ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಬಲರಾಮರೆಡ್ಡಿ ಸಮ್ಮುಖದಲ್ಲಿ ತಾಲೂಕಿನ ಬ್ಯಾಡನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿ.ವಡ್ಡರಹಟ್ಟಿಗ್ರಾಮದ ಯುವ ಮುಖಂಡರಾದ ಶಿವರಾಜು, ಜಯರಾಮು, ಗೋವಿಂದರಾಜು, ಪ್ರಭಾಕರರೆಡ್ಡಿ, ಭರತ್, ದೇವರಾಜು, ಎಸ್.ನಾರಾಯಣಪ್ಪ, ವೆಂಕಟರಾಮ… ನಾಗರಾಜು, ಹನುಮಂತರಾಯಪ್ಪ, ಚಿತ್ತಯ್ಯ, ಶಿವಚಿತ್ರಲಿಂಗ, ಸಿದ್ದಲಿಂಗಪ್ಪ ಮತ್ತು ಜೋಗಪ್ಪ ಇತರೆ ಕಾರ್ಯಕರ್ತರು ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಪಾವಗಡ : ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಬಲರಾಮರೆಡ್ಡಿ ಸಮ್ಮುಖದಲ್ಲಿ ತಾಲೂಕಿನ ಬ್ಯಾಡನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿ.ವಡ್ಡರಹಟ್ಟಿಗ್ರಾಮದ ಯುವ ಮುಖಂಡರಾದ ಶಿವರಾಜು, ಜಯರಾಮು, ಗೋವಿಂದರಾಜು, ಪ್ರಭಾಕರರೆಡ್ಡಿ, ಭರತ್, ದೇವರಾಜು, ಎಸ್.ನಾರಾಯಣಪ್ಪ, ವೆಂಕಟರಾಮ… ನಾಗರಾಜು, ಹನುಮಂತರಾಯಪ್ಪ, ಚಿತ್ತಯ್ಯ, ಶಿವಚಿತ್ರಲಿಂಗ, ಸಿದ್ದಲಿಂಗಪ್ಪ ಮತ್ತು ಜೋಗಪ್ಪ ಇತರೆ ಕಾರ್ಯಕರ್ತರು ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಈ ವೇಳೆಮುಖಂಡರು ನೂತನವಾಗಿ ಸೇರ್ಪಡೆಯಾದ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಅಭಿನಂದನೆ ಸಲ್ಲಿಸಿದರು. ಚುನಾವಣೆ ಪ್ರಚಾರದ ವೇಳೆ ತಾಲೂಕಿನ ಪಳವಳ್ಳಿ ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿ ತಾಂಡದಲ್ಲಿ ಪಕ್ಷದ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪರಿಗೆ ಕುಂಕುಮ ತಿಲಕವಿಟ್ಟು ಕಾರ್ಯಕರ್ತರು ಬರಮಾಡಿಕೊಂಡರು.
ತಾಲೂಕು ಜೆಡಿಎಸ್ ಗೌರವಾಧ್ಯಕ್ಷರಾಜಶೇಖರಪ್ಪ, ಕಾರ್ಯಾಧ್ಯಕ್ಷ ಎನ್.ಎ.ಈರಣ್ಣ, ನಾಗಲಮಡಿಕೆ ಹೋಬಳಿ ಜೆಡಿಎಸ್ ಅಧ್ಯಕ್ಷರಾದ ರಾಜಗೋಪಾಲ್, ಯುವ ಘಟಕದ ಅಧ್ಯಕ್ಷ ಮಂಜುನಾಥ ಚೌದರಿ, ಮುಖಂಡರಾದ ರಾಮಕೃಷ್ಣ ರೆಡ್ಡಿ, ಶಾಂತಿನಗರದ ಲಕ್ಷ್ಮೀನರಸಿಂಹಯ್ಯ, ರಾಮಾಂಜಿನಪ್ಪ, ನರಸಿಂಹಪ್ಪ, ಬೊಮ್ಮತನಹಳ್ಳಿ ದೇವರಾಜ್ ಕಾವಲಗೆರೆ ರಾಮಾಂಜಿ, ಗಂಗಾಧರ.ಕೆ.ಆರ್ ಗಂಗಾಧರನಾಯ್ಡು, ಲೋಕೇಶ್, ಗಗನ್,ಇತರರಿದ್ದರು.
ಕಾಂಗ್ರೆಸ್ ಗೆದ್ದರೆ ಮತ್ತೆ ಮುಸ್ಲಿಂ ಮೀಸಲು
ಬೆಂಗಳೂರು(ಮಾ.27): ‘ಚುನಾವಣೆ ಸಮಯದಲ್ಲಿ ಜನರ ದಾರಿತಪ್ಪಿಸಲು ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಜನದ್ರೋಹಿ ತೀರ್ಮಾನಗಳನ್ನು ಕೈಗೊಂಡಿದೆ. ಈ ತೀರ್ಮಾನಗಳು ಕಾರ್ಯಸಾಧುವಲ್ಲ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಜನದ್ರೋಹಿ ತೀರ್ಮಾನಗಳನ್ನು ರದ್ದು ಮಾಡಿ ಲಿಂಗಾಯತರು, ಒಕ್ಕಲಿಗರು, ಎಸ್ಸಿ-ಎಸ್ಟಿ ಮತ್ತು ಅಲ್ಪಸಂಖ್ಯಾತರಿಗೆ ಸಿಗಬೇಕಾದ ನ್ಯಾಯವನ್ನು ನೀಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ಮೀಸಲಾತಿ ಪರಿಷ್ಕರಣೆ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದರು.
ರಾಹುಲ್ ಅನರ್ಹತೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಸತ್ಯಾಗ್ರಹ
ರಾಜ್ಯದಲ್ಲಿರುವ ‘ಬಿಟ್ರೇಯಲ್ ಜನತಾ ಪಕ್ಷ’ (ದ್ರೋಹಿ ಜನತಾ ಪಕ್ಷ) ಸೋಲಿನ ಆತಂಕಕ್ಕೆ ಒಳಗಾಗಿದೆ. ಹೀಗಾಗಿ ಎಲ್ಲ ಸಮಾಜಗಳನ್ನು ರಕ್ಷಣೆ ಮಾಡಬೇಕಾದವರು, ಅಧಿಕಾರ ದುರುಪಯೋಗ ಮಾಡಿಕೊಂಡು ಎಲ್ಲ ವರ್ಗದ ಜನರಿಗೆ ಮೋಸ ಮಾಡಲು ಮುಂದಾಗಿದ್ದಾರೆ. 75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದೂ ಒಂದು ರಾಜ್ಯ ಸರ್ಕಾರ 90 ದಿನಗಳ ಅವಧಿಯಲ್ಲಿ ಮೂರು ಬಾರಿ ಮೀಸಲಾತಿ ವರ್ಗೀಕರಣ ಬದಲಿಸಿಲ್ಲ. ಯಾವುದೇ ಆಯೋಗಗಳು ಅಂತಿಮ ವರದಿ ನೀಡುವ ಮುನ್ನವೇ ಒಂದು ಚೀಟಿಯಲ್ಲಿ ಇವರಿಗೆ ಇಂತಿಷ್ಟುಮೀಸಲಾತಿ ಎಂದು ಬರೆದು ಹಂಚಲು ಮುಂದಾಗಿದ್ದಾರೆ. ಈ ರೀತಿ ಹಂಚಲು ಮೀಸಲಾತಿ ಏನು ಅವರ ಮನೆ ಆಸ್ತಿಯೇ ಎಂದು ಕಿಡಿಕಾರಿದರು.