ಮೂವರು ಮುಖಂಡರು ಕಾಂಗ್ರೆಸ್‌ ಸೇರ್ಪಡೆ : ಹೆಚ್ಚಿನ ಕೈ ಬಲ

Kannadaprabha News   | Asianet News
Published : Nov 03, 2020, 03:23 PM IST
ಮೂವರು ಮುಖಂಡರು ಕಾಂಗ್ರೆಸ್‌ ಸೇರ್ಪಡೆ : ಹೆಚ್ಚಿನ ಕೈ ಬಲ

ಸಾರಾಂಶ

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡ ಬೆನ್ನಲ್ಲೇ ಮೂವರು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ

ಬಸವನಬಾಗೇವಾಡಿ (ನ.03):  ಪಟ್ಟಣದ ಪುರಸಭೆಗೆ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿರುವ 1ನೇ ವಾರ್ಡ್‌ನ ಸದಸ್ಯೆ ರಜಾಕಬಿ ಮಹತಾಬ ಬೊಮ್ಮನಹಳ್ಳಿ, 4ನೇ ವಾರ್ಡ್‌ನ ಸದಸ್ಯ ಪ್ರವೀಣಕುಮಾರ ಮಹಾಂತೇಶ ಪೂಜಾರಿ, 12ನೇ ವಾರ್ಡ್‌ನ ರೇಖಾ ಪರಶುರಾಮ ಬೆಕಿನಾಳ ಅವರು ಶನಿವಾರ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಈರಣ್ಣ ಪಟ್ಟಣ ಶೆಟ್ಟಿ ಸಮ್ಮುಖದಲ್ಲಿ ಪಿಕಾರ್ಡ್‌ ಬ್ಯಾಂಕ್‌ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಪಕ್ಷಕ್ಕೆ ಸೇರ್ಪಡೆಗೊಂಡ ಸದಸ್ಯರಿಗೆ ಪಕ್ಷದ ಶಾಲು ಹೊದಿಸಿ ಸನ್ಮಾನಿಸಿದ ಈರಣ್ಣ ಪಟ್ಟಣಶೆಟ್ಟಿಮಾತನಾಡಿ, ಪಕ್ಷಕ್ಕೆ ಸೇರ್ಪಡೆಗೊಂಡ ಮೂರು ಸದಸ್ಯರು ಹಿಂದೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಾಗಿದ್ದರು. ಪುರಸಭೆ ಚುನಾವಣೆ ಸಂದರ್ಭದಲ್ಲಿ ಕೆಲ ಗೊಂದಲಗಳಿಂದಾಗಿ ಅವರಿಗೆ ಪಕ್ಷದ ಟಿಕೆಟ್‌ ಸಿಗದೇ ಇರುವುದರಿಂದಾಗಿ ಅವರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಆಯ್ಕೆಯಾಗಿ ಪುನಃ ಪಕ್ಷಕ್ಕೆ ಬರುವುದಾಗಿ ಹೇಳಿದ್ದರು.

ಶಿರಾ ಬೈ ಎಲೆಕ್ಷನ್: ಮತಗಟ್ಟೆ ಹೊರಗೆ ಅಕ್ಕಿ ಇಟ್ಟುಕೊಂಡು ಮತಯಾಚನೆ..!

ಅದರಂತೆ ಅವರು ಇದೀಗ ಸ್ವಸಂತೋಷದಿಂದ ಯಾರ ಒತ್ತಡಕ್ಕೂ ಮಣಿಯದೇ ಮರಳಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ. ಈ ಮೂಲಕ ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಬಲವನ್ನು ಹೆಚ್ಚಳ ಮಾಡಿದ್ದಾರೆ. 23ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಪಕ್ಷೇತರ ಸದಸ್ಯೆ ರೇಖಾ ಕಲ್ಲು ಸೊನ್ನದ ಸಹ ಪಕ್ಷದೊಂದಿಗೆ ಇದ್ದಾರೆ ಎಂದರು.

ಇದೇ ಸಂದರ್ಭದಲ್ಲಿ 1ನೇ ವಾರ್ಡ್‌ನ ಕೆಲವರು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡರು. ಕಾಂಗ್ರೆಸ್‌ ಬ್ಲಾಕ್‌ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಪುರಸಭೆ ಮಾಜಿ ಉಪಾಧ್ಯಕ್ಷ ಸಂಗನಬಸು ಪೂಜಾರಿ, ಮುಖಂಡರಾದ ಭರತ ಅಗರವಾಲ, ಬಸವರಾಜ ಚೌರಿ, ಖಾಜಂಬರ ನದಾಫ್‌, ಮತಾಬ್‌ ಬೊಮ್ಮನಹಳ್ಳಿ, ಪರಶುರಾಮ ಬೆಕಿನಾಳ ಇತರರು ಇದ್ದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC