ಏಕಕಾಲಕ್ಕೆ ಎರಡೂ ಕೈಗಳಿಂದ ಬರೆದು ಬಾಲಕಿ ವಿಶ್ವ ದಾಖಲೆ!

By Kannadaprabha NewsFirst Published Sep 15, 2020, 9:54 AM IST
Highlights

ಮಂಗಳೂರಿನ ಬಾಲಕಿ ಎರಡೂ ಕೈಗಳಿಂದಲೂ ಬರೆದು ವಿಶ್ವ ದಾಖಲೆ ಬರೆದಿದ್ದಾಳೆ. ಒಂದೇ ಬಾರಿ ಎರಡೂ ಕೈಗಳಿಂದಲೂ ಬರೆದು ಆಕೆ ಅಚ್ಚರಿ ಮೂಡಿಸಿದ್ದಾಲೆ.

ಮಂಗಳೂರು (ಸೆ.15):  ಏಕಕಾಲಕ್ಕೆ ಎರಡೂ ಕೈಗಳಿಂದ ಇಂಗ್ಲಿಷ್‌ ಪದಗಳನ್ನು ಒಂದು ನಿಮಿಷಕ್ಕೆ 45 ಪದಗಳಂತೆ ಯುನಿ ಡೈರೆಕ್ಷನಲ್‌ ಶೈಲಿಯಲ್ಲಿ ಬರೆಯುವ ಮಂಗಳೂರಿನ ಬಾಲಕಿ ಆದಿ ಸ್ವರೂಪಾ ಸಾಧನೆಗೆ ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್‌ ಸಂಸ್ಥೆಯು ಎಕ್ಸ್‌ಕ್ಲೂಸಿವ್‌ ವಲ್ಡ್‌ರ್‍ ರೆಕಾರ್ಡ್‌ ಗೌರವ ಘೋಷಿಸಿದೆ.

ಮಂಗಳೂರಿನ ಸ್ವರೂಪಾ, ಅಧ್ಯಯನ ಕೇಂದ್ರದ ಗೋಪಾಡ್ಕರ್‌- ಸುಮಾಡ್ಕರ್‌ ದಂಪತಿಯ ಪುತ್ರಿ. 2 ವರ್ಷಗಳ ಹಿಂದೆ ಎರಡೂ ಕೈಯಿಂದ ಬರೆಯುವುದನ್ನು ಆರಂಭಿಸಿದ್ದ ಆದಿಸ್ವರೂಪಾ, 10 ರೀತಿಗಳಲ್ಲಿ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಸಾಧನೆಯ ಅನಾವರಣ ಮಾಡಿದರು.

ಕಾಸರಗೋಡು-ಮಂಗಳೂರು ಬಸ್‌ ಸಂಚಾರ ಶೀಘ್ರ ...

ಯುನಿಡೈರೆಕ್ಷನಲ್‌, ಒಪೋಸಿಟ್‌ ಡೈರೆಕ್ಷನ್‌, ರೈಟ್‌ ಹ್ಯಾಂಡ್‌ ಸ್ಪೀಡ್‌, ಲೆಫ್ಟ್‌ ಹ್ಯಾಂಡ್‌ ಸ್ಪೀಡ್‌, ರಿವರ್ಸ್‌ ರನ್ನಿಂಗ್‌, ಮಿರರ್‌ ಇಮೇಜ್‌, ಹೆಟೆರೋಟೋಪಿಕ್‌, ಹೆಟೆರೋ ಲಿಂಗ್ವಿಸ್ಟಿಕ್‌, ಎಕ್ಸ್‌ಚೇಂಜ್‌, ಡ್ಯಾನ್ಸಿಂಗ್‌ ಮತ್ತು ಬ್ಲೈಂಡ್‌ ಫೋಲ್ಡಿಂಗ್‌ ಎನ್ನುವ ಹತ್ತು ಶೈಲಿಗಳಲ್ಲಿ ಬೋರ್ಡ್‌ನಲ್ಲಿ ಬರೆಯುವ ಮೂಲಕ ಆದಿಸ್ವರೂಪಾ ತಮ್ಮ ಕೈಚಳಕ ಪ್ರದರ್ಶಿಸಿದರು.

ಆದಿಸ್ವರೂಪಾ ಎಂದೂ ಶಾಲೆಗೆ ಹೋದವಳಲ್ಲ. 10ನೇ ತರಗತಿಯ ಸ್ವಕಲಿಕೆಯಲ್ಲಿ ತೊಡಗಿಕೊಂಡಿದ್ದಾಳೆ. ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್‌ ಬಾಕ್ಸ್‌, ಅದ್ಭುತ ನೆನಪುಶಕ್ತಿಯ ತ್ರಯೋದಶ ಅವಧಾನ, ರೂಬಿಕ್‌ ಕ್ಯೂಬ್‌ ಇತ್ಯಾದಿ ವಿಷಯಗಳ ಅಧ್ಯಯನದಲ್ಲೂ ನಿರತಳಾಗಿದ್ದಾಳೆ. ಸೆ.15ರಂದು 16ನೇ ಹುಟ್ಟುಹಬ್ಬ ಆಚರಿಸುತ್ತಿರುವ ಆದಿ ಸ್ವರೂಪಾಗೆ ವಿಶ್ವದಾಖಲೆಯ ಸಾಧನೆ ಹುಟ್ಟುಹಬ್ಬದ ಕೊಡುಗೆಯಾಗಿದೆ ಎಂದು ಗೋಪಾಡ್ಕರ್‌ ಹೇಳಿದರು.

ಬಹುಮುಖ ಪ್ರತಿಭೆ :  ಆದಿ ಸ್ವರೂಪಾ ಒಂದೂವರೆ ವರ್ಷ ಪ್ರಾಯದಲ್ಲೇ ಓದಲು, ಎರಡೂವರೆ ವರ್ಷದಲ್ಲೇ ದಿನಕ್ಕೆ 30 ಪುಟಗಳಷ್ಟುಬರೆಯುತ್ತಿದ್ದ ಆದಿ, ಹಿಂದೂಸ್ತಾನಿ ಸಂಗೀತವನ್ನು ಪಂಡಿತ್‌ ರವಿಕಿರಣ್‌ ಅವರಲ್ಲಿ ಕಲಿಯುತ್ತಿದ್ದಾಳೆ. 7 ವರ್ಷಗಳಲ್ಲಿ 50ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ, ಕಥಾ ಸಂಕಲನ ಹೊರತಂದಿದ್ದಾರೆ. 40 ಚಿತ್ರಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನೂ ನಡೆಸಿದ್ದಾರೆ.

click me!