ್ಲಿದ್ದ ಸೋಂಕು
 

ಬೆಂಗಳೂರು(ಮೇ.22):  ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ 100 ಆಸುಪಾಸಿನಲ್ಲಿದ್ದ ಕೊರೋನಾ ಸೋಂಕು ಹೊಸ ಪ್ರಕರಣಗಳು 150ಕ್ಕೆ ಹೆಚ್ಚಳವಾಗಿವೆ.

ನಗರದಲ್ಲಿ ಶನಿವಾರ 150 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 162 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1579 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 12 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.1.2ರಷ್ಟುದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಪರೀಕ್ಷೆಗಳಲ್ಲಿ ಹೆಚ್ಚಿನ ವ್ಯತ್ಯಯವಾಗದಿದ್ದರೂ ಹೊಸ ಪ್ರಕರಣಗಳು ಬರೋಬ್ಬರಿ 61 ಹೆಚ್ಚಳವಾಗಿವೆ. (ಶುಕ್ರವಾರ 89 ಕೇಸ್‌, ಸಾವು ಶೂನ್ಯ, ಪಾಸಿಟಿವಿಟಿ ದರ ಶೇ.0.84)

Dharwad: ಬೀದಿಗೆ ಬಂದ ಕೋವಿಡ್ ವಾರಿಯರ್ಸ್ ಕುಟುಂಬಗಳು

ಈ ಹಿಂದೆ ಮೇ 11ರಂದು 156 ಪ್ರಕರಣಗಳು ಪತ್ತೆಯಾಗಿದ್ದವು. ಬಳಿಕ ಇಳಿಮುಖವಾಗಿ ಕಳೆದ ಒಂದು ವಾರದಿಂದ ಕೊರೋನಾ ಪ್ರಕರಣಗಳು 100ರ ಗಡಿಯಲ್ಲಿ ವರದಿಯಾಗುತ್ತಿದ್ದವು. ಈಗ ಮತ್ತೆ 11 ದಿನಗಳ ಬಳಿಕ 150ಕ್ಕೆ ಹೆಚ್ಚಳವಾಗಿವೆ. ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳ ಪೈಕಿ ಶೇ.97ರಷ್ಟು(155ರಲ್ಲಿ 150 ಕೇಸ್‌) ಬೆಂಗಳೂರು ಒಂದರಲ್ಲಿಯೇ ಪತ್ತೆಯಾಗಿವೆ. ಇನ್ನು ಪರೀಕ್ಷೆ ಹೆಚ್ಚಳವಾಗದಿದ್ದರೂ ಹೊಸ ಪ್ರಕರಣಗಳು ಹೆಚ್ಚಾಗಿರುವುದು ಒಂದಿಷ್ಟುಆತಂಕ ಮೂಡಿಸಿದೆ.

ಸದ್ಯ ಸಕ್ರಿಯ ಸೋಂಕಿತರ ಪೈಕಿ 9 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಈ ಪೈಕಿ ಐಸಿಯುನಲ್ಲಿ ಒಬ್ಬರು, ಆಕ್ಸಿಜನ್‌ ಹಾಸಿಗೆಯಲ್ಲಿ ಇಬ್ಬರು, ಸಾಮಾನ್ಯ ಹಾಸಿಗೆಗಳಲ್ಲಿ ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 1570 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. 5ಕ್ಕಿಂತ ಕಡಿಮೆ ಪ್ರಕರಣಗಳಿರುವ ನಾಲ್ಕು ಕ್ಲಸ್ಟರ್‌ ಪ್ರದೇಶಗಳಿವೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.86 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.67 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,964 ಇದೆ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ 5 ರಲ್ಲಿ 4 ಮಗುವಿಗೆ ಇನ್ನೂ ಕೊರೋನಾ ಲಸಿಕೆ ಆಗಿಲ್ಲ

ಯಾವ ವಲಯದಲ್ಲಿ ಎಷ್ಟು ಕೇಸ್‌:

ಮಹದೇವಪುರದಲ್ಲಿ 33, ಪೂರ್ವ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ ತಲಾ 17 ಪ್ರಕರಣ ಪತ್ತೆಯಾಗಿವೆ. ಉಳಿದಂತೆ ದಕ್ಷಿಣ 9, ಪಶ್ಚಿಮ 8, ಯಲಹಂಕ 6, ಆರ್‌ಆರ್‌ ನಗರ 3 ಮತ್ತು ದಾಸರಹಳ್ಳಿಯಲ್ಲಿ 1 ಪ್ರಕರಣ ವರದಿಯಾಗಿವೆ.
ಕಳೆದ ಮೂರು ದಿನ ಹೊಸ ಪ್ರಕರಣಗಳು:

ಮೇ 18 - 112
ಮೇ 19- 116
ಮೇ 20 - 89
 

click me!