ಅಗ್ನಿಪಥ ಯೋಜನೆಯ ಹೆಚ್ಚಿನ ಲಾಭವನ್ನು ಹಿಂದೂ ಯುವಕರು ಪಡೆದುಕೊಳ್ಳಬೇಕು ಎಂದು ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು
ಹುಬ್ಬಳ್ಳಿ (ಜು.27) : ಅಗ್ನಿಪಥ ಯೋಜನೆಯ ಹೆಚ್ಚಿನ ಲಾಭವನ್ನು ಹಿಂದೂ ಯುವಕರು ಪಡೆದುಕೊಳ್ಳಬೇಕು ಎಂದು ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು. ಇಲ್ಲಿನ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ನಿರಾಮಯ ¶ೌಂಡೇಶನ್‌ನಿಂದ ನಡೆದ ಅಮೃತ ಸ್ವಾತಂತ್ರ್ಯೋತ್ಸವ, ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಹಿತ, ಹಿಂದೂ ಹಿತವಾದ ಮಾನಸಿಕತೆ ಸೈನ್ಯ(Army), ಪೊಲೀಸ್(Police), ರಾಜಕೀಯ(Political), ನ್ಯಾಯಾಂಗದಲ್ಲಿ ಉಳಿದರೆ ಮಾತ್ರ ದೇಶದಲ್ಲಿ ತ್ರಿವರ್ಣ ಧ್ವಜ ಶಾಶ್ವತವಾಗಿ ಇರಲು ಸಾಧ್ಯ. ಜನಗಣಮನ, ವಂದೇ ಭಾರತ ಘೋಷಣೆ ಶಾಶ್ವತವಾಗಿರಲು ನಾವು ಜಾಗೃತರಾಗುವುದು ಅಗತ್ಯ. ಇಲ್ಲದಿದ್ದರೆ ಜಿಹಾದಿ ಸ್ವರೂಪದ ಆಕ್ರಮಣ ನಮಗಾಗಿ ಕಾದಿದೆ ಎಂದು ಎಚ್ಚರಿಸಿದರು.
ನೀವು ವೀರ್ ಆಗಿರಬಹುದು, ಅಗ್ನಿವೀರ್ ಅಲ್ಲ, ವಿಚಾರಣೆ ವೇಳೆ ವಕೀಲರಿಗೆ ಹೇಳಿದ ಸುಪ್ರೀಂ ಕೋರ್ಟ್!
ಸರಿಸುಮಾರು 2 ತಿಂಗಳಿಗೂ ಹೆಚ್ಚಿನ ಅವಧಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಶೌರ್ಯ, ಪರಾಕ್ರಮ, ರಕ್ತಸಿಂಚನದ ಫಲವಾಗಿ ನಾವಿಂದು ಭಾರತದಲ್ಲಿ ನೆಮ್ಮದಿಯಿಂದ ಇದ್ದೇವೆ. ಈ ಯುದ್ಧದ ಕುರಿತು ನಮ್ಮ ಸೈನಿಕರ ಪರಾಕ್ರಮದ ಕುರಿತು ಪಠ್ಯಕ್ರಮದಲ್ಲಿ ಈ ವರೆಗೂ ಅಳವಡಿಸಲಾಗಿಲ್ಲ. ಇವೆಲ್ಲ ನಾವು ತಲೆತಗ್ಗಿಸುವ ವಿಚಾರ. ನಮ್ಮ ಮೇಲೆ ಆಕ್ರಮಣವಾದಾಗ ಅದರಿಂದ ನಮ್ಮನ್ನು ರಕ್ಷಿಸಿದವರ ಇತಿಹಾಸವನ್ನು ನಮಗೆ ಕಲಿಸಲಾಗುತ್ತಿಲ್ಲ. ಇಂತಹ ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯ ನಮಗಿದೆ. ಇದನ್ನು ಮರೆಯುವುದು ಸಾಮ್ರಾಟ್ ಚಂದ್ರಗುಪ್ತ, ವಿಕ್ರಮಾದಿತ್ಯ, ಮಹಾರಾಣ ಪ್ರತಾಪ, ಛತ್ರಪತಿ ಶಿವಾಜಿಗೆ ಅವಮಾನ ಮಾಡಿದಂತೆ ಎಂದರು.
ಸಾವರ್ಕರ್(Savarkar) ಬ್ರಿಟಿಷರಿಂದ ಬಂಧಮುಕ್ತವಾದ ಬಳಿಕ ತಮ್ಮ ರಾಜತಂತ್ರದ ಮೂಲಕ ಬ್ರಿಟಿಷರ ವಿರುದ್ಧ ಹಿಂದೂಗಳನ್ನು ಒಗ್ಗೂಡಿಸಿ ಹೋರಾಟಕ್ಕೆ ಮುಂದಾಗಿಸುವಲ್ಲಿ ಪ್ರೇರಣಾಶಕ್ತಿಯಾಗಿದ್ದರು. ಆದರೆ, ಸಾವರ್ಕರ್ ಬಗ್ಗೆ ಏನನ್ನೂ ಅರಿಯದ ಹಲವರು ದೆಹಲಿಯಲ್ಲಿ ಕುಳಿತು ಅವಮಾನ ಮಾಡುತ್ತಾರೆ. ಬಂಧಮುಕ್ತವಾದ ಬಳಿಕ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ ಎಂದು ಅಪಪ್ರಚಾರ ಮಾಡುತ್ತಾರೆ. ಸಾವರ್ಕರ್ ಮುಂದಿನ ಸ್ವಾತಂತ್ರ್ಯ ಹೋರಾಟದ ಉದ್ದೇಶಕ್ಕಾಗಿ ಕ್ಷಮಾಪತ್ರ ಬರೆದಿದ್ದು. ಆದರೆ ಅದನ್ನು ಇಂದು ತಿರುಚಿ ಹೇಳುತ್ತಿರುವುದನ್ನು ಎಲ್ಲ ಮಾಧ್ಯಮಗಳು ಒಗ್ಗಟ್ಟಾಗಿ ಖಂಡಿಸಬೇಕು ಎಂದು ಕರೆ ನೀಡಿದರು.
ಅಗ್ನಿಪಥ ವಿರೋಧಿಸುವವರು ದೇಶದ್ರೋಹಿಗಳು: ಯತ್ನಾಳ್
ಪ್ರಜ್ಞಾಪ್ರವಾಹ ದಕ್ಷಿಣಮಧ್ಯಕ್ಷೇತ್ರ ಸಂಯೋಜಕ ರಘುನಂದನಜಿ ಮಾತನಾಡಿ, ದೇಶವನ್ನು ರಕ್ಷಿಸಲು ಸೈನಿಕರು ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಡಿನಲ್ಲಿರುವ ನಾವು ದಾನ, ಧರ್ಮ ಮಾಡುವ ಮೂಲಕ ಪ್ರಕೃತಿ, ಭಾಷೆ ಉಳಿಸುವ ಕಾಯಕ ಮಾಡಬೇಕಾಗಿದೆ. ಕನ್ನಡಭಕ್ತಿ ಹಾಗೂ ರಾಷ್ಟ್ರಭಕ್ತಿ ಎರಡೂ ಒಂದೇ ಆಗಿದೆ. ಕನ್ನಡದಲ್ಲಿಯೆ ಚರಿತ್ರೆಯನ್ನು ಓದಿ ಅಳವಡಿಸಿಕೊಂಡಿರುವ ನಾವು ಭಾಷಾ ಅಭಿಮಾನ ಹೊಂದಿರಬೇಕು ಎಂದರು.
ಗದಗದ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ, ಎಲ್ಲಿಯ ವರೆಗೆ ದೇಶದ ಗಡಿಗಳು ಬಲಿಷ್ಠ ಇರುತ್ತದೊ ಅಲ್ಲಿವರೆಗೆ ಯಾವುದೇ ಸಮಸ್ಯೆ ಆಗಲಾರದು. ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸದಿದ್ದರೂ ಪರವಾಗಿಲ್ಲ. ಆದರೆ ಅವಹೇಳನ ಮಾಡುವ ಕೆಲಸ ಬಿಡಬೇಕು. ಯುವಕರು ಹಣ ತೆಗೆದುಕೊಂಡು ನಟಿಸುವ ನಟರ ಸಲುವಾಗಿ ಬಡಿದಾಡಿಕೊಳ್ಳುವ ಹೀನ ಮನಸ್ಥಿತಿಯಿಂದ ಹೊರಬರುವ ಅಗತ್ಯವಿದೆ. ನಮಗಾಗಿ ಪ್ರಾಣತ್ಯಾಗ ಮಾಡುವ ವೀರ ಯೋಧರ ಕುರಿತು ಚಿಂತನೆ ಮಾಡಬೇಕು ಎಂದರು.
ರಕ್ತ ಹರಿಸಿದ್ದರಿಂದ ಸಿಕ್ಕ ಸ್ವಾತಂತ್ರ್ಯದ ಮೌಲ್ಯ ನಮಗಿನ್ನು ತಿಳಿದಿಲ್ಲ. ಈ ಭೂ ಭಾಗ ಉಳಿಸಬೇಕಾಗದರೆ ತಾಯಿ ಮಕ್ಕಳಿಗೆ ಶೌರ್ಯ, ಸಾಹಸ, ದೇಶ ಭಕ್ತಿ ವಿಚಾರಗಳನ್ನು ತಿಳಿಸಿ ಬೆಳೆಸಬೇಕು. ಅಂದಾಗ ಭವ್ಯ ಭಾರತವಾಗುತ್ತದೆ ಎಂದರು.
ಇದೇ ವೇಳೆ 75 ಸೈನಿಕರಿಗೆ ಸನ್ಮಾನಿಸಲಾಯಿತು. ಜತೆಗೆ ರಾಷ್ಟೊ್ರೕತ್ಥಾನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ನಿರಾಮಯ ¶ೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ಬಾಳಿಕಾಯಿ ಉಪಸ್ಥಿತರಿದ್ದರು. ಗುರು ಬನ್ನಿಕೊಪ್ಪ ನಿರೂಪಿಸಿ, ನವೀನ ಪದಕಿ ಪ್ರಾರ್ಥಿಸಿ, ರಾಮಚಂದ್ರ ದೇಶಪಾಂಡೆ ವಂದಿಸಿದರು.