ವಿವಾದಕ್ಕೆ ಈಡಾದ ಛಾಯಾಚಿತ್ರ ಪ್ರದರ್ಶನ

By Kannadaprabha News  |  First Published Jul 27, 2022, 1:14 PM IST

ಕರ್ನಾಟಕ ಕಾಲೇಜು ಆವರಣದಲ್ಲಿ ಕೇಂದ್ರ ವಾರ್ತಾ ಇಲಾಖೆಯು ಏರ್ಪಡಿಸಿರುವ ಮೂರು ದಿನಗಳ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸದ ಛಾಯಾಚಿತ್ರ ಪ್ರದರ್ಶನ ವಿವಾದಕ್ಕೆ ಈಡಾಗಿದೆ


ಧಾರವಾಡ (ಜು.27): ಇಲ್ಲಿಯ ಕರ್ನಾಟಕ ಕಾಲೇಜು ಆವರಣದಲ್ಲಿ ಕೇಂದ್ರ ವಾರ್ತಾ ಇಲಾಖೆಯು ಏರ್ಪಡಿಸಿರುವ ಮೂರು ದಿನಗಳ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸದ ಛಾಯಾಚಿತ್ರ ಪ್ರದರ್ಶನ ವಿವಾದಕ್ಕೆ ಈಡಾಗಿದೆ. ಈ ಛಾಯಾಚಿತ್ರ ಪ್ರದರ್ಶನವನ್ನು ಸೋಮವಾರ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಹಾಗೂ ಸ್ಥಳೀಯ ಶಾಸಕರು ಉದ್ಘಾಟಿಸಿ ಪ್ರಶಂಸೆ ವ್ಯಕ್ತಪಡಿಸಿ ಹೋಗಿದ್ದರು.

ಇದೀಗ ಈ ಛಾಯಾಚಿತ್ರ ಪ್ರದರ್ಶನವು 75ನೇ ಸ್ವಾಂತಂತ್ರೋತ್ಸದ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 8 ವರ್ಷಗಳ ಸಾಧನೆಯನ್ನು ಇಲ್ಲಿ ಬಿಂಬಿಸಲಾಗಿದೆ ಎಂದು ಕಾಂಗ್ರೆಸ್‌ ಮುಖಂಡರು ಮಂಗಳವಾರ ಪ್ರದರ್ಶನ ಕೇಂದ್ರದ ಎದುರು ಪ್ರತಿಭಟನೆ ನಡೆಸುವಾಗ ಪೊಲೀಸರು ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ ಈ ಕುರಿತು ಕಾಂಗ್ರೆಸ್‌ ಮುಖಂಡರು ತುರ್ತು ಜಂಟಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ ಮಾತನಾಡಿ, ಪ್ರದರ್ಶನದ ಹೊರಗಡೆ 75ನೇ ಸ್ವಾತಂತ್ರೋತ್ಸವದ ಹೆಸರು, ಒಳಗಡೆ ಮಾತ್ರ ಮೋದಿ ಸಾಧನೆ ತೋರಿಸಲಾಗಿದೆ. 75 ವರ್ಷಗಳಲ್ಲಿ ದೇಶದ ಪ್ರಧಾನಿ, ರಾಷ್ಟ್ರಪತಿ ಹಾಗೂ ಸ್ವಾತಂತ್ರ್ಯಕ್ಕಾಗಿ ಬಲಿಯಾದ ಸಾಕಷ್ಟುಜನ ಮುಖಂಡರು ಇದ್ದಾರೆ. ಅವರನ್ನು ಬಿಟ್ಟು ಮೋದಿ ಅವರ ಎಂಟು ವರ್ಷಗಳ ತಮ್ಮ ಸಾಧನೆಯ ಫೋಟೋಗಳನ್ನು ಪ್ರದರ್ಶಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

Bengaluru: ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದ 134ಕ್ಕೂ ಹೆಚ್ಚು ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ!

ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ದೇಶಕ್ಕಾಗಿ ದುಡಿದ ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ ಗಾಂಧಿ ಸೇರಿದಂತೆ ಜವಾಹರಲಾಲ್‌ ನೆಹರು, ಸರದಾರ್‌ ವಲ್ಲಬಾಯಿ ಪಟೇಲ ಹಾಗೂ ದೇಶದ ಪ್ರಧಾನ ಮಂತ್ರಿಗಳ ಬಗ್ಗೆಯೂ ಈ ಪ್ರದರ್ಶನದಲ್ಲಿ ಮಾಹಿತಿ ಇಲ್ಲ. ಕನಿಷ್ಠ ಬಿಜೆಪಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಫೋಟೋ ಸಹ ಇಲ್ಲಿಲ್ಲ. 75 ವರ್ಷದ ಅಮೃತ ಮಹೋತ್ಸವದ ಹೆಸರಿನಲ್ಲಿ ತಮ್ಮ ಸಾಧನೆಯನ್ನು ಮಕ್ಕಳ ಮನಸ್ಸಿನಲ್ಲಿ ತುಂಬುತ್ತಿದ್ದಾರೆ ಎಂದು ಕಿಡಿಕಾರಿದರು.

ಸಂತಸದ ಸಂಗತಿ ಏನೆಂದರೆ, ನಾಥುರಾಮ್‌ ಗೋಡ್ಸೆ ಫೋಟೋ ಮತ್ತು ಸಾಧನೆ ಹಾಕದಿರುವುದು. ವಿದ್ಯಾರ್ಥಿಗಳಿಗೆ ಬ್ರೇನ್‌ ವಾಶ್‌ ಮಾಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. 8 ವರ್ಷದ ಸಾಧನೆ ಹೇಳಲು ಅಡ್ಡಿ ಇಲ್ಲ, ಆದರೆ, 75ನೇ ಸ್ವಾತಂತ್ರೋತ್ಸವ ಎಂದು ಹೇಳಿ ಈ ರೀತಿ ತಮ್ಮ ಸಾಧನೆ ಬಿಂಬಿಸುವುದು ತಪ್ಪು. ಇದನ್ನು ಪ್ರಶ್ನಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ ತಮ್ಮನ್ನು ಪೊಲೀಸರು ಬಂಧಿಸಿದರು. ಕೂಡಲೇ ಈ ಪ್ರದರ್ಶನ ಕೇಂದ್ರಕ್ಕೆ ಕೀಲಿ ಹಾಕಬೇಕೆಂದು ಆಗ್ರಹಿಸಿದರು.

ಎಲ್ಲಾ ಫೋಟೋಗ್ರಾಫರ್‌ ಮಹಿಮೆ : 60 ವರ್ಷದ ಕೇರಳದ ಕೂಲಿ ಕಾರ್ಮಿಕ ಈಗ ಫೇಮಸ್‌ ಮಾಡೆಲ್‌

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ರಾಬರ್ಚ್‌ ದದ್ದಾಪೂರಿ, ಬಸವರಾಜ ಕಿತ್ತೂರ, ಮಂಜುನಾಥ ಬಡಕುರ್ಕಿ, ಆನಂದ ಜಾಧವ ಹಾಗೂ ಶಿವು ಚೆನ್ನಗೌಡರ ಇದ್ದರು.

click me!