ಶೀಘ್ರ ಶರತ್ ಬಚ್ಚೇಗೌಡ ಅಧಿಕೃತ ಪಕ್ಷ ಸೇರ್ಪಡೆ : ಯಾವ ಪಕ್ಷ..?

By Kannadaprabha NewsFirst Published Sep 15, 2020, 9:11 AM IST
Highlights

ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಶಾಸಕರಾಗಿ ಗೆಲುವು ಪಡೆದಿದ್ದ ಶರತ್ ಬಚ್ಚೇಗೌಡ ಇದೀಗ ಪಕ್ಷ ಒಂದಕ್ಕೆ ಸೇರುವುದು ಖಚಿತವಾಗಿದೆ. ಹಾಗಾದ್ರೆ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ..?

ಹೊಸಕೋಟೆ (ಸೆ.15) : ಬಿಜೆಪಿ ನಾಯಕ ಬಿ.ಎನ್‌. ಬಚ್ಚೇಗೌಡ ಅವರ ಪುತ್ರ ಹಾಗೂ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಸುವ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಅವರು ಕಾಂಗ್ರೆಸ್‌ ಪಕ್ಷ ಸೇರ್ಪಡೆ ಬಹುತೇಕ ಖಚಿತ ಎನ್ನಲಾಗಿದೆ.

ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ ಶರತ್‌ ಬಚ್ಚೇಗೌಡ ಅವರು ವಿಜಯ ದಶಮಿ (ಅಕ್ಟೋಬರ್‌ 26) ರಂದು ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.

ಎಂಟಿಬಿ MLC ಆಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಶಾಸಕ ಶರತ್ ಬಚ್ಚೇಗೌಡ . 

ಬಿಜೆಪಿ ನಾಯಕ ಹಾಗೂ ಸಂಸದ ಬಿ.ಎನ್‌. ಬಚ್ಚೇಗೌಡ ಅವರ ಪುತ್ರರಾದ ಶರತ್‌ ಬಚ್ಚೇಗೌಡ ಅವರು ಹೊಸಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಸರ್ಕಾರ ರಚನೆಗೆ ನೆರವಾಗಲು ಕಾಂಗ್ರೆಸ್‌ ತೊರೆದು ಬಂದ ಎಂ.ಟಿ.ಬಿ. ನಾಗರಾಜ್‌ ಅವರಿಗೆ ಟಿಕೆಟ್‌ ನೀಡುವ ಸಲುವಾಗ ಶರತ್‌ ಬಚ್ಚೇಗೌಡ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಹೀಗಾಗಿ ಶರತ್‌ ಅವರು ಬಂಡೆದ್ದು ಪಕ್ಷೇತರರಾಗಿ ಸ್ಪರ್ಧೆ ಮಾಡಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಶಾಸಕರಾದ ನಂತರವೂ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳಿದ್ದವು. ಈ ನಡುವೆ, ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ನಡೆದ ಸಂಧಾನದ ಬಳಿಕ ಶರತ್‌ ಇದೀಗ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾಂಗ್ರೆಸ್‌ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ವಿಜಯದಶಮಿಗೆ ಅವರ ಪಕ್ಷ ಸೇರ್ಪಡೆ ಬಹುತೇಕ ಖಚಿತ ಎನ್ನಲಾಗಿದೆ.

click me!