Karnataka Politics : ರಾಜ್ಯದ ಮುಂದಿನ ಸರ್ಕಾರ ಕಾಂಗ್ರೆಸಿನದ್ದು : ಈಗಲೇ ಖಚಿತ ಭವಿಷ್ಯ

Kannadaprabha News   | stockphoto
Published : Dec 05, 2021, 10:38 AM ISTUpdated : Dec 05, 2021, 10:41 AM IST
Karnataka Politics : ರಾಜ್ಯದ ಮುಂದಿನ ಸರ್ಕಾರ ಕಾಂಗ್ರೆಸಿನದ್ದು : ಈಗಲೇ ಖಚಿತ ಭವಿಷ್ಯ

ಸಾರಾಂಶ

ಬಡ ಮಕ್ಕಳಿಗೆ ನೀಡಲಾಗುತ್ತಿರುವ ಕೋಳಿ ಮೊಟ್ಟೆಯನ್ನು ಬೇಡ ಎನ್ನುವ ಮನುಸ್ಮೃತಿ ರಾಜಕಾರಣ  ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು ಎಂದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌

 ಮಾಲೂರು(ಡಿ.05):  ಬಡ ಮಕ್ಕಳಿಗೆ ನೀಡಲಾಗುತ್ತಿರುವ ಕೋಳಿ ಮೊಟ್ಟೆಯನ್ನು (Egg) ಬೇಡ ಎನ್ನುವ ಮನುಸ್ಮೃತಿ ರಾಜಕಾರಣ (Politics)  ಮಾಡುತ್ತಿರುವ ಈ ರಾಜ್ಯ ಸರ್ಕಾರವನ್ನು(Karnataka govt) ಕಿತ್ತೊಗೆಯಬೇಕು ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ (Ramesh kumar) ಹೇಳಿದರು.  ಅವರು ಪಟ್ಟಣದ ಶ್ರೀ ರಂಗಂ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಕಾಂಗ್ರೆಸ್‌ (congress) ಘಟಕ ಆಯೋಜಿಸಿದ್ದ ವಿಧಾನ ಪರಿಷತ್‌ ಚುನಾವಣಾ (MLC Election) ಪ್ರಚಾರ ಸಭೆಯಲ್ಲಿ ಮಾತನಾಡಿ, ಕೋಳಿ ಬೆಳೆಸುವವನು ರೈತ, ಕೋಳಿ ಮೊಟ್ಟೆ ತಿನ್ನುವುದು ಹಾಸ್ಟೆಲ್‌ನ ಬಡ ಮಕ್ಕಳು. ಅದನ್ನು ಬೇಡ ಎನ್ನುಲು ನೀವ್ಯಾರೂ. ರಾಜ್ಯದಲ್ಲಿ ಇಂತಹ ಮನುಸ್ಮೃತಿ ರಾಜಕಾರಣ ಮಾಡಲು ಕಾಂಗ್ರೆಸ್‌ (Congress) ಬಿಡುವುದಿಲ್ಲ ಎಂದು ಗುಡುಗಿದರು.

  ಇಂದಿನ ರಾಜ್ಯ ಸರ್ಕಾರ (Karnataka govt) ಬೇಕಾದರೆ ಗಂಟೆ ಹಿಡಿದು ಕೊಂಡು ಜುಟ್ಟು ಬಿಟ್ಟುಕೊಂಡು ಹೋಗಲಿ ಎಂದರು. ಇಂತಹ ಮನು ವಾದದ ಈ ರಾಜ್ಯ ಸರ್ಕಾರವನ್ನು ಜನತೆ ಕಿತ್ತು ಒಗೆಯಬೇಕು ಎಂದ ಮಾಜಿ ಸಭಾಪತಿಗಳು ರೈತರ ಬಗ್ಗೆ ದಮನಿತರ ಬಗ್ಗೆ ಕಿಂಚಿತ್ತು ಯೋಚಿಸದ ಸರ್ಕಾರವು ರಾಜ್ಯಕ್ಕೆ ಬೇಕಾ ಎಂದು ಪ್ರಶ್ನಿಸಿದರು.ಇಂದಿರಾ ಗಾಂಧಿ (Indira Gandhi), ಅಂಬೇಡ್ಕರ್‌ ಆಶಯಗಳನ್ನು ನಾವು ಮುಂದುವರೆಸುತ್ತೇವೆ ಎಂದ ರಮೇಶ್‌ ಕುಮಾರ್‌ (Ramesh Kumar) ಅವರು ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ರೈತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ನಿರ್ಮಿಸುವ ಚಿಂತನೆ ಕಾಂಗ್ರೆಸ್‌ ಪಕ್ಷದಾಗಿದೆ. ಅದನ್ನು ರಾಜ್ಯದಲ್ಲಿ ಮುಂಬರಲಿರುವ ನಮ್ಮ ಸರ್ಕಾರ ಮೂಲಕ ಮಾಡೇ ತೀರುತ್ತೇವಿ ಎಂದರು. ಪೂರ್ವದಲ್ಲಿ ಸೂರ‍್ಯ ಹುಟ್ಟುವಷ್ಟೇ ಸತ್ಯ ಮುಂದಿನ ಸರ್ಕಾರ ಕಾಂಗ್ರೆಸ್‌ ಆಗಿರುವುದರಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

ಕೋಲಾರ (Kolar) ಜಿಲ್ಲೆ ಕಾಂಗ್ರೆಸ್‌ ಭದ್ರ ಕೋಟೆಯಾಗಿದ್ದು,ನಾಯಕರ ಭಿನ್ನಾಭಿಪ್ರಾಯದಿಂದ ಇತರ ಪಕ್ಷಕ್ಕೆ ಅವಕಾಶ ಸಿಕ್ಕಿತ್ತು. ಈಗ ಪಕ್ಷದ ಎಲ್ಲ ಮುಖಂಡರುಗಳು ಒಗ್ಗಟ್ಟಾಗಿರುವುದರಿಂದ ಭದ್ರ ಕೋಟೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದರು.

ನಿಮ್ಮ ಯೋಗ ಕ್ಷೇಮಕ್ಕೆ ನಿಲ್ಲುವವ ನಾನು:  ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ನಾನು ಅಧಿಕಾರಕ್ಕೆ ಬಂದಾತ. ತಾಲೂಕಿನಲ್ಲಿ ಎಲ್ಲ ಅಧಿಕಾರಗಳು ಜೆಡಿಎಸ್‌ (JDS), ಬಿಜೆಪಿ (BJP) ಪಾಲಾಗಿತ್ತು. ಆದರೆ ಪ್ರತಿ ಹಂತ ಜನ ಪ್ರತಿನಿಧಿಗಳೂಡನೆ ಉತ್ತಮ ಬಾಂಧವ್ಯ ಬೆಳೆಸಿಕೊಂಡ ಹಿನ್ನೆಲೆಯಲ್ಲಿ ಹಾಲಿ ಇರುವ 500ಕ್ಕೂ ಹೆಚ್ಚು ಮತದಾರರಲ್ಲಿ 400ಕ್ಕೂ ಹೆಚ್ಚು ನಮ್ಮ ಪರವಾಗಿ ನಿಂತಿದ್ದಾರೆ. ಹಣದಿಂದ ನಿಮ್ಮನ್ನು ಖರೀದಿಸಲು ಹೊರಟ್ಟಿರುವವರು ನಿಮ್ಮನ್ನು ಮರೆಸುವುದು ಈ ಚುನಾವಣೆಯ ಮತದಾನ ತನಕ. ಆದರೆ ನಂತರವೂ ನಿಮ್ಮ ಯೋಗ ಕ್ಷೇಮಕ್ಕೆ ನಿಲ್ಲುವವನ್ನು ನಾನು ಮಾತ್ರ ಎಂದು ಮರೆಯಬೇಡಿ ಎಂದರು.

ಜಿಲ್ಲಾ ಉಸ್ತುವಾರಿ ಬಿ.ಕೆ.ಹರಿಪ್ರಸಾದ್‌, ಶಾಸಕ ಶಿವಶಂಕರ ರೆಡ್ಡಿ, ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಅಭ್ಯರ್ಥಿ ಎಂ.ಎಲ್‌.ಅನಿಲ್‌ ಕುಮಾರ್‌, ಮಾಜಿ ಶಾಸಕ ಕೊತ್ತೂರು ಮಂಜುನಾಥ್‌, ಡಾ.ಎಂ.ಸಿ.ಸುಧಾಕರ್‌, ಎ.ನಾಗರಾಜ್‌ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಹಲವು ಮುಖಂಡರು ಮಾಜಿ ಶಾಸಕ ಎ.ನಾಗರಾಜು ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಿದರು.

ಎಂಎಲ್‌ಸಿ ನಜೀರ್‌ ಅಹಮದ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಧುಸೂದನ್‌, ವಿಜಯನರಸಿಂಹ, ಆಶೋಕ್‌ ಕುಮಾರ್‌, ಲಕ್ಷ್ಮೇನಾರಾಯಣ್‌, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಅಶ್ವತ್ಥ ರೆಡ್ಡಿ, ಪ್ರವೀಣ್‌,ನವೀನ್‌, ಲಿಂಗಾಪುರ ಕಿಟ್ಟಿ, ಆನೇಪುರ ಹನುಮಂತಪ್ಪ, ಎಂ.ವಿ.ಹನುಮಂತಪ್ಪ, ಅಂಜನಿ ಸೋಮಣ್ಣ, ಮುನಿರಾಜು ಇನ್ನಿತತರು ಇದ್ದರು.

ನಾಯಕರು ಒಟ್ಟಾಗಿರುವು ಖುಷಿ ತಂದಿದೆ: ಕೃಷ್ಣಭೈರೇಗೌಡ

ಮಾಜಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ನಾಯಕರ ಭಿನ್ನಾಭಿಪ್ರಾಯಗಳಿಂದ ಪಕ್ಷದ ಅಭಿವೃದ್ಧಿಗೆ ಮಾರಕವಾಗಿದ್ದು, ಈಗ ಪಕ್ಷದಲ್ಲಿ ಬಹಳ ವರ್ಷದ ನಂತರ ಎಲ್ಲರೂ ಒಂದೇ ವೇದಿಕೆ ಮೇಲೆ ಬಂದಿರುವುದು ಶುಭಸೂಚನೆ. ಈ ಅಮೃತ ಘಳಿಗೆ ಮುಂದುವರೆಯಬೇಕಾದರೆ ಮತದಾರರು ಹೆಚ್ಚಿನ ಅಂತರದಲ್ಲಿ ಪಕ್ಷದ ಅಭ್ಯರ್ಥಿ ಅನಿಲ್‌ ಕುಮಾರ್‌ ಅವರನ್ನು ಗೆಲ್ಲಿಸುವ ಮೂಲಕ ಒಗ್ಗಟ್ಟು ಮುಂದುವರಿಕೆಗೆ ಪ್ರೇರಣೆ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇಲ್ಲ.ಆದರೂ ಹಣವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದು, ಜನತೆ ಈ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ. ಇದುವರೆಗೂ ಜಿಲ್ಲೆಗೆ ಒಂದೇ ಒಂದು ಕೊಡುಗೆ ನೀಡದ ಬಿಜೆಪಿ ಯನ್ನು ತಿರಸ್ಕರಿಸಿ ಎಂದ ಕೃಷ್ಣ ಭೈರೇಗೌಡ ಅವರು, 1400 ಕೋಟಿ ರು. ವ್ಯಯ ಮಾಡಿ ಕೆ.ಸಿ.ವ್ಯಾಲಿ ಮೂಲಕ ಜಿಲ್ಲೆಯಲ್ಲಿ ಜೀವ ನದಿ ಹರಿಯುವಂತೆ ಕೆರೆಗಳನ್ನು ತುಂಬಿಸಿರುವ ಕಾಂಗ್ರೆಸ್‌ಗೆ ನಿಮ್ಮ ಮತ ಇರಲಿ ಎಂದರು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ