ಮೈಸೂರು: ಬೆಂಕಿ ಇಲ್ಲದೆ ರುಚಿಕರ ಅಡುಗೆ ಮಾಡಿದ ಅತ್ತೆ, ಸೊಸೆ..!

Published : Oct 05, 2019, 08:27 AM IST
ಮೈಸೂರು: ಬೆಂಕಿ ಇಲ್ಲದೆ ರುಚಿಕರ ಅಡುಗೆ ಮಾಡಿದ ಅತ್ತೆ, ಸೊಸೆ..!

ಸಾರಾಂಶ

ಮೈಸೂರು ದಸರಾ ಪ್ರಯುಕ್ತ ಏರ್ಪಡಿಸಾಗಿದ್ದ ಕುಕ್ಕಿಂಗ್ ವಿತೌಟ್ ಫೈರ್ ಸ್ಪರ್ಧೆ ಮೋಜಿನಿಂದ ನಡೆಯಿತು. ಬೆಂಕಿ ಇಲ್ಲದೆ, ಅತ್ಯಂತ ರುಚಿಕರ ಮತ್ತು ಸ್ವಾದಿಷ್ಟ ಅಡುಗೆ ತಯಾರಿಸಬಹುದು ಎಂದು ಅತ್ತೆ, ಸೊಸೆಯಂದಿರು ತೋರಿಸಿಕೊಟ್ಟರು.

ಮೈಸೂರು(ಅ.05): ಒಲೆ ಇಲ್ಲದೆಯೂ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಬಹುದು ಎಂಬುದನ್ನು ಅತ್ತೆ ಸೊಸೆಯಂದಿರು ತೋರಿಸಿಕೊಟ್ಟಿದ್ದಾರೆ.

ನಗರದ ಜೆ.ಕೆ. ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯು ಆಯೋಜಿಸಿದ್ದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ಸುಮಾರು 12 ಮಂದಿ ಸ್ಪರ್ಧಿಗಳು ವಿವಿಧ ರೀತಿಯ ತಿಂಡಿಗಳನ್ನು ಸಿದ್ಧಪಡಿಸಿದ್ದಾರೆ.

12 ಜೊತೆ ಅತ್ತೆ ಸೊಸೆ ಜೋಡಿಯು ವಿವಿಧ ತರಕಾರಿ, ಹಣ್ಣು ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸಿದರು. ಚಾಕೋಲೆಟ್‌, ಮೋದಕ, ಕ್ಯಾರೆಟ್‌ ಮತ್ತು ಲೆಮನ್‌ ಜ್ಯೂಸ್‌, ಕೋಕನೆಟ್‌ ಬರ್ಫಿ, ಚುರುಮುರಿ, ಹಣ್ಣು ಮತ್ತು ತರಕಾರಿಯ ತಿಂಡಿಗಳು, ಫä್ರಟ್‌ ಸಲಾಡ್‌, ಲೆಮನ್‌ ಜ್ಯೂಸ್‌ ತಯಾರಿಸಿ ಗಮನ ಸೆಳೆದರು.

ಯುವದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್

ಕೆಲವರು ಮನೆಯಿಂದಲೇ ಎಲ್ಲಾ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರೆ, ಮತ್ತೆ ಕೆಲವರು ಸ್ಥಳದಲ್ಲಿಯೇ ನಿಗದಿತ ಅವಧಿಯೊಳಗೆ ಎಲ್ಲಾ ತರಕಾರಿ, ಹಣ್ಣು, ಸೊಪ್ಪು ತುರಿದುಕೊಂಡು ಅಡುಗೆ ಸಿದ್ಧಪಡಿಸಿ, ಸೈ ಎನಿಸಿದರು.

ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಅವರು ಒಲೆ ರಹಿತ ಅಡುಗೆ ಸ್ಪರ್ಧೆ ನಡೆಸಿಕೊಟ್ಟರು. ತಮ್ಮೊಡನೆ ಪ್ರೇಕ್ಷಕರಿಬ್ಬರನ್ನೂ ಸೇರಿಸಿಕೊಂಡು, ರುಚಿ ನೋಡಿಸಿದ ಬಳಿಕ ತೀರ್ಪು ನೀಡಿದರು.

ಅರ್ಜುನನ ಮೇಲೆ ದಸರಾ ಅಂಬಾರಿ ಈ ವರ್ಷವೇ ಕಡೆ?

ಚುಟುಕು ಹಾಸ್ಯ ಸ್ಪರ್ಧೆಗೆ ಇಬ್ಬರು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದರಿಂದ, ಎಲ್ಲರಿಗೂ ಮುಕ್ತ ಅವಕಾಶ ನೀಡಲಾಯಿತು. ಅನೇಕರು ಬಂದು ತಮ್ಮ ಪ್ರತಿಭೆ ಪ್ರದರ್ಶಿಸಿದರು. ನಂತರ ಆದರ್ಶ ದಂಪತಿ ಸ್ಪರ್ಧೆ ನಡೆಯಿತು.

PREV
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!