ಮೈಸೂರಿನ ಜಯನಗರದಲ್ಲಿನ ಇಸ್ಕಾನ್ ಆವರಣದಲ್ಲಿ ಸುಮಾರು 150 ಕೋಟಿ ರು. ವೆಚ್ಚದಲ್ಲಿ ಬೆಂಗಳೂರಿನಲ್ಲಿರುವ ಇಸ್ಕಾನ್ ಮಾದರಿಯಲ್ಲಿಯೇ ಹೊಯ್ಸಳ ಶೈಲಿಗೆ ಹೊಂದುವಂತಹ ಇಸ್ಕಾನ್ ದೇವಸ್ಥಾನ ನಿರ್ಮಿಸುತ್ತಿದ್ದು, ಅದರ ಮೊದಲ ಹಂತದ ಕಾಮಗಾರಿಯು 40 ಕೋಟಿ ವೆಚ್ಚದಲ್ಲಿ ಆರಂಭವಾಗಿದೆ.
ಮೈಸೂರು(ಡಿ.27): ನವ ಬೃಂದಾವನ ಧಾಮ ಹೆಸರಿನಲ್ಲಿ ಇಸ್ಕಾನ್ ಮೈಸೂರು ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಜಯನಗರದಲ್ಲಿನ ಇಸ್ಕಾನ್ ಆವರಣದಲ್ಲಿ ಸುಮಾರು 150 ಕೋಟಿ ರು. ವೆಚ್ಚದಲ್ಲಿ ಬೆಂಗಳೂರಿನಲ್ಲಿರುವ ಇಸ್ಕಾನ್ ಮಾದರಿಯಲ್ಲಿಯೇ ಹೊಯ್ಸಳ ಶೈಲಿಗೆ ಹೊಂದುವಂತಹ ಇಸ್ಕಾನ್ ದೇವಸ್ಥಾನ ನಿರ್ಮಿಸುತ್ತಿದ್ದು, ಅದರ ಮೊದಲ ಹಂತದ ಕಾಮಗಾರಿಯು 40 ಕೋಟಿ ವೆಚ್ಚದಲ್ಲಿ ಆರಂಭವಾಗಿದೆ.
ಎರಡನೇ ಹಂತದಲ್ಲಿ 110 ಕೋಟಿ ರು. ಮೊತ್ತದ ಕಾಮಗಾರಿ ನಡೆಯಲಿದೆ. ಮೈಸೂರಿಗೆ ಇದೊಂದು ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಲಿದ್ದು, ಪ್ರವಾಸೋದ್ಯಮಕ್ಕೂ ನೆರವಾಗಲಿದೆ ಎಂದು ಪಂಕಜಾಂಘಿ ದಾಸರು ತಿಳಿಸಿದರು. ಆಸಕ್ತರು ದೇವಸ್ಥಾನ ನಿರ್ಮಾಣಕ್ಕೆ ಪ್ರತಿ ಚದರ ಅಡಿಗೆ 2100ರು.ಪಾವತಿಸಬಹುದು. ಇಲ್ಲಿ ರಾಧಾಕೃಷ್ಣರ ದೇವಾಲಯವೂ ಬರಲಿದೆ ಎಂದರು.
undefined
ಬಾಂಗ್ಲಾ: ಮತ್ತೆ ಹಿಂದೂ ದೇಗುಲ ಮೇಲೆ ದಾಳಿ, ಮೂರ್ತಿಗೆ ಬೆಂಕಿ, ಇಸ್ಕಾನ್ ದೇವಸ್ಥಾನ ಕರಕಲು
ಮೈಸೂರಿನಲ್ಲಿ ಈವರೆಗೆ ಚಿಕ್ಕದಾದ ರಾಧಾ ಕೃಷ್ಣರ ದೇವಾಲಯವಿತ್ತು. ಆದರೆ ಮುಂದಿನ ದಿನಗಳಲ್ಲಿ ಬೃಹತ್ತಾದ ದೇವಾಲಯ ಬರಲಿದೆ ಎಂದರು. ನಮ್ಮ ಸಂಸ್ಥೆಯಿಂದ ನೀಡಲಾಗುವ ಆಹಾರ ಪದಾರ್ಥವು ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ. ನಮ್ಮಲ್ಲಿನ ಆಹಾರ ತಜ್ಞರ ತಂಡವು ಆಹಾರ ಪರೀಕ್ಷೆ ನಡೆಸಲಿದೆ. ಆದ್ದರಿಂದ ಶುದ್ಧವಾದ ಆಹಾರವನ್ನೇ ತಯಾರಿಸಲಾಗುತ್ತದೆ ಎಂದರು.
ಇಸ್ಕಾನ್‌ನಿಂದ ನಾಳೆ ಕೃಷ್ಣ ಬಲರಾಮರ ರಥಯಾತ್ರೆ
ಮೈಸೂರು ನಗರದ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞ ಸಂಸ್ಥೆ (ಇಸ್ಕಾನ್) ತನ್ನ 27ನೇ ವಾರ್ಷಿಕ ರಥಯಾತ್ರೆ ಮತ್ತು ವೈಕುಂಠ ಏಕಾದಶಿಯನ್ನು ಡಿ. 28 ರಂದು ಸಂಜೆ 4.30ಕ್ಕೆ ಆಯೋಜಿಸಿದೆ.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಆರಂಭವಾಗುವ ಮೆರವಣಿಗೆಗೆ ಶಾಸಕ ಟಿ.ಎಸ್. ಶ್ರೀವತ್ಸ ಚಾಲನೆ ನೀಡುವರು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವುದಾಗಿ ಸಂಸ್ಥೆಯ ಪಂಕಜಾಂಘ್ರಿ ದಾಸರು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.
ಬಾಂಗ್ಲಾ ಇಸ್ಕಾನ್ ಸಂತ ಚಿನ್ಮೋಯ್ ದಾಸ್ ವಿಚಾರಣೆಗೆ ಮುನ್ನಾದಿನ ವಕೀಲನ ಮೇಲೆ ಪ್ರಾಣಾಂತಿಕ ಹಲ್ಲೆ
ಈ ಉತ್ಸವವು ಸಂಜೆ 5.30ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾಗಿ, ಗಾಂಧಿಚೌಕ, ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ರಾಮಸ್ವಾಮಿ ವೃತ್ತ, ಜೆ.ಎಲ್.ಬಿ ರಸ್ತೆ, ಆರ್.ಟಿ.ಒ ವೃತ್ತ, ಬಲ್ಲಾಳ್ ವೃತ್ತ, ಹೊಸ ಕಂಠೀರವ ಅರಸ್ ರಸ್ತೆ, ಜಯನಗರ 2ನೇ ಮುಖ್ಯ ರಸ್ತೆ ಮೂಲಕ ಸಂಚರಿಸಿ, ಜಯನಗರದ 18ನೇ ಕ್ರಾಸ್, ಇಸ್ಕಾನ್ಭಕ್ತರಿಂದ ಸಂಕೀರ್ತನೆ ಮತ್ತು 30 ಸಾವಿರಕ್ಕೂ ಹೆಚ್ಚು ಜನರಿಗೆ ಪ್ರಸಾದ ವಿತರಿಸಲಾಗುತ್ತದೆ ಎಂದರು.
ಪ್ರಮುಖವಾಗಿ ಮೆರವಣಿಗೆಯ ಮಾರ್ಗದ ಉದ್ದಕ್ಕೂ ಪುಳಿಯೊಗರೆ ಪ್ರಸಾದ ಹಂಚುವ ಜತೆಗೆ ಇಸ್ಕಾನ್ ಆವರಣದಲ್ಲಿ ಸುಮಾರು 10 ಸಾವಿರ ಮಂದಿಗೆ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ ಎಂದರು.