
ರಮೇಶ್ ಬನ್ನಿಕುಪ್ಪೆ
ಬೆಂಗಳೂರು(ಅ.16): ಸಿಲಿಕಾನ್ ಸಿಟಿ(Silicon City) ಬೆಂಗಳೂರು(Bengaluru) ನಗರಕ್ಕೆ ಹೊಂದಿಕೊಂಡಂತಿದ್ದು, ನೈಸರ್ಗಿಕವಾಗಿ ಬೆಳೆದು ನಿಂತಿರುವ ಜಾರಕಬಂಡೆ ಕಾವಲ್ (ಜೆ.ಬಿ.ಕಾವಲ್) ಮೀಸಲು ಅರಣ್ಯವನ್ನು(Jarkabandi Reserve Forest) ಉದ್ಯಾನವನ್ನಾಗಿ(Garden) ಪರಿವರ್ತಿಸುವುದರ ಹಿಂದೆ ಸಿವಿಲ್ ಗುತ್ತಿಗೆದಾರರ ಲಾಬಿ ಪ್ರಬಲವಾಗಿದ್ದು, ಸರ್ಕಾರದ(Government) ಮೇಲೆ ತೀವ್ರ ಒತ್ತಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಯಾವುದೇ ಅರಣ್ಯ ಪ್ರದೇಶದಿಂದ ಗುತ್ತಿಗೆದಾರರಿಗೆ(Contractors) ಅಂತಹ ಲಾಭವಾಗುವುದಿಲ್ಲ. ಆದರೆ, ಒಂದು ಬಾರಿ ಅರಣ್ಯವನ್ನು ಉದ್ಯಾನವಾಗಿ ಪರಿವರ್ತಿಸಿದರೆ ಪ್ರತಿ ವರ್ಷ ಅಲ್ಲಿ ವಿವಿಧ ಕಾಮಗಾರಿ ನಡೆಸುವ ನೆಪದಲ್ಲಿ ಹಣ ಲೂಟಿ ಮಾಡಬಹುದು. ಹೀಗಾಗಿಯೇ ಗುತ್ತಿಗೆದಾರರ ಲಾಬಿ ಜಾರಕಬಂಡೆ ಕಾವಲ್ ಅರಣ್ಯದ ಮೇಲೆ ಕಣ್ಣು ಹಾಕಿದ್ದು, ಇದಕ್ಕೆ ಜನಪ್ರತಿನಿಧಿಗಳ(Representatives) ಬೆಂಬಲ ದೊರಕಿದೆ ಎನ್ನಲಾಗುತ್ತಿದೆ.
ಉತ್ತರ ಭಾಗದ ಏಕೈಕ ‘ಲಂಗ್ ಸ್ಪೇಸ್’!:
ಜೆ.ಬಿ.ಕಾವಲ್ ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟೀಷರ(British) ಆಡಳಿತದಲ್ಲಿ 1896ರಲ್ಲಿ ಮೀಸಲು ಅರಣ್ಯ ಎಂದು ಘೋಷಣೆಯಾಗಿದೆ. 1900ರಲ್ಲಿ ಮೈಸೂರು ಅರಣ್ಯ ಕಾಯಿದೆ(Mysore Forest Act) ಮತ್ತು 1963ರಲ್ಲಿ ಕರ್ನಾಟಕ ಅರಣ್ಯ ಕಾಯಿದೆಯಡಿ(Karnataka Forest Act) ಮೀಸಲು ಅರಣ್ಯ(Reserve Forest) ಎಂಬುದಾಗಿ ಸೇರ್ಪಡೆ ಮಾಡಲಾಗಿದೆ. ನಗರದ ಅತ್ಯಂತ ಹಳೆಯ ಮೀಸಲು ಅರಣ್ಯ ಪ್ರದೇಶವನ್ನು ಉದ್ಯಾನವನ್ನಾಗಿಸಲು ಅರಣ್ಯ ಮತ್ತು ತೋಟಗಾರಿಕೆ ಇಲಾಖೆ(Department of Horticulture) ಈಗಾಗಲೇ ಚರ್ಚೆ ನಡೆಸಿದ್ದು, ಆ ಮೂಲಕ ನಿಸರ್ಗಕ್ಕೆ(Nature) ಹಾನಿ ಮಾಡಿ ಹಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪರಿಸರವಾದಿಗಳು(Environmentalists) ಆರೋಪಿಸಿದ್ದಾರೆ.
ದುಬಾರೆ ಮೀಸಲು ಅರಣ್ಯದಲ್ಲಿ ಬೆಂಕಿ : ಪ್ರಾಣಿಗಳು ಆಹುತಿ
1850ಕ್ಕೂ ಮುನ್ನ ಇಡೀ ಬೆಂಗಳೂರು ಬೃಹತ್ ಕಾಡಾಗಿತ್ತು. ಅಭಿವೃದ್ಧಿ(Development) ಹೆಸರಿನಲ್ಲಿ ಈಗಾಲೇ ಶೇ.90ಕ್ಕೂ ಹೆಚ್ಚು ಪ್ರಮಾಣದ ಕಾಡು(Forest)ನಾಶ ಮಾಡಲಾಗಿದೆ. ಇದೀಗ ನಗರದ ಹೊರ ಭಾಗಗಳಲ್ಲಿ ಅಲ್ಲಲ್ಲಿ ಕೆಲ ಪ್ರದೇಶ ಉಳಿದುಕೊಂಡಿದೆ. ಈ ಅರಣ್ಯವನ್ನು ಸಾರ್ವಜನಿಕರ ಬಳಕೆಗೆ ಮುಂದಾದರೆ ಮುಂದೊಂದು ದಿನ ಇಡೀ ನಗರವೇ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪರಿಸರವಾದಿಗಳು ಎಚ್ಚರಿಕೆ ನೀಡಿದ್ದಾರೆ.
1962ರಿಂದ ಈ ಅರಣ್ಯ ಪ್ರದೇಶದಲ್ಲಿ 89 ಜಾತಿಯ ಮರಗಳನ್ನು(Tree) ಬೆಳೆಸಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ಹಲಸು, ಗೂಸ್‌ಬೆರ್ರಿ, ಕದಂಬ, ಬೀಚ್ ಬಾದಾಮಿ, ನೀಲಗಿರಿ, ಬೆಣ್ಣೆ ಮರ, ತೇಗದ ಮರ ಸೇರಿದಂತೆ ಹಲವು ಮರಗಳು ಇಲ್ಲಿವೆ. 50 ವರ್ಷಕ್ಕೂ ಹೆಚ್ಚು ಹಳೆಯದಾದ ಈ ಮರಗಳು ಬೃಹತ್ತಾಗಿ ಬೆಳೆದು ನಿಂತಿವೆ. ಇವುಗಳನ್ನು ನಾಶ ಮಾಡಲು ಮಾಡಿರುವ ನಿರ್ಧಾರ ಮುರ್ಖತನದ ಪರಮಾವಧಿ. ನೈಸಗಿಕವಾಗಿ ಬೆಳೆದಿರುವ ಅರಣ್ಯದಲ್ಲಿ ಮಾನವ ಚಟುವಟಿಕೆಗಳಿಗೆ ಅವಕಾಶ ನೀಡಿದಲ್ಲಿ ನಗರದ ಶ್ವಾಸಕೋಶವನ್ನು ಬಲಿ ಕೊಟ್ಟಂತಾಗಲಿದೆ ಎಂದು ಪರಿಸರ ಹೋರಾಟಗಾರ ಜೆ.ಮಂಜುನಾಥ್ ತಿಳಿಸಿದ್ದಾರೆ.
ಹಲವು ಜಾತಿ ಕೀಟಗಳ ತಾಣ
ಜೆ.ಬಿ.ಕಾವಲ್‌ನಲ್ಲಿ ಸುಮಾರು 120ಕ್ಕೂ ಹೆಚ್ಚು ಜಾತಿಯ ಪಕ್ಷಿ(Birds) ಸಂಕುಲ ಅಡಗಿದೆ. ಪುಟ್ಟೇನಹಳ್ಳಿ ಕೆರೆಗೆ ಸಂತಾನೋತ್ಪತ್ತಿಗೆ ಆಗಮಿಸುವ ಹೊರ ದೇಶಗಳ ನೂರಾರು ಪಕ್ಷಿಗಳು ಈ ಅರಣ್ಯವನ್ನು ವಾಸ ತಾಣವನ್ನಾಗಿ ಮಾಡಿಕೊಂಡಿವೆ. ಅಲ್ಲದೆ, ಸಣ್ಣ ಪ್ರಮಾಣದ ಹಾವುಗಳು(Snake) ಮತ್ತು ಕೀಟಗಳಿಂದ(Insect) ಕೂಡಿರುವ ಜೀವ ವೈವಿದ್ಯತೆ ಇಲ್ಲಿ ಅಡಗಿದೆ. ಜೊತೆಗೆ, ಚಿಟ್ಟೆಗಳು, ಜೇನು ನೊಣಗಳು ಮತ್ತು ಕಣಜಗಳು ಹಾಗೂ ಹಲವು ಜಾತಿಯ ಇರುವೆಗಳು ಇಲ್ಲಿವೆ.
ಬಂಡೀಪುರ ಅಭಯಾರಣ್ಯಕ್ಕೆ 600 ಕ್ಯಾಮರಾ ಕಣ್ಗಾವಲು!
ಅಲ್ಲದೆ, ಕಾಡು ಹಂದಿಗಳು, ನರಿಗಳು, ಮೊಲಗಳು, ಪ್ಯಾಂಗೋಲಿನ್ ಮತ್ತು ಜಿಂಕೆಗಳು ಕಾಣಿಸಿಕೊಳ್ಳುತ್ತಿವೆ. ಈ ಎಲ್ಲ ಪ್ರಾಣಿಗಳು(Animals) ವನ್ಯಜೀವಿ ಸಂರಕ್ಷಣೆ ಕಾಯಿದೆ ಅಡಿ(Wildlife Conservation Act) ರಕ್ಷಿಸಲ್ಪಡುತ್ತಿವೆ. ಈ ಭಾಗದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಸರ್ಕಾರ ಈ ನಿರ್ಧಾರವನ್ನು ಕೈ ಬಿಡದಿದ್ದಲ್ಲಿ ಕಾನೂನು ಹೊರಾಟಕ್ಕೆ(Legal Flight) ಸಿದ್ಧವಿರುವುದಾಗಿ ಮಂಜುನಾಥ್ ತಿಳಿಸಿದರು.
ನಗರಲ್ಲಿ ಹಸಿರು ಹೊದಿಕೆ ಕಡಿಮೆ ಆಗುತ್ತಿದೆ. ಇದರಿಂದ ಮಳೆಗಾಲವಲ್ಲದ ಸಂದರ್ಭದಲ್ಲಿ ಮಳೆ ಬರುತ್ತಿದೆ. ಪರಿಸರಕ್ಕೆ ತೀವ್ರತರದ ಹಾನಿಯಾಗುತ್ತಿದೆ. ಇದೇ ರೀತಿ ಮುಂದುವರೆದಲ್ಲಿ ಮುಂದಿನ ಪೀಳಿಗೆ ಬೆಂಗಳೂರಿನಲ್ಲಿ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಜೆ.ಬಿ.ಕಾವಲ್ ನೈಸರ್ಗಿಕವಾಗಿ ಬೆಳದು ನಿಂತಿರುವ ಉದ್ಯಾನವನವಾಗಿದೆ. ಕಾಡಿನ ಮಧ್ಯ ತೋಟಗಾರಿಕೆ ಇಲಾಖೆಗೆ ಜಮೀನು ಹಸ್ತಾಂತರಿಸಲು ಅವಕಾಶವಿಲ್ಲ. ನಿಸರ್ಗವನ್ನು ನಾಶ ಮಾಡಿ ಉದ್ಯಾನ ಮಾಡಿ ಸಾರ್ವಜನಿಕರಿಗಾಗಿ ವಾಕಿಂಗ್, ಸೈಕಲಿಂಗ್‌ಗೆ ಸೌಲಭ್ಯ ಒದಗಿಸಿದಲ್ಲಿ ಅರಣ್ಯ ನಾಶಕ್ಕೆ ನಾಂದಿ ಹಾಡಿದಂತಾಗಲಿದೆ. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಬಿಡಬೇಕು ಎಂದು ಪರಿಸರವಾದಿ ಮತ್ತು ವೈಲ್ಡರ್‌ನೆಸ್ ಕ್ಲಬ್‌ನ ಗೌರವ ಕಾರ್ಯದರ್ಶಿ ಜೆ.ಮಂಜುನಾಥ್ ತಿಳಿಸಿದ್ದಾರೆ.