ಬಸನಗೌಡರಿಗೆ ಚುನಾವಣಾ ಟಿಕೆಟ್‌ : ಕಾರ್ಯಕರ್ತರ ಒತ್ತಾಯ

By Kannadaprabha News  |  First Published Nov 3, 2020, 3:37 PM IST

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಇದೀಗ ಬಸನಗೌಡ ಅವರಿಗೆ ಟಿಕೆಟ್ ನೀಡಲು ಆಗ್ರಹಿಸಲಾಗಿದೆ


ಸಿಂಧನೂರು (ನ.03) : ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಆರ್‌.ಬಸನಗೌಡ ತುರ್ವಿಹಾಳ ಅವರು ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಜನಾನುರಾಗಿಯಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಯುವಕರಾಗಿರುವ ಅವರನ್ನು ಯುವ ಸಮುದಾಯ ಸೇರಿದಂತೆ ಎಲ್ಲ ಜನವರ್ಗಗಳು ಬೆಂಬಲಿಸುತ್ತಿವೆ. ಕಾರಣ ಅವರಿಗೆ ಭಾರತೀಯ ಜನತಾ ಪಾರ್ಟಿಯಿಂದ ಟಿಕೆಟ್‌ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಈ ಭಾಗದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯಲು ಆರ್‌.ಬಸನಗೌಡರು ಪ್ರೇರಣಾ ಶಕ್ತಿಯಾಗಿದ್ದಾರೆ. ಪಕ್ಷದ ಬಲವರ್ಧನೆಗೆ ಶ್ರಮಿಸಿ ಕಳೆದ ಬಾರಿ ಕೆಲವೇ ಮತಗಳಿಂದ ಪರಾಭವಗೊಂಡಿದ್ದರು. ಬಿಜೆಪಿ ಎಂದರೆ ಆರ್‌.ಬಸನಗೌಡರೆಂದೇ ಈ ಭಾಗದಲ್ಲಿ ಜನರು ಗುರುತಿಸುತ್ತಾರೆ. ಆದ್ದರಿಂದ ಅವರನ್ನು ಪಕ್ಷ ಗಣನೆಗೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Tap to resize

Latest Videos

ಪ್ರತಾಪಗೌಡ ಪಾಟೀಲರು ಪ್ರಥಮವಾಗಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿ ನಂತರ ಕಾಂಗ್ರೆಸ್‌ ಪಕ್ಷ ಸೇರಿದ್ದರು. ಸಿದ್ಧರಾಮಯ್ಯನವರು ಸಚಿವರನ್ನಾಗಿ ಮಾಡಲಿಲ್ಲ ಎನ್ನುವ ಕೋಪದಿಂದ ಸರ್ಕಾರ ಬುಡಮೇಲು ಮಾಡಿ ನ್ಯಾಯಾಲಯದಿಂದ ಅನರ್ಹ ಶಾಸಕ ಎಂದು ಪಟ್ಟಕಟ್ಟಿಕೊಂಡು ಹೊರಬಂದಿದ್ದಾರೆ. ಇದರಿಂದ ಮಸ್ಕಿ ಕ್ಷೇತ್ರದ ಮತದಾರರಿಗೆ ಅವರ ನಡವಳಿಕೆ ಬಗ್ಗೆ ತೀವ್ರ ವಿರೋಧವಿದೆ ಎಂದು ವಿವರಿಸಿದ್ದಾರೆ.

ರಾರಾ, ಶಿರಾದಲ್ಲಿ ಹೈವೋಲ್ಟೇಜ್‌ ಉಪಕದನ: 31 ಅಭ್ಯರ್ಥಿಗಳ ಭವಿಷ್ಯ ತೀರ್ಮಾನ!

ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕೆಂದರೆ ಬಸನಗೌಡ ತುರ್ವಿಹಾಳ ಅವರನ್ನೇ ಅಭ್ಯರ್ಥಿ ಎಂದು ಘೋಷಿಸಬೇಕು. ಇನ್ನೂ ಮನದಟ್ಟು ಮಾಡಬೇಕೆಂದರೆ ಪಕ್ಷದಿಂದ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿಸಬೇಕು. ಬಸನಗೌಡರನ್ನು ರಾಜಕೀಯವಾಗಿ ಮುಗಿಸಬೇಕೆನ್ನುವ ಉದ್ದೇಶದಿಂದ ಅವರ ಅನುಯಾಯಿಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ತೊಂದರೆ ಕೊಡುತ್ತಿದ್ದಾರೆ ಎಂದು ಮುಖಂಡರಾದ ಬಸನಗೌಡ ಪಾಟೀಲ್‌, ಮಹಾಂತೇಶ ಜಾಲವಾಡಿಗಿ, ನಾಗರಾಜ ಹಂಪನಾಳ ಆಪಾದಿಸಿದ್ದಾರೆ.

click me!