ಶಿವಾಜಿ ದೇಶದ ಮಹಾನ್‌ ದೈವಭಕ್ತ : ಸ್ವಾಮೀಜಿ

By Kannadaprabha News  |  First Published Feb 22, 2023, 4:49 AM IST

 ಶಿವಾಜಿ ಮಹಾರಾಜರು ಭಾರತ ದೇಶದ ಮಹಾನ್‌ ದೈವಭಕ್ತ. ನಮ್ಮ ದೇಶದ ಹಿಂದೂ ಸಂಸ್ಕೃತಿಯ ಉಳಿಯುವಿಕೆಗೆ ಸತತ 51 ವರ್ಷ ಹೋರಾಡಿದ ಮಹಾನ್‌


  ಕೊರಟಗೆರೆ : ಶಿವಾಜಿ ಮಹಾರಾಜರು ಭಾರತ ದೇಶದ ಮಹಾನ್‌ ದೈವಭಕ್ತ. ನಮ್ಮ ದೇಶದ ಹಿಂದೂ ಸಂಸ್ಕೃತಿಯ ಉಳಿಯುವಿಕೆಗೆ ಸತತ 51 ವರ್ಷ ಹೋರಾಡಿದ ಮಹಾನ್‌ ವ್ಯಕ್ತಿ. ಶಿವಾಜಿ ಪಾಲಿಸಿರುವ ಹಿಂದೂ ಧರ್ಮದ ಚಿಂತನೆಯೇ ನಮಗೆಲ್ಲ ಆದರ್ಶ ಎಂದು ಸಿದ್ದರಬೆಟ್ಟಶ್ರೀಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.

ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಅನಿಲ್‌ಕುಮಾರ್‌ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಬೆಳ್ಳಾವಿಯ ಖಾರದ ಮಠದ ಪೀಠಾಧ್ಯಕ್ಷ ಶ್ರೀಕಾರದ ವೀರಬಸವ ಮಹಾಸ್ವಾಮೀಜಿ ಮಾತನಾಡಿ, ನಮ್ಮ ಭಾರತ ದೇಶ ಪವಿತ್ರವಾದ ರಾಷ್ಟ್ರ. ಹಸಿದು ಬಂದವನಿಗೆ ಅನ್ನ ಸಂಕಷ್ಟದಲ್ಲಿ ಕಣ್ಣೀರು ಒರೆಸುವ ಗುಣ ನಮ್ಮದು. ಕಾಶ್ಮೀರದಲ್ಲಿ ಗುಂಡಿಗೆ ಇರೋರು ತ್ರಿವರ್ಣ ಧ್ವಜ ಹಾರಿಸಿ ಅಂತಾರೇ. ಗುಂಡಿಗೆ ಇರೋರೇ ಈಗ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಇದಲ್ಲವೇ ನಮ್ಮ ಭಾರತ. ಕೊರಟಗೆರೆ ಕ್ಷೇತ್ರದ ಮನೆಮಗ ಅನಿಲ್‌ಕುಮಾರ್‌. ಜನಸೇವೆಗೆ ನಿಮ್ಮೇಲ್ಲರ ಆರ್ಶಿವಾದ ಇರಲಿ ಎಂದು ಮನವಿ ಮಾಡಿದರು.

ನಿವೃತ್ತ ಐಎಎಸ್‌ ಅ​ಕಾರಿ ಬಿ.ಎಚ್‌.ಅನಿಲ್‌ಕುಮಾರ್‌ ಮಾತನಾಡಿ ಭಾರತ ದೇಶದ ಕಟ್ಟುವ ಮತ್ತು ಸಂಸ್ಕೃತಿಯ ಉಳಿಸುವ ಕಲ್ಪನೆಯನ್ನ ಬೆಳೆಸಿಕೊಟ್ಟಿದ್ದೇ ಶಿವಾಜಿ. ಕೇವಲ 35ಸಾವಿರ ಸೈನಿಕರ ಜೊತೆಗೂಡಿ ತಂತ್ರಗಾರಿಕೆಯಿಂದ ದೇಶ ಕಟ್ಟಿದ ಮಹಾನ್‌ ನಾಯಕ ಶಿವಾಜಿ ಮಹಾರಾಜ. ಕೊರಟಗೆರೆ ಪಟ್ಟಣದಲ್ಲಿ ಶಿವಾಜಿ ಮಹಾರಾಜರ 393ನೇ ಜಯಂತಿ ಮಹೋತ್ಸವವನ್ನು ಅದ್ದೂರಿಯಿಂದ ಮಾಡಿದ್ದೇವೆ ಎಂದರು.

ಕೊರಟಗೆರೆ ಪಟ್ಟಣದ ನರಸಿಂಹಸ್ವಾಮಿ ಸಮುದಾಯ ಭವನದಿಂದ ಪಟ್ಟಣದ ಮುಖ್ಯರಸ್ತೆಯ ಮೂಲಕ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಬಿ.ಹೆಚ್‌.ಅನಿಲ್‌ಕುಮಾರ್‌ ನೇತೃತ್ವದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಮತ್ತು ನೂರಾರು ದ್ವಿಚಕ್ರ ವಾಹನಗಳಲ್ಲಿ ಕಾರ್ಯಕರ್ತರು ಹಿಂದೂ ಸಂಕೇತದ ಬಾವುಟಗಳನ್ನು ಹಿಡಿದು ಘೋಷಣೆ ಕೂಗುತ್ತಾ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ವಕ್ತಾರ ಚಂದ್ರಶೇಖರ್‌, ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷ ಪವನಕುಮಾರ್‌, ಜಿಲ್ಲಾ ರೈತಮೋರ್ಚ ಅಧ್ಯಕ್ಷ ವಿಶ್ವನಾಥ್‌,ಮುಖಂಡರಾದ ನಂಜುಂಡಶೇಟ್ಟಿ, ಗಿರೀಶ್‌ಗೌಡ, ಹನುಮಂತರಾಜು, ಶ್ರೀಧರ್‌, ದಾಸಾಲುಕುಂಟೆ ರಘು, ದಯಾನಂದ್‌, ತಾಲೂಕು ಮತ್ತು ಹೋಬಳಿ ಮಟ್ಟದ ಅಧ್ಯಕ್ಷರು, ಪದಾ​ಕಾರಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ಹಿಂದೂ ಧರ್ಮಕ್ಕಾಗಿ ತನ್ನ ಜೀವ ತ್ಯಾಗ ನಾಯಕ ಶಿವಾಜಿ ಮಹಾರಾಜ. ಶಿವಾಜಿ ಮಹಾರಾಜರನ್ನ ಇವತ್ತು ಇಡೀ ಜಗತ್ತೇ ಪೂಜೆ ಮಾಡುತ್ತೇ. ವಿದೇಶಿಗರ ಆಕ್ರಮಣದಲ್ಲಿದ್ದ ಭಾರತ ದೇಶದಲ್ಲಿ ಶಿವಾಜಿಯ ಹೋರಾಟದ ಕಾಣಿಕೆ ಅನನ್ಯ. ಸಹ್ಯಾದ್ರಿ ಪರ್ವತದಲ್ಲಿ ಸಿಂಹದ ಮರಿಯಂತೆ ಶಿವಾಜಿಯ ಜನನ ಆಯ್ತು.ಭಾರತ ದೇಶದಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡಿದ ಕೀರ್ತಿ ಶಿವಾಜಿಗೆ ಸಲ್ಲಲಿದೆ.

- ಚಂದ್ರಶೇಖರ್‌. ಬಿಜೆಪಿ ರಾಜ್ಯ ವಕ್ತಾರ

 ಕೊರಟಗೆರೆ ಪಟ್ಟಣದಲ್ಲಿ ನಡೆದ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ.

 ಶಿವಾಜಿ ಮಹಾರಾಜರ ಜಯಂತಿಯಲ್ಲಿ ಸಿದ್ದರಬೆಟ್ಟ ಶ್ರೀಗಳಿಗೆ ಸನ್ಮಾನ.

click me!