ತಾಲೂಕಿನ ಅಳಲಗೇರಿ ಗ್ರಾಮದಲ್ಲಿ ಮಳೆಯಿಂದ ಅವಾಂತರ ಸೃಷ್ಟಿ| ಜಲಾವೃತವಾದ ಸಾಕಷ್ಟು ಮನೆಗಳು ಹಾಗೂ ಓಣಿಗಳು| ಗ್ರಾಮಗಳಲ್ಲಿ ಜನ ಜೀವನ ಅಸ್ತವ್ಯಸ್ಥ ಮಾಡಿದ್ದು, ಕೆಲ ಹೊಲಗಳು ಜಲಾವೃತಗೊಂಡಿವೆ| ಸುಮಾರು 2 ಗಂಟೆಗಳ ಕಾಲ ನಿರಂತವಾಗಿ ಸುರಿದ ಪರಿಣಾಮ ಗ್ರಾಮದಲ್ಲಿ ಗೌಡ್ರ ಕೇರಿ ಸೇರಿದಂತೆ ಹಲವಾರು ಓಣಿಗಳಲ್ಲಿ ನೀರು ನುಗ್ಗಿದೆ| ಮನೆಯವರೆಲ್ಲಾ ನೀರು ತೆಗೆಯುವ ಕಾರ್ಯದಲ್ಲಿ ಮುಳುಗಿದ್ದ ದೃಶ್ಯಗಳು ಕಂಡು ಬಂದವು|
ಬ್ಯಾಡಗಿ(ಅ.5): ಗುರುವಾರ ಏಕಾಏಕಿ ಸುರಿದ ಮಳೆ ತಾಲೂಕಿನ ಅಳಲಗೇರಿ ಗ್ರಾಮದಲ್ಲಿ ಅವಾಂತರ ಸೃಷ್ಟಿಸಿದ್ದು, ಸಾಕಷ್ಟು ಮನೆಗಳು ಹಾಗೂ ಓಣಿಗಳು ಜಲಾವೃತಗೊಂಡಿವೆ.ಗುರುವಾರ ಸುರಿದ ಭಾರಿ ಮಳೆ ತಾಲೂಕಿನ ಅಳಲಗೇರಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನ ಜೀವನ ಅಸ್ತವ್ಯಸ್ಥ ಮಾಡಿದ್ದು, ಕೆಲ ಹೊಲಗಳು ಜಲಾವೃತಗೊಂಡಿವೆ.
ಮಧ್ಯಾಹ್ನ 3ಕ್ಕೆ ಆರಂಭವಾದ ಮಳೆ ಗ್ರಾಮಸ್ಥರನ್ನು ಹೈರಾಣು ಮಾಡುತ್ತ ಸುಮಾರು 2 ಗಂಟೆಗಳ ಕಾಲ ನಿರಂತವಾಗಿ ಸುರಿದ ಪರಿಣಾಮ ಗ್ರಾಮದಲ್ಲಿ ಗೌಡ್ರ ಕೇರಿ ಸೇರಿದಂತೆ ಹಲವಾರು ಓಣಿಗಳಲ್ಲಿ ನೀರು ನುಗ್ಗಿದ್ದು, ಮನೆಯವರೆಲ್ಲಾ ನೀರು ತೆಗೆಯುವ ಕಾರ್ಯದಲ್ಲಿ ಮುಳುಗಿದ್ದ ದೃಶ್ಯಗಳು ಕಂಡು ಬಂದವು.
ಮುಚ್ಚಿದ ಗಟಾರ ತಂದ ಆಪತ್ತು
ಗ್ರಾಪಂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಗ್ರಾಮದಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಬಡವರು ಕೂಲಿ ಕಾರ್ಮಿಕರು ರೈತರು ಹೆಚ್ಚಾಗಿರುವ ಗ್ರಾಮದಲ್ಲಿನ ಕೆಲ ಓಣಿಯಲ್ಲಿನ ಚರಂಡಿಗಳು ಸಂಪೂರ್ಣ ಮುಚ್ಚಿದ್ದು ಇದನ್ನು ಸರಿಪಡಿಸಬೇಕಿದ್ದ ಅಧಿಕಾರಿಗಳು ಮಾತ್ರ ಕೈ ಕಟ್ಟಿಕುಳಿತಿದ್ದು ಮಳೆಯ ನೀರು ಹರಿದು ಹೋಗಲು ಸ್ಥಳವೇ ಇಲ್ಲದಂತಾಗಿ ನೀರು ಮನೆಗಳಿಗೆ ನುಗ್ಗಿದೆ, ಇದರ ಜೊತೆಯಲ್ಲಿ ವಿಷ ಜಂತುಗಳು ಸಹ ಮನೆಗಳಿಗೆ ನುಗ್ಗಿದ್ದು ಜನರು ಭಯದಲ್ಲಿಯೇ ಕಾಲ ಕಳೆಯುವಂತಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ಕನ್ನನಗೌಡ ತಂಗೋಡರ ಅವರು, ಗ್ರಾಮಕ್ಕೆ ಮೂಲಸೌಲಭ್ಯಗಳನ್ನು ಒದಗಿಸಬೇಕಾಗಿದ್ದ ಗ್ರಾಪಂ ಸದಸ್ಯನೊಬ್ಬ ದುರುದ್ದೇಶದಿಂದ ಹೊಲದಲ್ಲಿನ ನೀರನ್ನು ಊರೊಳಗೆ ಹರಿಸಿದ ಪರಿಣಾಮ ಗೌಡ್ರ ಕೇರಿಯಲ್ಲಿನ ಮನೆಗಳು ಜಲಾವೃತವಾಗಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.