ಕ್ರೈಸ್ತ ಸಮುದಾಯದ ದುರ್ಬಲ ವರ್ಗದವರು ಮದುವೆ, ಮತ್ತಿತರ ಶುಭ ಸಮಾರಂಭಗಳನ್ನು ಆಯೋಜಿಸಲು ಅನುವಾಗುವಂತೆ ರಾಜ್ಯದಲ್ಲಿ 2011 ರಿಂದ ಈವರೆಗೂ ಸುಮಾರು 150 ಹೊಸ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕರ್ನಾಟಕ ಕ್ರೈಸ್ತ ಅಭಿವೃದ್ದಿ ಸಮಿತಿ(ಕೆಸಿಡಿಸಿ) ಅಧ್ಯಕ್ಷ ಜೆ.ಕೆನಡಿ ಶಾಂತಕುಮಾರ್ ತಿಳಿಸಿದರು.
ತುಮಕೂರು : ಕ್ರೈಸ್ತ ಸಮುದಾಯದ ದುರ್ಬಲ ವರ್ಗದವರು ಮದುವೆ, ಮತ್ತಿತರ ಶುಭ ಸಮಾರಂಭಗಳನ್ನು ಆಯೋಜಿಸಲು ಅನುವಾಗುವಂತೆ ರಾಜ್ಯದಲ್ಲಿ 2011 ರಿಂದ ಈವರೆಗೂ ಸುಮಾರು 150 ಹೊಸ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕರ್ನಾಟಕ ಕ್ರೈಸ್ತ ಅಭಿವೃದ್ದಿ ಸಮಿತಿ(ಕೆಸಿಡಿಸಿ) ಅಧ್ಯಕ್ಷ ಜೆ.ಕೆನಡಿ ಶಾಂತಕುಮಾರ್ ತಿಳಿಸಿದರು.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈದ್ರಾಬಾದ್- ಪ್ರದೇಶದಲ್ಲೇ ಸುಮಾರು 85 ಸಮುದಾಯ ಭವನ ಸೇರಿದಂತೆ ರಾಜ್ಯದಲ್ಲಿ 150 ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಕ್ರೈಸ್ತ ಸಮುದಾಯದ ಬಡ ವರ್ಗದವರಿಗೆ ಕಡಿಮೆ ಬಾಡಿಗೆ ದರವನ್ನು ನಿಗದಿಪಡಿಸಿ ಸಮುದಾಯ ಭವನವನ್ನು ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸಮುದಾಯ ಭವನ ನಿರ್ಮಾಣಕ್ಕಾಗಿ ನಗರ ಪ್ರದೇಶದಲ್ಲಿ 1 ಕೋಟಿ ರು. ಹಾಗೂ ಗ್ರಾಮೀಣ ಪ್ರದೇಶದಲ್ಲಿ 50 ಲಕ್ಷ ರು.ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
undefined
ಕ್ರೈಸ್ತ ಅಭಿವೃದ್ಧಿ ಸಮಿತಿಯು 2011ರಲ್ಲಿ ರಚನೆಯಾಗಿದ್ದು, ಸಮಿತಿ ರಚನೆಯಾದ ಪ್ರಾರಂಭದಲ್ಲಿ 50 ಕೋಟಿ ರು.ಗಳ ಅನುದಾನ ಲಭ್ಯವಿತ್ತು. ಪ್ರಸ್ತುತ 200 ಕೋಟಿ ರು.ಗಳ ಅನುದಾನ ಲಭ್ಯವಿದೆ. ನಿರ್ವಹಣೆ ಇಲ್ಲದೆ ಶಿಥಿಲ ಸ್ಥಿತಿ ತಲುಪಿದ್ದ ಸುಮಾರು 300 ವರ್ಷ ಹಳೆಯ ಚಚ್ರ್ಗಳ ನವೀಕರಣ/ ದುರಸ್ತಿಗಾಗಿ ಅನುದಾನವನ್ನು ಬಳಕೆ ಮಾಡಲಾಗಿದ್ದು, ಕ್ರೈಸ್ತ ಸಮುದಾಯದ ಸಂಘ ಸಂಸ್ಥೆಗಳಡಿ ನಡೆಯುತ್ತಿರುವ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಕ್ರೈಸ್ತ ಅಭಿವೃದ್ಧಿ ಸಮಿತಿಯಿಂದ ಆಡಳಿತಾತ್ಮಕ ವೆಚ್ಚವಾಗಿ ವಾರ್ಷಿಕ ಗರಿಷ್ಟ15 ಲಕ್ಷ ರು.ಗಳ ಅನುದಾನವನ್ನು ನೀಡಲಾಗುತ್ತಿದೆ. ರಾಜ್ಯದ 45 ಕ್ಕೂ ಹೆಚ್ಚು ಅನಾಥಾಶ್ರಮ ಹಾಗೂ 50 ಕ್ಕೂ ಹೆಚ್ಚು ವೃದ್ಧಾಶ್ರಮಗಳು ಈ ಸೌಲಭ್ಯವನ್ನು ಪಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಕ್ರೈಸ್ತ ಸಂಘ ಸಂಸ್ಥೆಗಳ ಅಧೀನದಲ್ಲಿರುವ ಸ್ಮಶಾನ ಭೂಮಿ ಒತ್ತುವರಿಯಾಗುವುದನ್ನು ತಡೆಗಟ್ಟುವ ಸಲುವಾಗಿ ಆವರಣ ಗೋಡೆ ನಿರ್ಮಾಣಕ್ಕಾಗಿ ವೆಚ್ಚಕ್ಕನುಗುಣವಾಗಿ ಗರಿಷ್ಟ40 ಲಕ್ಷ ರು.ಗಳನ್ನು ಒದಗಿಸಲಾಗುತ್ತಿದೆ, ಚರ್ಚ್ಗ ಳ ಆವರಣ ಗೋಡೆ ನಿರ್ಮಾಣಕ್ಕೂ ಅನುದಾನ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ ಈಗಾಗಲೇ ವಿದೇಶಿ ವ್ಯಾಸಂಗಕ್ಕಾಗಿ ಗುರುತಿಸಲಾಗಿರುವ 500 ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ.ಗಳ ವಿದ್ಯಾರ್ಥಿವೇತನ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೇರ್ ಕರಂಗಿ ಮಾತನಾಡಿ, ಶೀಘ್ರದಲ್ಲೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೂತನ ಕಟ್ಟಡವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಅಲೀಮುಲ್ಲಾ ಹಾಜರಿದ್ದರು.
ಜಿಲ್ಲೆಗೆ ಅಧಿಕ ಅನುದಾನ
2013 ರಿಂದ 2022 ರವರೆಗೆ ಜಿಲ್ಲೆಯ ತುಮಕೂರು ತಾಲೂಕು ಕ್ಯಾತ್ಸಂದ್ರದ ನ್ಯೂ ಲೈಫ್ ಫಿಲೋಶಿಪ್ ಚಚ್ರ್, ಗಾಂಧಿ ನಗರದ ಅವರ್ ಲೇಡಿ ಆಫ್ ರೋಸರಿ ಕಾನ್ವೆಂಟ್, ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯ, ತಿಪಟೂರು ತಾಲೂಕು ಸಣ್ಣೇನಹಳ್ಳಿ ಸಂತ ಜೋಸೆಫ್ ಚಚ್ರ್ಗಳ ನವೀಕರಣಕ್ಕಾಗಿ 80ಲಕ್ಷ ರು. ತಿಪಟೂರು ತಾಲೂಕು ಸಣ್ಣೇನಹಳ್ಳಿ ಸಂತ ಜೋಸೆಫ್ ದೇವಾಲಯ ವ್ಯಾಪ್ತಿಯ ಸ್ಮಶಾನ ಗೋಡೆ ನಿರ್ಮಾಣಕ್ಕಾಗಿ 9 ಲಕ್ಷ ರು., ತುಮಕೂರು ತಾಲೂಕು ಗೆದ್ದಲಹಳ್ಳಿಯಲ್ಲಿ ಹೆಚ್ಐವಿ/ಏಡ್್ಸ ಬಾಧಿತರ ಆರೈಕೆ ಮಾಡುತ್ತಿರುವ ಸಂತ ಗ್ರಿಗೋರಿಯಸ್ ದಯಾಭವನ ಸಂಸ್ಥೆಯ ನಿರ್ವಹಣೆಗಾಗಿ 4.84 ಲಕ್ಷ ರು., ಕುಣಿಗಲ್ ತಾಲೂಕು ವಾಣಿಗೆರೆಯಲ್ಲಿ ಅನಾಥ ಮಕ್ಕಳ ಆರೈಕೆ ಮಾಡುತ್ತಿರುವ ಸಂತ ಗ್ರಿಗೋರಿಯಸ್ ದಯಾಭವನ ಸಂಸ್ಥೆಗೆ 10.97 ಲಕ್ಷ ರು. ಹಾಗೂ ನಗರದ ಸಿ.ಎಸ್.ಐ. ವೆಸ್ಲಿ ಚಚ್ರ್ ದೇವಾಲಯ ವ್ಯಾಪ್ತಿಯ ಸ್ಮಶಾನ ಆವರಣ ಗೋಡೆ ಅಭಿವೃದ್ಧಿ ಕಾಮಗಾರಿಗಾಗಿ 20 ಲಕ್ಷ ರು. ಸೇರಿದಂತೆ 1.24 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.