Ballari: ಅಕ್ಷರ ದಾಸೋಹ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಪತ್ತೆ?

By Govindaraj S  |  First Published Nov 25, 2022, 11:59 PM IST

ರಾಜ್ಯದಲ್ಲಿ ಮತ್ತೊಮ್ಮೆ ಪ್ಲಾಸ್ಟಿಕ್ ಅಕ್ಕಿ ಸದ್ದು ಮಾಡ್ತಿದೆ. ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ಪಡಿತರ ಅಂಗಡಿಗಳಲ್ಲಿ ಕಾಣಿಸಿಕೊಂಡ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಇದೀಗ ಶಾಲೆಯಲ್ಲಿ ಮಕ್ಕಳಿಗೆ ನೀಡೋ ವೇಳೆ ಕಂಡು ಬಂದಿದೆ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಳ್ಳಾರಿ 

ಬಳ್ಳಾರಿ (ನ.25): ರಾಜ್ಯದಲ್ಲಿ ಮತ್ತೊಮ್ಮೆ ಪ್ಲಾಸ್ಟಿಕ್ ಅಕ್ಕಿ ಸದ್ದು ಮಾಡ್ತಿದೆ. ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ಪಡಿತರ ಅಂಗಡಿಗಳಲ್ಲಿ ಕಾಣಿಸಿಕೊಂಡ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಇದೀಗ ಶಾಲೆಯಲ್ಲಿ ಮಕ್ಕಳಿಗೆ ನೀಡೋ ವೇಳೆ ಕಂಡು ಬಂದಿದೆ. ಹೌದು! ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಅಕ್ಕಿ‌, ಪ್ಲಾಸ್ಟಿಕ್ ಮಾದರಿಯ ವಸ್ತು ಮಿಶ್ರಣ. ಇತಂಹ ಮಾತುಗಳನ್ನ ಆಗಾಗ್ಗೆ ಕೇಳ್ತಾನೆ ಇರತ್ತೇವಿ. ಆದ್ರೇ ಇದೀಗ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ.  ಅದ್ರೇ ಇದು ಸಾರಜನಕಯುಕ್ತ ಅಕ್ಕಿ ಎಂದು ಸ್ಪಷ್ಟನೆ ನೀಡೋ ಪ್ರಯತ್ನ ಮಾಡಲಾಗುತ್ತಿದೆಯಾದ್ರೂ ಬಳ್ಳಾರಿಯಲ್ಲಿ ಪೋಷಕರ ಆತಂಕ  ಮಾತ್ರ ನಿಂತಿಲ್ಲ   

Latest Videos

undefined

ಪ್ಲಾಸ್ಟಿಕ್ ಅಕ್ಕಿ ಅಂತಾ ಆತಂಕಗೊಂಡ ಪೋಷಕರು: ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಈ  ಅಕ್ಕಿಯನ್ನ ಒಮ್ಮೆ ಸರಿಯಾಗಿ ನೋಡಿಬಿಡಿ. ಸಾಮಾನ್ಯ ಅಕ್ಕಿಯಂತೆ ಈ ಅಕ್ಕಿಯಿಲ್ಲ. ಬದಲಾಗಿ ಪ್ಲಾಸ್ಟಿಕ್ ಮಾದರಿಯ ಇರುವ ಈ ಅಕ್ಕಿಯೇ ಇದೀಗ ಪೋಷಕರ ಆತಂಕ್ಕೆ ಕಾರಣವಾಗಿದೆ. ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯ ಮಕ್ಕಳಿಗೆ ವಿತರಣೆ ಮಾಡಿರುವ ಆಹಾರ ಧಾನ್ಯದಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಕಂಡು ಬಂದಿದೆ. 

ನವಜಾತ ಶಿಶು ಆರೈಕೆಗೆ ಪ್ರತಿಯೊಬ್ಬರು ಕಾಳಜಿವಹಿಸಿ: ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ

ಅನ್ನ ಮಾಡಿದ್ರೆ ಕರಗದೇ ಇರುವ ಮತ್ತು ನೀರಿನಲ್ಲಿ ತೇಲುವ ಈ ಅಕ್ಕಿ ಪ್ಲಾಸ್ಟಿಕ್ ಅಕ್ಕಿ ಅಂತಾ ಪೋಷಕರು ಆತಂಕಗೊಂಡಿದ್ದಾರೆ. ಈ ಅಕ್ಕಿಯನ್ನ ಮಕ್ಕಳಿಗೆ ವಿತರಣೆ ಮಾಡಬಾರದು. ಮಕ್ಕಳು ಈ ಅಕ್ಕಿಯಿಂದ ಮಾಡಿದ ಅನ್ನವನ್ನ ಊಟ ಮಾಡಿದ್ರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಪೋಷಕರು ಆತಂಕಗೊಂಡಿದ್ದಾರೆ. ಅಷ್ಟೇ ಅಲ್ಲ ಮಕ್ಕಳಿಗೆ ವಿತರಣೆ ಮಾಡಿದ ಪ್ಲಾಸ್ಟಿಕ್ ಮಾದರಿ ಇರೋ ಅಕ್ಕಿಯನ್ನ ಮಕ್ಕಳು ಪೋಷಕರು ಮರಳಿ ಶಾಲೆಗೆ ಮರಳಿಸಿದ್ದಾರೆ  

ಪ್ಲಾಸ್ಟಿಕ್ ಅಕ್ಕಿಯೋ.. ಸಾರಜನಕಯುಕ್ತ ಅಕ್ಕಿಯೋ ಅಂತಾ ಆತಂಕ: ಸದ್ಯ, ಕೊಳಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಇಸ್ಕಾನ್ ಬಿಸಿಯೂಟವನ್ನ ಹಂಚಿಕೆ ಮಾಡಲಾಗ್ತಿದೆ. ಆದ್ರೇ ಕೋವಿಡ್ ವೇಳೆ ಮಕ್ಕಳಿಗಾಗಿ ನೀಡಿದ ಅಕ್ಕಿಯನ್ನ ಇದೀಗ ಶಿಕ್ಷಕರು ಮಕ್ಕಳಿಗೆ ವಿತರಣೆ ಮಾಡಿದ್ದಾರೆ. ಈ ಆಹಾರಧಾನ್ಯದ ಅಕ್ಕಿಯಲ್ಲೆ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿದೆ. ಆದ್ರೆ ಪ್ಲಾಸ್ಟಿಕ್ ಮಾದರಿಯ ಅಕ್ಕಿ ನಿಜವಾಗಿಯೂ ಪ್ಲಾಸ್ಟಿಕ್ ಅಕ್ಕಿಯಲ್ಲ. ಅದು ಸಾರಜನಕಯುಕ್ತವಾದ ಅಕ್ಕಿಯಾಗಿದೆ. ಪೋಷಕರು ಅಕ್ಕಿಯನ್ನ ಮರಳಿ‌ ನೀಡಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಕ್ಷರ ದಾಸೋಹದ ಅಧಿಕಾರಿಗಳು ಅಕ್ಕಿ ಪರಿಶೀಲನೆ ಮಾಡಲಿದ್ದಾರೆ. ಪ್ಲಾಸ್ಟಿಕ್ ಮಾದರಿಯ ಅಕ್ಕಿ ಬೇಡ ಅಂದ್ರೆ ಮಕ್ಕಳಿಗೆ ವಿತರಣೆ ಮಾಡಲ್ಲ.‌ ಮಕ್ಕಳ ಆರೋಗ್ಯ ನಮ್ಮಗೆ ಮುಖ್ಯ ಎನ್ನುತ್ತಿದ್ದಾರೆ ಶಿಕ್ಷಕರು.

ಬಳ್ಳಾರಿಯ ಗಣಿಯಲ್ಲಿ 900 ಕೋಟಿ ವೆಚ್ಚಕ್ಕೆ ಎನ್‌ಎಂಡಿಸಿ ನಿರ್ಧಾರ

ಗೊಂದಲ‌ ನಿವಾರಣೆ ಮಾಡೋರ್ಯಾರು: ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ವಿತರಣೆ ಮಾಡಿರುವ ಅಕ್ಕಿಯಲ್ಲಿ ಪತ್ತೆಯಾಗಿರುವ ಪ್ಲಾಸ್ಟಿಕ್ ಮಾದರಿಯ ಅಕ್ಕಿ ನಿಜವಾಗಿಯೂ ಪ್ಲಾಸ್ಟಿಕ್ ಅಕ್ಕಿಯೋ.. ಅಥವಾ ಸಾರಜನಕಯುಕ್ತ ಅಕ್ಕಿಯೋ ಅನ್ನೋದನ್ನ ಆಹಾರ ಇಲಾಖೆಯ ಅಧಿಕಾರಿಗಳು ದೃಡಪಡಿಸಬೇಕಾಗಿದೆ.‌ ಇಲ್ಲದಿದ್ದರೇ ಪೋಷಕರು ಪ್ಲಾಸ್ಟಿಕ್ ಅಕ್ಕಿ ಅಂತಾ ಶಿಕ್ಷಕರು ಜೊತೆ ವಾಗ್ದಾದಕ್ಕೆ ಇಳಿಯುವುದ್ರಲ್ಲಿ ಎರಡು ಮಾತಿಲ್ಲ.‌ ಇನ್ನಾದ್ರೂ ಶಿಕ್ಷಣ ಇಲಾಖೆ ಈ ಬಗ್ಗೆ ಎನೂ ಕ್ರಮ‌ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

click me!