'ಸಿದ್ದು ಡಿಸಿ ಸಭೆ ಕರೆಯಂಗಿಲ್ಲ' 'ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ'

By Suvarna NewsFirst Published May 20, 2021, 4:37 PM IST
Highlights

* ಡಿಸಿಗಳ ಸಭೆ ಕರೆಯಲು ಮುಂದಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ
* ಸಭೆ ನಡೆಸಲು ಸಾಧ್ಯವಿಲ್ಲ ಬೇಕಾದರೆ ಪತ್ರದ ಮುಖೇನ ಉತ್ತರ ಪಡೆದುಕೊಳ್ಳಬಹುದು ಎಂದ ಸರ್ಕಾರ
*  ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ; ಸಿದ್ದು ಆರೋಪ
* ಇವರ ಬಂಡವಾಳ ಬಯಲಾಗುತ್ತದೆ ಎಂಬ ಭಯಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ

ಬೆಂಗಳೂರು(ಮೇ  20) ಕರ್ನಾಟಕದಲ್ಲ ಕೊರೋನಾ ನಿಯಂತ್ರಣ ವಿಚಾರವಾಗಿ ಡಿಸಿಗಳ ಜೊತೆ ಸಭೆ ನಡೆಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾಗಿದ್ದರು.  ಮೇ 21ರಿಂದ 25 ರವರೆಗೆ ವಿಡಿಯೋ ಸಂವಾದ ನಡೆಸಲು ನಿರ್ಧರಿಸಲಾಗಿತ್ತು. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಭೆ ನಡೆಸುವಂತಿಲ್ಲ ಎಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಪತ್ರದ ಮೂಲಕ ಉತ್ತರ ನೀಡಿದ್ದಾರೆ.

ಸಿಎಸ್‌ಗೆ ಪತ್ರ ಬರೆದು ಸಭೆಗೆ ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯ ಕೇಳಿದ್ದರು ಸಿಎಂ ಜೊತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದ ಸಿ.ಎಸ್ ರವಿಕುಮಾರ್ ಹೇಳಿದ್ದರು. ಆದರೆ ಈಗ ಆ ರೀತಿ ಸಭೆ ನಡೆಸಲು ಬರುವುದಿಲ್ಲ ಎಂದು ಉತ್ತರ ಕಳಿಸಿಕೊಟ್ಟಿದ್ದಾರೆ.

ಸಿಎಂ ಸೂಚನೆ ಅನುಸಾರ ಸಿದ್ದರಾಮಯ್ಯ ಅವರಿಗೆ ರವಿಕುಮಾರ್ ಪತ್ರ ಬರೆದಿದ್ದಾರೆ. ಪ್ರತಿಪಕ್ಷ ನಾಯಕರು ಆಡಳಿತದ  ಭಾಗವಾಗಿರುವುದಿಲ್ಲ ಸಚಿವರಂತೆ ಸಭೆ ನಡೆಸುವ ಅವಕಾಶ ಇರುವುದಿಲ್ಲ..ನೀವು ಪತ್ರದ ಮೂಲಕ ಎಲ್ಲ ಮಾಹಿತಿ ಪಡೆಯಬಹುದು. ಸಭೆ ನಡೆಸುವ ಹಾಗಿಲ್ಲ  ಎಂದು ತಿಳಿಸಿದ್ದಾರೆ.

ಸ್ವತಃ ಕಾರ್ಯಾಚರಣೆಗೆ ಇಳಿದ ಉಡುಪಿ ಡಿಸಿ

ಸಿಎಸ್ ಪತ್ರದ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ವೈ ಗೆ ಪತ್ರ ಬರೆದ ವಿಪಕ್ಷ ನಾಯಕ ಸಿದ್ದರಾಮಯ್ಯ ಅನೇಕ ವಿಚಾರಗಳನ್ನು ಸ್ಪಷ್ಟಮಾಡಿದ್ದಾರೆ. ಝೂಮ್ ತಂತ್ರಾಂಶದ ಮೂಲಕ ಹಾಜರಾಗಿ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿತ್ತು.  ಮೂರು ದಿನಗಳ ನಂತರ ಮುಖ್ಯ ಕಾರ್ಯದರ್ಶಿಗಳು ನನಗೆ ಪತ್ರ ಬರೆದು ವಿರೋಧ ಪಕ್ಷದ ನಾಯಕರು ಸಭೆ ನಡೆಸಬಾರದು ಅಂತ ಪತ್ರ ಬರೆದಿದ್ದಾರೆ. ಬೇಕಿದ್ದರೆ ಪತ್ರ ಬರೆದು ಮಾಹಿತಿ ಪಡೆಯಬಹುದಾಗಿ ಮುಖ್ಯ ಮಂತ್ರಿಗಳು ಅನುಮೋದನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸರ್ಕಾರವೊಂದು ಜೀವಂತವಾಗಿದ್ದರೆ, ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ವಿರೋಧ ಪಕ್ಷದ ನಾಯಕರು ಪತ್ರ ಬರೆದ ಕೂಡಲೇ ಮಾಹಿತಿ ನೀಡುತ್ತಿತ್ತು. ಪಂಚೇಂದ್ರಿಯಗಳೆಲ್ಲ ಇಂಗಿ ಹೋಗಿ, ಚೈತನ್ಯ ಕಳೆದುಕೊಂಡಿರುವ ಸರ್ಕಾರದಿಂದ ಉತ್ತರ ಪಡೆಯುವುದಾದರೂ ಹೇಗೆ.? ಕೋವಿಡ್ ಎರಡನೇ ಅಲೆ ಪ್ರಾರಂಭವಾದ ಮೇಲೆ ಸರ್ಕಾರಕ್ಕೆ 12 ಪತ್ರಗಳನ್ನು ಬರೆದಿದ್ದೇನೆ. ಇವುಗಳಲ್ಲಿ ಒಂದಕ್ಕಾದರೂ ಉತ್ತರ ನೀಡಿದ್ದೀರಾ?  ಇದು ಬೇಜವಾಬ್ದಾರಿಯ ಪರಮಾವಧಿ ಅಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ.

ಆಸ್ಪತ್ರೆ, ಬೆಡ್‌ಗಳು, ವಂಟಿಲೇಟರ್, ಆಕ್ಸಿಜನ್ನು, ಅಗತ್ಯ ಔಷಧಗಳು, ಆಂಬ್ಯುಲೆನ್ನುಗಳು, ವೈದ್ಯಕೀಯ ಸಿಬ್ಬಂದಿ, ವ್ಯಾಕ್ಸಿನ್ ಮುಂತಾದವುಗಳು ಸಮರ್ಪಕವಾಗಿ ಸಿಗದೆ ಜನ ಅನಾಥರಂತೆ ಬೀದಿ ಬೀದಿಗಳಲ್ಲಿ ಮರಣ ಹೊಂದುತ್ತಿದ್ದಾರೆ.  ಕಡೆಗೆ ಕೋವಿಡ್ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರದಿಂದ ಸಾಧ್ಯವಿಲ್ಲ ಎಂದು ತಿಳಿದ ನ್ಯಾಯಾಲಯಗಳು ಕ್ರಿಯಾಶೀಲವಾಗಬೇಕಾಯಿತು.  ಸರ್ಕಾರ ಜೀವಂತವಾಗಿದ್ದರೆ ಕೋರ್ಟುಗಳೇಕೆ ಕಾರ್ಯರಂಗಕ್ಕೆ ಇಳಿಯಬೇಕಾಗುತ್ತಿತ್ತು..? ವಿರೋಧ ಪಕ್ಷವಾಗಿ ನಾವು ಸರ್ಕಾರ ಮಾಡಬೇಕಾದ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದಿದ್ದಾರೆ.

ಮೋದಿ ಸಭೆಯಲ್ಲಿ ಏನೇನಾಯ್ತು?

ನಾನು ಆದೇಶ ಕೊಡಲು ಡಿ.ಸಿ ಗಳ ಸಭೆ ಕರೆದಿಲ್ಲ. ವಿರೋಧ ಪಕ್ಷದ ನಾಯಕ ಶ್ಯಾಡೊ ಸಿಎಂ. ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಹೀಗೆ ಮಾಡ್ತಿದ್ದಾರೆ. ಇವರು ಸಮರ್ಥವಾಗಿ ಯಾವ ಜಿಲ್ಲೆಗಳಲ್ಲಿಯೂ ಕೋವಿಡ್ ನಿಯಂತ್ರಣ ಮಾಡಿಲ್ಲ. ನಾನು ಸಭೆ ಮಾಡಿದರೆ ಎಲ್ಲಾ ಸರ್ಕಾರದ ತಪ್ಪುಗಳೆಲ್ಲ ಗೊತ್ತಾಗುತ್ತೆ  ಅಂತ ಇವರಿಗೆ ಭಯ. ನಾನು ಡಿ.ಕೆ.ಶಿ ಚಾಮರಾಜನಗರ ಕ್ಕೆ ಹೋಗದೆ ಇದ್ದಿದ್ದರೆ ಅಲ್ಲಿಯ ಸತ್ಯ ಹೊರಗೆ ಬರುತ್ತಿರಲಿಲ್ಲ. ಅಲ್ಲಿ ಸತ್ತ ಸಂಖ್ಯೆ ಕಡಿಮೆ ಹೇಳಿ ಮುಚ್ಚಾಕಲು ಪ್ರಯತ್ನ ಮಾಡಿದ್ರು. ಇವರು ಸತ್ಯ ಮರೆಮಾಚುತ್ತಿದ್ದಾರೆ. ಆಕ್ಸಿಜನ್ ಬೆಡ್ ಇಲ್ಲ, ವೆಂಟಿಲೇಟರ್ ಬೆಡ್ ಇಲ್ಲ  ತುಂಬಾ ಜನ ಇದರಿಂದಲೇ ಸಾಯುತ್ತಿದ್ದಾರೆ. ಬಿಜೆಪಿಗೆ  ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮೊದಲು ಸಿದ್ದರಾಮಯ್ಯರಿಂದ ಸಿಎಸ್‌ಗೆ ಪತ್ರ, ಅಲ್ಲಿಂದ ಸಿಎಸ್ ಉತ್ತರ ಇದಾದ ಮೇಲೆ ಮತ್ತೆ ಸಿದ್ದರಾಮಯ್ಯರಿಂದ ಸರ್ಕಾರದ ಮೇಲೆ ಆರೋಪ ಮೂರು ಸುದ್ದಿಗಳು ಒಂದಕ್ಕೊಂದು ಸಂಬಂಧ ಇರುವಂತೆ ನಡೆದಿವೆ. 


ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

 

click me!