ಚಲುವರಾಯಸ್ವಾಮಿಗೆ ಅನಾರೋಗ್ಯ : ಕಾಂಗ್ರೆಸಿಗರಿಂದ ವಿಶೇಷ ಪೂಜೆ

Kannadaprabha News   | Asianet News
Published : Nov 03, 2020, 03:49 PM IST
ಚಲುವರಾಯಸ್ವಾಮಿಗೆ ಅನಾರೋಗ್ಯ : ಕಾಂಗ್ರೆಸಿಗರಿಂದ ವಿಶೇಷ ಪೂಜೆ

ಸಾರಾಂಶ

ಕೈ ಮುಖಂಡ ಚೆಲುವರಾಯಸ್ವಾಮಿ ಅನಾರೋಗ್ಯಕ್ಕೆ  ತುತ್ತಾಗಿದ್ದು ಕಾಂಗ್ರೆಸ್ ಮುಖಂಡರು ಪೂಜಾ ಕಾರ್ಯಗಳನ್ನು ನೆರವೇರಿಸಿದ್ದಾರೆ. 

ನಾಗಮಂಗಲ (ನ.03): ಕೊರೋನಾ ಸೋಂಕಿಗೆ ಒಳಗಾಗಿರುವ ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ಶೀಘ್ರ ಗುಣಮುಖರಾಗಲೆಂದು ತಾಲೂಕಿನ ಚಿಣ್ಯ ಮತ್ತು ಹೊಣಕೆರೆ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರು ತಾಲೂಕಿನ ಸೌಮ್ಯಕೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯದಲ್ಲಿ ಸೌಮ್ಯಕೇಶ್ವರಿ ದೇವಿಗೆ ಅಭಿಷೇಕ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿದರು. ತಾಪಂ ಮಾಜಿ ಅಧ್ಯಕ್ಷ ಆರ್‌.ಕೃಷ್ಣೇಗೌಡ ಮಾತನಾಡಿ, ಸದಾ ಕಾಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಮಾಜಿ ಸಚಿವ ಚಲುವರಾಯಸ್ವಾಮಿ ಅವರಿಗೆ ಕೊರೋನಾ ದೃಢಪಟ್ಟಿದೆ. ಅವರು ಶೀಘ್ರ ಗುಣಮುಖರಾಗಿ ಬಂದು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದರು. 

ಮಂಡ್ಯ ನಗರಸಭೆ ಅಧ್ಯಕ್ಷರ ಮೆರವಣಿಗೆ ಕಂಡು ಕರೋನಾವೇ ಓಡಿಹೋಯ್ತು!

ಈ ವೇಳೆ ಟಿಎಪಿಸಿಎಂಎಸ್‌ ನಿರ್ದೇಶಕ ಅಲ್ಪಹಳ್ಳಿ ಕೃಷ್ಣೇಗೌಡ, ಹೊಣಕೆರೆ ಪಿಎಸಿಎಸ್‌ ನಿರ್ದೇಶಕ ಜಯರಾಮು, ಚಿಣ್ಯ ವೆಂಕಟೇಶ್‌, ಗಂಗನಹಳ್ಳಿ ವೆಂಕಟರಾಮು, ಗುಡ್ಡೇನಹಳ್ಳಿ ಕುಮಾರ್‌, ಸಾಮಕಹಳ್ಳಿ ಬೊಮ್ಮೇಗೌಡ ಹಾಜರಿದ್ದರು.

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು