ಅಧ್ಯಕ್ಷೆ ಮಾಡ್ತೇನೆಂದು ಬೀದೀಲಿ ನಿಲ್ಲಿಸಿದ್ರು: ಕಣ್ಣೀರಿಟ್ಟ ಕೈ ನಾಯಕಿ

By Kannadaprabha News  |  First Published Oct 12, 2022, 5:39 AM IST

ನನ್ನನ್ನು ನಗರಸಭೆ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಕರೆ ತಂದು ಬೀದಿಯಲ್ಲಿ ನಿಲ್ಲಿಸಿ ಅನ್ಯಾಯ ಮಾಡ್ಬಿಟ್ರು ಎಂದು ಬಹಿರಂಗವಾಗಿಯೇ 19ನೇ ವಾರ್ಡ್‌ನ ನಗರಸಭೆ ಸದಸ್ಯೆ ಸುಮ ಸುಬ್ಬಣ್ಣ ಅವರು ಕಾಂಗ್ರೆಸ್‌ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.


ಕೊಳ್ಳೇಗಾಲ (ಅ.12):  ನನ್ನನ್ನು ನಗರಸಭೆ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಕರೆ ತಂದು ಬೀದಿಯಲ್ಲಿ ನಿಲ್ಲಿಸಿ ಅನ್ಯಾಯ ಮಾಡ್ಬಿಟ್ರು ಎಂದು ಬಹಿರಂಗವಾಗಿಯೇ 19ನೇ ವಾರ್ಡ್‌ನ ನಗರಸಭೆ ಸದಸ್ಯೆ ಸುಮ ಸುಬ್ಬಣ್ಣ ಅವರು ಕಾಂಗ್ರೆಸ್‌ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನಗರಸಭೆ (municipality))  ಅಧ್ಯಕ್ಷರ (President)  ಆಯ್ಕೆ ಮುಗಿಯುತ್ತಿದ್ದಂತೆ ಹೊರಬಂದು ಸುದ್ದಿಗಾರರೊಂದಿಗೆ ಕಣ್ಣೀರಿಡುತ್ತ ಸುಮ ಸುಬ್ಬಣ್ಣ ಅಸಮಾಧಾನ ಹೊರಹಾಕಿದ್ದಾರೆ. ಸಾಮಾನ್ಯ ವರ್ಗಕ್ಕೆ ಅಧ್ಯಕ್ಷರಾಗಲು ಅವಕಾಶವಿದೆ. ವೀರಶೈವ ಸಮಾಜದಿಂದ ಕಾಂಗ್ರೆಸ್‌ನಲ್ಲಿ (Congress) ಗೆದ್ದ ಏಕೈಕ ಸದಸ್ಯೆ ನಾನು, ನನಗೆ ಅವಕಾಶ ಕಲ್ಪಿಸಬಹುದಿತ್ತು. ವಾಟಾಳು ಮಠದ ಶ್ರೀಗಳು ಸೇರಿದಂತೆ ಅನೇಕ ವೀರಶೈವ ಸಮಾಜದ ಮುಖಂಡರು ಮಾಜಿ ಶಾಸಕರಾದ ಜಯಣ್ಣ ಸೇರಿದಂತೆ ಹಲವರಿಗೆ ಮನವಿ ಮಾಡಿದ್ದಾರೆ.

Tap to resize

Latest Videos

undefined

ಜಯಣ್ಣ ಅವರು ದೊಡ್ಡವರು, ಅವರು ನನಗೆ ನ್ಯಾಯ ಒದಗಿಸಬಹುದಿತ್ತು. ನನ್ನ ಪತಿ ಇದ್ದರೆ ನನಗೆ ಈ ಗತಿ ಬರುತ್ತಿರಲಿಲ್ಲ, ಜಯಣ್ಣ ಸಾಹೇಬರಿಗೆ ಎಲ್ಲವೂ ಗೊತ್ತಿದೆ, ಆದರೂ, ನನಗೆ ಅನ್ಯಾಯ ಮಾಡಿಬಿಟ್ರು ಎಂದು ಬಹಿರಂಗವಾಗಿಯೇ ಹೇಳುತ್ತ ಸುಮ ಅವರು ಕಣ್ಣಿರಿಟ್ಟರು.

ಸಾಮಾನ್ಯ ವರ್ಗಕ್ಕೆ ಅವಕಾಶ ಇದ್ದಾಗ, ನನಗೆ ಅವಕಾಶ ಕಲ್ಪಿಸದೆ ವರಿಷ್ಟರು ಇನ್ಯಾವಾಗ ನಮಗೆ ಅವಕಾಶ ನೀಡುತ್ತಾರೆ ಎಂದು ಪ್ರಶ್ನಿಸಿದರಲ್ಲದೆ ಕಾಂಗ್ರೆಸ್‌ ಪಕ್ಷದಿಂದ ಇನ್ನು ಮೇಲೆ ಸಾಮಾನ್ಯ ವರ್ಗಕ್ಕೆ ಟಿಕೆಟ್‌ ನೀಡಲೇ ಬೇಡಿ, ನಿಮಗೆ ಬೇಕಾದವರಿಗೆ ನೀಡಿ, ನನಗೂ ಜನರಿದ್ದಾರೆ, ನಾನು, ಏನೆಂದು ತೋರಿಸುವೆ ಎಂದರಲ್ಲದೆ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಮಾಜಿ ಶಾಸಕ ಜಯಣ್ಣ ಅವರೆಲ್ಲರೂ ನನಗೆ ಮೋಸ ಮಾಡಿದರು. ಬೀದಿಯಲ್ಲಿ ತಂದು ನಿಲ್ಲಿಸಿದ್ರು ಎಂದು ಕಣ್ಣೀರಿಡುತ್ತಲೆ ಪಕ್ಷದ ವರಿಷ್ಠರ ವಿರುದ್ಧ ಗರಮ್ಮಾದರು.

ಮುಂದಿನ ದಿನಗಳಲ್ಲಾದರೂ ಈ ತಾರತಮ್ಯ ನೀತಿ ಸರಿಹೋಗಲಿ, ನನಗಾದ ಸ್ಥಿತಿ ಇನ್ನಾರಿಗೂ ಬರದಿರಲಿ ಎಂದು ಕಣ್ಣೀರಿಡುತ್ತ ಮಾತು ಮುಂದುವರೆಸಿದರು. ಈ ವೇಳೆ ಸಮೀಪದಲ್ಲೆ ಇದ್ದ 1ನೇ ವಾರ್ಡ್‌ನ ಸದಸ್ಯೆ ಕವಿತಾ, ಸುಮ ಅವರನ್ನು ಸಮಾಧಾನ ಮಾಡಿ ಸಂತೈಸಿದರು.

ಮಧು ಬಂಗಾರಪ್ಪ ಕಾಂಗ್ರೆಸ್‌ನಲ್ಲೂ ಉಳಿಯಲ್ಲ 

 ಬಿಜೆಪಿಯಿಂದ ಸಮಾಜವಾದಿ ಅಲ್ಲಿಂದ ಜೆಡಿಎಸ್‌ ಈಗ ಕಾಂಗ್ರೆಸ್‌ಗೆ ಹೋಗಿದ್ದಾರೆ. ಶೇ.101 ಸತ್ಯ ಮಧು ಬಂಗಾರಪ್ಪ ಕಾಂಗ್ರೆಸ್‌ನಲ್ಲಿ ಉಳಿಯಲ್ಲ, ಮುಂದಿನ ಚುನಾವಣೆಗೆ ಮತ್ತೆ ಯಾವ ಪಕ್ಷ ಹುಡುಕುತ್ತಾರೋ? ಗೊತ್ತಿಲ್ಲ ಎಂದು ಸೊರಬ ಶಾಸಕ ಕುಮಾರ್‌ ಬಂಗಾರಪ್ಪ ಭವಿಷ್ಯ ನುಡಿದರು.

ಸಮ ಸಮಾಜಕ್ಕೆ ಶ್ರಮಿಸಿದ್ದ ನಾರಾಯಣ ಗುರು; ಮಧು ಬಂಗಾರಪ್ಪ

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಧು ಬಂಗಾರಪ್ಪ ಜೆಡಿಎಸ್‌ ಒಡೆದು ಯಾಕೆ ಹೊರಬಂದರು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ಮಧು ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಭೂತನ ಬಾಯಲ್ಲಿ ಭಗವದ್ಗೀತೆ:

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮಧು ಬಂಗಾರಪ್ಪ ಸ್ವತಃ ಹಗರಣಗಳಲ್ಲಿ ಭಾಗಿಯಾಗಿರುವುದು ಭೂತನ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗಿದೆ. ಮಧುಬಂಗಾರಪ್ಪ ಅಧಿಕಾರಾವಧಿಯಲ್ಲಿ ಸೊರಬ ತಾಲೂಕಿನಲ್ಲಿ ಬಗರ್‌ ಹುಕುಂನಲ್ಲಿ ಭ್ರಷ್ಟಾಚಾರ ನಡೆದಿದೆ. ಶರಾವತಿ ಡೆಂಟಲ್‌ ಕಾಲೇಜ್‌ ಹಗರಣ ಸೊರಬದಲ್ಲಿ ಬಗರ ಹುಕುಂ ಹಗರಣ ಎಲ್ಲದರಲ್ಲೂ ಮಧು ಬಂಗಾರಪ್ಪ ಇದಾರೆ. ತಂದೆ ಬಂಗಾರಪ್ಪನವರ ಸಮಾಧಿಯನ್ನು 10 ವರ್ಷಗಳಿಂದ ತಂದೆಯ ಸಮಾಧಿ ಮಾಡುತ್ತಲೇ ಇದ್ದಾರೆ. ಸಮಾಧಿ ಮಾಡುವ ಯೋಗ್ಯತೆ ಅವರಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ಬಂಗಾರಪ್ಪ ಸಮಾಧಿಯ ಸ್ಮಾರಕಕ್ಕೆ ಅನುದಾನ ಕೂಡ ಕೊಟ್ಟಿದ್ದರು. ಆದರೆ, ಅದು ಸರಿಯಾಗಿ ಬಳಕೆ ಆಗಿಲ್ಲ. ಕಾಂಗ್ರೆಸ್ಸಿಗರಿಗೆ ರಸ್ತೆ ಸೇತುವೆ ಮಾಡಿದರೆ ಸಂತೋಷ ಆಗೋಲ್ಲ ಪೆಟ್ರೋಲ್‌ ಬೆಲೆ ಇಳಿಕೆಯಾದರೂ ಸಂತೋಷ ಆಗೋಲ್ಲ ಯುಕ್ರೇನ್‌ ನಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದ್ರು ಸಂತೋಷ ಆಗಲ್ಲ ಎಂದು ಪ್ರಧಾನಿ ಹೇಳಿದ್ದು ಸತ್ಯ ಎಂದರು.

click me!