ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ರಾಮಸ್ವಾಮಿಗೌಡ

By Kannadaprabha News  |  First Published Mar 27, 2023, 7:10 AM IST

ಕಾಂಗ್ರೆಸ್‌ ಪಕ್ಷವು ಸೋಲುವ ಅಭ್ಯರ್ಥಿ ಡಾ.ರಂಗನಾಥ್‌ಗೆ ಟಿಕೆಟ್‌ ಘೋಷಣೆ ಮಾಡಿರುವುದರಿಂದ ತಾವು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಹಾಗೂ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದರು.


ಕುಣಿಗಲ್‌: ಕಾಂಗ್ರೆಸ್‌ ಪಕ್ಷವು ಸೋಲುವ ಅಭ್ಯರ್ಥಿ ಡಾ.ರಂಗನಾಥ್‌ಗೆ ಟಿಕೆಟ್‌ ಘೋಷಣೆ ಮಾಡಿರುವುದರಿಂದ ತಾವು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಹಾಗೂ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದರು.

ತಾಲೂಕಿನ ಕೆಂಕೆರೆ ಫಾಮ್‌ರ್‍ ಹೌಸಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಸೋಲುವ ಅಭ್ಯರ್ಥಿಯನ್ನು ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದ್ದು ಯಾವ ಮಾನದಂಡ ಆಧಾರದ ಮೇಲೆ ಪಕ್ಷದ ವರಿಷ್ಠರು ಟಿಕೆಟ್‌ ನೀಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಇರುವುದು ಕನಕಪುರ ಕಾಂಗ್ರೆಸ್ಸಾಗಿ ಪರಿವರ್ತನೆಗೊಂಡು ಅವರ ಸೋದರ ಸಂಸದ ಡಿ.ಕೆ.ಸುರೇಶ್‌ ಅವರ ಕೈವಾಡಗಳು ಜಾಸ್ತಿಯಾಗಿದೆ ಎಂದು ದೂರಿದರು .

Latest Videos

undefined

ಜನರು ಚುನಾವಣೆಯಲ್ಲಿ ಮತಚಲಾಯಿಸಿ ಆಯ್ಕೆ ಮಾಡಬೇಕು, ಗೆಲ್ಲುವ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್‌ ನೀಡಲಾಗುವುದು ಎಂದು ವರಿಷ್ಠರು, ಹೈಕಮಾಂಡ್‌ ಸಹ ಹೇಳಿತ್ತು. ತಾಲೂಕಿನಲ್ಲಿ ನಡೆದ ಹಲವಾರು ಸರ್ವೆಗಳಲ್ಲಿ ಶಾಸಕರ ಹಿನ್ನಡೆ ಇದೆ, ಸೋಲು ಖಚಿತ ಎಂದು ವರದಿ ನೀಡಿದ್ದರೂ ಯಾವ ಮಾನದಂಡ ಉಪಯೋಗಿಸಿ ಕಾಂಗ್ರೆಸ್‌ ಪಕ್ಷದಿಂದ ಡಾ. ರಂಗನಾಥ್‌ಗೆ ಟಿಕೆಟ್‌ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ.

ನಾನು ಕಟ್ಟಾಕಾಂಗ್ರೆಸ್‌ ಪಕ್ಷದ ಕಾರ್ಯಕರ್ತನಾಗಿದ್ದು, ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ತಪ್ಪಿಸಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇಂದಿರಾ ಗಾಂಧಿಯವರ ಭಾವಚಿತ್ರ ಹಾಕಿಕೊಂಡು ಚುನಾವಣೆಗೆ ಸ್ಪರ್ಧಿಸುವುದು ಸತ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್‌ ಗೌಡ, ಸಂತೋಷ್‌ ಉಪಸ್ಥಿತರಿದ್ದರು.

ಕಾಂಗ್ರೆಸ್ ಯುವನಿಧಿ ಕಾರ್ಯಕ್ರಮ

ಬೆಳಗಾವಿ (ಮಾ.20):  ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲ ನಿರುದ್ಯೋಗಿಗಳಿಗೆ 3 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಕಾಂಗ್ರೆಸ್‌ 4ನೇ ಗ್ಯಾರಂಟಿಯನ್ನು ರಾಹುಲ್‌ಗಾಂಧಿ ಘೋಷಣೆ ಮಾಡಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಯುವಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್‌ 4ನೇ ಗ್ಯಾರಂಟಿ ಕಾರ್ಡ್‌ ಹಿಡಿದುಕೊಂಡು ಪ್ರದರ್ಶನ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ 4ನೇ ಗ್ಯಾರಂಟಿ 'ಯುವನಿಧಿ' ಕಾರ್ಯಕ್ರಮ ಘೋಷಣೆ ಮಾಡಲಾಯಿತು. ನಿರುದ್ಯೋಗ ಯುವಕ, ಯುವತಿಯರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುವುದು. ಡಿಪ್ಲೋಮಾ ಆದವರಿಗೆ 1500 ರೂ., ಪದವೀಧರರಿಗೆ 3000 ರೂ. ನಿರುದ್ಯೋಗ ಭತ್ಯೆ ಕೊಡಲಾಗುವುದು. ಕಾಂಗ್ರೆಸ್ ಪಕ್ಷದಿಂದ ನಾಲ್ಕನೇ ಗ್ಯಾರಂಟಿ ಘೋಷಣೆ ಮೂಲಕ ಯುವಕರನ್ನು ಸೆಳೆಯಲಾಗಿದೆ. ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರಿಂದ ನಾಲ್ಕನೇ ಗ್ಯಾರಂಟಿ ಅನಾವರಣ ಮಾಡಿದರು.

ರಾಜ್ಯ ರಾಜಕಾರಣಕ್ಕೆ ರಮ್ಯಾ ರೀ ಎಂಟ್ರಿ: ಎರಡು ಕ್ಷೇತ್ರದಲ್ಲಿ ಸ್ಪರ್ಧೆ ನಿರೀಕ್ಷಿತ

ಹಿಂದಿನ ಮೂರು ಗ್ಯಾರಂಟಿಗಳು: ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್‌ ಮೊದಲನೇ ಗ್ಯಾರಂಟಿ ಆಗಿ ಗೃಹ ಜ್ಯೋತಿ ಕಾರ್ಯಕ್ರಮದಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವುದು. 2ನೇ ಗ್ಯಾರಂಟಿಯಾಗಿ ಎಲ್ಲ ಮಹಿಳೆಯರಿಗೆ ಗೃಹಲಕ್ಷ್ಮೀ ಕಾರ್ಯಕ್ರಮದಡಿ 2 ಸಾವಿರ ರೂ. ಮಾಸಿಕ ಸಹಾಯಧನ ನೀಡುವುದು. 3ನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನಿಡಲಾಗುತ್ತದೆ. ಈಗ ಕಾಂಗ್ರೆಸ್‌ 4ನೇ ಗ್ಯಾರಂಟಿಯಾಗಿ ನಿರುದ್ಯೋಗಿ ಯುವಜನರಿಗೆ 3 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಣೆ ಮಾಡಿದೆ.

ಎಲ್ಲ ವರ್ಗದವರ ರಕ್ಷಣೆಯೇ ಕಾಂಗ್ರೆಸ್‌ ಗುರಿ: ಬೆಳಗಾವಿಯ ಯುವಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಮಹಾತ್ಮಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ಪುಣ್ಯ ಭೂಮಿಯಿಂದ ಸಮಾವೇಶ ಆರಂಭಿಸಲಾಗಿದೆ. ಕಾಂಗ್ರೆಸ್ ಶಕ್ತಿ, ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ -ಈ ದೇಶದ ಇತಿಹಾಸವಾಗಿದೆ. ಎಲ್ಲ ವರ್ಗದ ಜನರ ರಕ್ಷಣೆ ಮಾಡಬೇಕಿರೋದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಯುವಕರಿಗೆ ರಕ್ಷಣೆ ನೀಡಲು ಇಂದು ರಾಹುಲ್ ಗಾಂಧಿ ಇಲ್ಲಿ ಬಂದಿದ್ದಾರೆ ಎಂದರು. 

ನಾನು ಸಾವರ್ಕರ್‌ ಅಲ್ಲ ರಾಹುಲ್‌: ಪೊಲೀಸ್‌ ನೋಟಿಸ್‌ಗೆ ರಾಗಾ ಗರಂ

click me!