ಕಾಫಿನಾಡಲ್ಲಿ ಕಾಡಾನೆ ವಿಚಾರವಾಗಿ ನಡೀತಿರೋ ಗಲಾಟೆ ಮಗಿಯೋ ಲಕ್ಷಣಗಳೇ ಕಾಣ್ತಿಲ್ಲ. ದಿನಕ್ಕೊಂದು ರೀತಿಯಲ್ಲಿ ಬೆಳವಣಿಗೆಗಳು ನಡೀತಲೇ ಇದೆ. ಕಳೆದ ಐದು ದಿನಗಳ ಹಿಂದೆ ಮಹಿಳೆ ಸಾವನ್ನಪ್ಪಿದ್ದಾಗ ನಡೆದಿದ್ದ ಪ್ರತಿಭಟನೆ ಲಾಠಿಚಾರ್ಜ್ ಹಂತಕ್ಕೆ ಹೋಗಿತ್ತು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.26): ಕಾಫಿನಾಡಲ್ಲಿ ಕಾಡಾನೆ ವಿಚಾರವಾಗಿ ನಡೀತಿರೋ ಗಲಾಟೆ ಮಗಿಯೋ ಲಕ್ಷಣಗಳೇ ಕಾಣ್ತಿಲ್ಲ. ದಿನಕ್ಕೊಂದು ರೀತಿಯಲ್ಲಿ ಬೆಳವಣಿಗೆಗಳು ನಡೀತಲೇ ಇದೆ. ಕಳೆದ ಐದು ದಿನಗಳ ಹಿಂದೆ ಮಹಿಳೆ ಸಾವನ್ನಪ್ಪಿದ್ದಾಗ ನಡೆದಿದ್ದ ಪ್ರತಿಭಟನೆ ಲಾಠಿಚಾರ್ಜ್ ಹಂತಕ್ಕೆ ಹೋಗಿತ್ತು. ಶಾಸಕರ ಮೇಲೆ ಹಲ್ಲೆಯೂ ನಡೆದಿತ್ತು. ಆ ಬಳಿಕ ಪೊಲೀಸರು, ಪ್ರತಿನಿತ್ಯ ಗ್ರಾಮಕ್ಕೆ ಹೋಗಿ ಒಬ್ಬೊಬ್ಬರನ್ನ ಅರೆಸ್ಟ್ ಮಾಡ್ತಿದ್ರು. ಸದ್ಯ ಅರಣ್ಯ ಇಲಾಖೆಯ ವಿರುದ್ದ ಆಕ್ರೋಶಗೊಂಡಿರುವ ಜನರು ಕೈಗೆ ಸಿಕ್ಕ... ಸಿಕ್ಕ... ವಸ್ತುಗಳನ್ನೆಲ್ಲಾ ಪುಡಿ ಮಾಡಿ, ಆನೆ ದಾಳಿಯನ್ನ ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ರೋಷಾವೇಶವನ್ನು ಹೊರಹಾಕಿದ್ದಾರೆ ಗ್ರಾಮಸ್ಥರು.
ಕೈಗೆ ಸಿಕ್ಕ... ಸಿಕ್ಕ... ವಸ್ತುಗಳನ್ನೆಲ್ಲಾ ಪುಡಿ ಮಾಡಿದ ಆಕ್ರೋಶಿತರು: ಕಾಡಾನೆ ದಾಳಿಯಿಂದ ಜನ ಸಾಯ್ತಿದ್ರೆ, ನಿಮ್ಗೆ ಸೋನಾ ಮುಸುರಿ ಅಕ್ಕಿಯೇ ಬೇಕಾ..? ಇದೆ ನನ್ ಹೆಸ್ರು. ಏನ್ ಮಾಡ್ತೀರಾ ಮಾಡ್ಕೊಳ್ಳಿ ಅನ್ನೋ ಅವಾಜ್. ಹೌದು! ಇದು ಮೊನ್ನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಮಹಿಳೆ ಸಾವನ್ನಪ್ಪಿದ ಮೇಲೆ ಉದ್ರಿಕ್ತರ ರೋಷವೇಷ. ಕುದಿಯುತ್ತಿದ್ದ ಜನ ಆವೇಶವನ್ನ ಕಂಟ್ರೋಲ್ ಮಾಡೋದೇ ಅಸಾಧ್ಯವಾಗಿತ್ತು.ಕಾಡಾನೆ ತುಳಿತದಿಂದ ಮಹಿಳೆ ಶೋಭಾ ಮೃತಪಟ್ಟಿದ್ರು. ಮೃತ ದೇಹವನ್ನಿಟ್ಕೊಂಡು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದರು. ಜನರಿಗೆ ಸ್ವಾಂತನ ಹೇಳುವುದಕ್ಕೆ ತೆರಳಿದ್ದ ಸ್ಥಳೀಯ ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಜನರು ಆಕ್ರೋಶ ಹೊರಹಾಕಿದ್ದರು.
Chikkamagaluru: ಇಂದಿನಿಂದ ನೂರು ಬೆಡ್ ಆಸ್ಪತ್ರೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ
ಜನರು ಹಲ್ಲೆ ಮಾಡಿದ್ದಾರೆ ಅಂತ ಹರಿದ ಬಟ್ಟೆಯನ್ನ ಶಾಸಕರು ತೋರಿಸಿದರು. ಇದು ಇಷ್ಟಕ್ಕೆ ಮುಗೀತಲ್ಲ ಅನ್ಕೊಂಡ್ರಾ..? ಇನ್ನು ಮುಗ್ದಿಲ್ಲ... ಇದರ ಮುಂದುವರಿದ ಭಾಗವಾಗಿ ಇಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವೊಂದು ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಅರಣ್ಯ ಕಛೇರಿಗೆ ನುಗ್ಗಿ ಧ್ವಂಸ ಮಾಡಿರುವ ಆಕ್ರೋಶಿತರು ಕೈಗೆ ಸಿಕ್ಕಿದ್ದೆಲ್ಲಾ ಪೀಸ್.. ಪೀಸ್.. ಮಾಡಿದ್ದಾರೆ. ಹಾಗಾಗಿಯೇ ಅಲ್ಲಿದ್ದ ಖಾಕಿ ಎಲ್ಲವನ್ನೂ ರೆಕಾರ್ಡ್ ಮಾಡ್ಕೊಂಡು ಸುಮ್ಮನಾಗಿದ್ರು. ಆ ಬಳಿಕ ಗ್ರಾಮದ ಒಬ್ಬೊಬ್ಬರ ಮೇಲೆಯೇ ಪ್ರಕರಣಗಳು ದಾಖಲಾಗತೊಡಗಿದವು. ಮಧ್ಯೆರಾತ್ರಿಯಲ್ಲಿ ಗ್ರಾಮಕ್ಕೆ ಬಂದು ಮಲಗಿದ್ದವರನ್ನ ಎಬ್ಬಿಸಿ ಅರೆಸ್ಟ್ ಮಾಡತೊಡಗಿದ್ರು. ಅಯ್ಯೋ..? ಇದ್ಯಾಕ್ಕೆ ನಮ್ಮನ್ನ ಸುಖಾಸುಮ್ಮನೆ ಅರೆಸ್ಟ್ ಮಾಡ್ತಿದ್ದಾರೆ ಅಂತ ಎಲ್ಲರೂ ಪ್ರಶ್ನೆ ಮಾಡ್ತಿದ್ರು. ಹೀಗೆ ಪ್ರಶ್ನೆ ಮಾಡ್ತಿದ್ದವರಿಗೆ ಸದ್ಯ ಅರಣ್ಯ ಇಲಾಖೆ ಮೇಲೆ ದಾಳಿ ಮಾಡಿರೋ ವಿಡಿಯೋ ಇಂದು ಖಾಕಿ, ಎಲ್ಲೆಡೆ ಹರಿಬಿಟ್ಟಿದೆ.
ಕಾಡಾನೆ ದಾಳಿಗೆ ಮಹಿಳೆ ಬಲಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್: ಹೌದು! ನವೆಂಬರ್ 20ರಂದು ಕಾಡಾನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದಾಗ ಜನರು ಆಕ್ರೋಶ ಭುಗಿಲೆದ್ದಿತ್ತು. ಯಾಕಂದ್ರೆ, ಕಳೆದ ಮೂರು ತಿಂಗಳಲ್ಲಿ ಮೂವರು ಕಾಡಾನೆ ದಾಳಿಗೆ ಬಲಿಯಾಗಿದ್ರು. ಕಾಡಾನೆ ಸೆರೆ ಹಿಡಿಯುವಂತೆ ಜನರು ಪದೇ-ಪದೇ ಮನವಿ ಮಾಡಿಕೊಂಡ್ರು ಅರಣ್ಯ ಇಲಾಖೆ ಕ್ಯಾರೇ ಅಂದಿರಲಿಲ್ಲ. ಹೀಗಾಗಿ ಸಹಜವಾಗಿಯೇ ಜನಕ್ರೋಶ ಜೋರಾಗಿತ್ತು. ಮೃತದೇಹವನ್ನಿಟ್ಕೊಂಡು ಸಾವಿಗೆ ನ್ಯಾಯಕೊಡಿಸುವಂತೆ ಜನರು ಪ್ರತಿಭಟಿಸಿದರು. ಸ್ಥಳಕ್ಕೆ ತಡವಾಗಿ ಭೇಟಿ ನೀಡಿದ್ದ ಶಾಸಕರನ್ನ ತರಾಟೆ ತೆಗೆದುಕೊಂಡರು.
Congress Ticket: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಭಾರೀ ಕಸರತ್ತು: 33 ಅರ್ಜಿ ಸಲ್ಲಿಕೆ
ಆ ವೇಳೆ ಜನರ ಮೇಲೆ ಲಾಠಿ ಚಾರ್ಜ್ ಕೂಡ ನಡೆದಿತ್ತು. ಶಾಸಕರು ಬೇರೆ ಹರಿದ ಬಟ್ಟೆಯಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ ಅಂತ ಆರೋಪಿಸಿದ್ರು. ಈ ಮಧ್ಯೆ ಜನರು ಅರಣ್ಯ ಇಲಾಖೆ ಮೇಲೆ ದಾಳಿ ನಡೆಸಿರೋ ವಿಡಿಯೋ ಈಗ ಎಲ್ಲೆಡೆ ಹರಿದಾಡ್ತಿದೆ.ಒಟ್ಟಾರೆ, ಪೊಲೀಸ್ ಇಲಾಖೆ ಈಗ ಧ್ವಂಸ ಮಾಡಿದವರ ಮೇಲೆ ಕೇಸ್ ಮೇಲೆ ಕೇಸ್ ಹಾಕಲು ಮುಂದಾಗಿದೆ. ಅಲ್ಲದೇ ಪ್ರತಿದಿನ ಗ್ರಾಮಕ್ಕೆ ವಿಸಿಟ್ ಹಾಕಿ ಧ್ವಂಸ ಮಾಡಿದವರಿಗಾಗಿ ಹುಡುಕಾಡ್ತಿದ್ದಾರೆ. ಕಾಡಾನೆ ದಾಳಿಯಿಂದ ಜನರಿಗೆ ಸಮಸ್ಯೆ ಆಗ್ತಿರೋದಂತೂ ಸತ್ಯ. ಹಾಗಂತ ಕಾನೂನನ್ನ ಕೈಗೆ ತೆಗೆದುಕೊಳ್ಳುವುದು ಎಷ್ಟು ಸರಿ. ಅಲ್ವಾ. ಕಾಫಿನಾಡಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ ಪ್ರಕರಣ ದಿನಕ್ಕೊಂದು ಟ್ವಿಸ್ ಪಡೆದುಕೊಳ್ತಿದ್ದು, ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕು.