* ಮಾಲ್, ಸಿನಿಮಾ ಮಂದಿರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ
* ಮೊಬೈಲ್ ಸಂಖ್ಯೆ ಪಡೆದು ಆ್ಯಪ್‌ನಲ್ಲಿ ತಪಾಸಣೆ
* ಮೇಲ್ವಿಚಾರಣೆ ಅಷ್ಟೇ ಬಿಬಿಎಂಪಿ ಜವಾಬ್ದಾರಿ
ಬೆಂಗಳೂರು(ಡಿ.05): ಬಿಬಿಎಂಪಿ(BBMP) ನಿರ್ದೇಶನದ ಬೆನ್ನೆಲ್ಲೆ ಎಚ್ಚೆತ್ತುಕೊಂಡ ನಗರದ ಮಾಲ್‌ಗಳಲ್ಲಿ(Shopping Mall) ಸಿಬ್ಬಂದಿ ಶನಿವಾರ ಕೊರೋನಾ ನಿಯಮ ಪಾಲನೆಗಾಗಿ ಕಠಿಣ ಕ್ರಮ ಕೈಗೊಂಡಿದ್ದು, ಎರಡು ಡೋಸ್ ಕೊರೋನಾ ಲಸಿಕೆ ಪಡೆದವರಿಗಷ್ಟೇ ಮಾಲ್ ಪ್ರವೇಶಿಸುವುದನ್ನು ಖಾತರಿ ಪಡಿಸಿಕೊಳ್ಳಲು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು ಕಂಡು ಬಂತು.
ಬಿಬಿಎಂಪಿ ಶುಕ್ರವಾರವೇ ನಗರದ ವಿವಿಧ ಮಾಲ್‌ಗಳಿಗೆ ಕೊರೋನಾ ಮಾರ್ಗಸೂಚಿ(Corona Guidelines) ಪಾಲಿಸುವಂತೆ ಹಾಗೂ ಎರಡು ಡೋಸ್ ಪಡೆದವರಿಗೆ ಮಾತ್ರ ಮಾಲ್ ಪ್ರವೇಶಕ್ಕೆ ಅವಕಾಶ ನೀಡಬೇಕು. ಇದರ ಹೊಣೆ ಸಂಪೂರ್ಣ ಆಯಾ ಮಾಲ್‌ಗಳೇ ವಹಿಸಿಕೊಳ್ಳಬೇಕೆಂದು ಸೂಚಿಸಿದ್ದರು. ಅದರಂತೆ ಶನಿವಾರ ಬೆಳಗ್ಗೆಯಿಂದಲೇ ಗುರುಡಾ ಮಾಲ್, ಮೆಜೆಸ್ಟಿಕ್‌ನ ಲುಲು, ಮಂತ್ರಿ, ಓರಾಯನ್ ಸೇರಿದಂತೆ ವಿವಿಧ ಮಾಲ್‌ಗಳಲ್ಲಿ ನಿಗಾ ವಹಿಸಲಾಯಿತು.
ಮಾಲ್‌ಗಳ ಮುಖ್ಯದ್ವಾರ, ಬೆಸ್‌ಮೆಂಟ್ ಪಾರ್ಕಿಂಗ್ ಸ್ಥಳ ಸೇರಿದಂತೆ ಸಾರ್ವಜನಿಕರು ಒಳ ಪ್ರವೇಶಿಸುವ ಎಲ್ಲ ಕಡೆಗಳಲ್ಲೂ ಸಿಬ್ಬಂದಿ ಕಾರ್ಯ ನಿರ್ವಹಿಸಿದರು. ವ್ಯಕ್ತಿಗಳಿಂದ ಕೊರೋನಾ(Coronavirus) ಎರಡು ಡೋಸ್ ಪಡೆದಿರುವ ಬಗ್ಗೆ ದಾಖಲೆ ಸಹಿತ ಮಾಹಿತಿ ಪಡೆದಿದ್ದಾರೆ. ದಾಖಲೆ ಇಲ್ಲವಾದಲ್ಲಿ ಆಧಾರ ಸಂಖ್ಯೆ ಪಡೆದು ಮೈ ಕೋವಿಡ್ ಆ್ಯಪ್‌ನಲ್ಲಿ ನಮೂದಿಸಿ ತಪಾಸಣೆ ನಡೆಸಿದ್ದಾರೆ. ಎರಡು ಡೋಸ್ ಪಡೆದ ಬಗ್ಗೆ ಖಚಿತತೆ ದೊರೆತ ನಂತರವೇ ಶಾಪಿಂಗ್(Shopping) ಅವಕಾಶ ನೀಡಲಾಗಿದೆ.
undefined
Covid-19 Variant: ಓಮಿಕ್ರೋನ್ ವಿದೇಶದಿಂದ ಬಂದಿಲ್ಲ, ಭಾರತದಲ್ಲೇ ಇದೆ : ಡಾ. ರಾಕೇಶ್ ಮಿಶ್ರಾ!
ಇದರ ಜತೆಗೆ ಕಡ್ಡಾಯ ಸ್ಯಾನಿಟೈಸ್(Sanitizer) ಬಳಕೆ ಮತ್ತು ಮಾಸ್ಕ್(Mask) ಧರಿಸುವಂತೆ ಸಾರ್ವಜನಿಕರಿಗೆ ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ಮಾಲ್ ಒಳಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಗತ್ಯ ಕ್ರಮ ವ್ಯವಸ್ಥೆ ಜತೆಗೆ ಥರ್ಮಲ್ ಸ್ಕ್ಯಾನಿಂಗ್ ತಪಾಸಣೆ ಮಾಡಲಾಗಿದೆ. ಸಾರ್ವಜನಿಕರು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ಮಾಲ್ ಸಿಬ್ಬಂದಿಯೊಬ್ಬರು ತಿಳಿಸಿದರು.
ಅಶೋಕ್ ನಗರ ವ್ಯಾಪ್ತಿಯ ಗರುಡಾ ಮಾಲ್‌ನಲ್ಲಿ ಸರ್ಕಾರದ ನಿಯಮ ಪಾಲನೆ ಜತೆಗೆ ಮುಂಜಾಗೃತ ದೃಷ್ಟಿಯಿಂದ ಬಿಬಿಎಂಪಿ ಆರೋಗ್ಯ ಸಿಬ್ಬಂದಿಯಿಂದ ಸಾರ್ವಜನಿಕರಿಗೆ ಲಸಿಕೆ(Vaccine) ವಿತರಣೆ ನಡೆಯಿತು. ಹೊಸ ತಳಿ ಒಮಿಕ್ರೋನ್(Omicron) ವೈರಸ್ ಭಿತಿ ರಾಜ್ಯದೆಲ್ಲೆಡೆ ಹೆಚ್ಚಾಗಿದೆ. ಈ ಸಂಬಂಧ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಇದನ್ನು ಪಾಲಿಸುವ ನಿಟ್ಟಿನಲ್ಲಿ ಓರಾಯನ್ ಮಾಲ್‌ಗಳಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಬ್ರಿಗೇಡ್ ಗ್ರೂಪ್ ಓರಾಯನ್ ಮಾಲ್ ಕಾರ್ಯಾಚರಣೆ ಮುಖ್ಯಸ್ಥ ಸುನಿಲ್ ಮುನ್ಷಿ ಮಾಹಿತಿ ನೀಡಿದರು.
ಮೇಲ್ವಿಚಾರಣೆ ಅಷ್ಟೇ ಬಿಬಿಎಂಪಿ ಜವಾಬ್ದಾರಿ
ಎರಡು ಡೋಸ್ ಪಡೆದವರಿಗೆ ಮಾತ್ರ ಮಾಲ್‌ಗೆ ಅವಕಾಶ ವಿಚಾರಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ(Gaurav Gupta) ಪ್ರತಿಕ್ರಿಯಿಸಿ, ಶುಕ್ರವಾರ ರಾತ್ರಿಯೇ ನಗರದ ಮಾಲ್‌ಗಳಿಗೆ ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದೇವೆ. ಎರಡು ಡೋಸ್ ಲಸಿಕೆ ಪಡೆದವರ ಮಾಹಿತಿ ಪರಿಶೀಲನೆ ಹೊಣೆ ಆಯಾ ಮಾಲ್‌ಗಳ ಮುಖ್ಯಸ್ಥರಿಗೆ, ಸಿಬ್ಬಂದಿಗೆ ವಹಿಸಲಾಗಿದೆ. ಮಾಲ್‌ಗಳಲ್ಲಿ ಕೊರೋನಾ ನಿಯಮ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿದೆಯೋ? ಇಲ್ಲವೊ ಎಂಬುದನ್ನು ಮಾತ್ರ ಬಿಬಿಎಂಪಿ ಅಧಿಕಾರಿಗಳು ಗಮನಿಸಲಿದ್ದಾರೆ. ಪಾಲನೆ ಆಗದಿದ್ದಲ್ಲಿ ಅಂತಹ ಮಾಲ್‌ಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದೇವೆ ಎಂದು ತಿಳಿಸಿದರು.
Covid Vaccine: ಕೊರೋನಾ ಯೋಧರಿಗೂ 2ನೇ ಡೋಸ್ ಬೇಡ್ವಂತೆ..!
ಬೆಳಗಾವಿ ಅಧಿವೇಶನಕ್ಕೆ 2 ಡೋಸ್ ಲಸಿಕೆ ಕಡ್ಡಾಯ
ಡಿ.13ರಿಂದ ಆರಂಭವಾಗಲಿರುವ ಬೆಳಗಾವಿಯ(Belagavi) ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ(Winter Session) ಪಾಲ್ಗೊಳ್ಳುವವರಿಗೆ ಎರಡೂ ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ.
ಸುದ್ದಿಗಾರರಿಗೆ ಶನಿವಾರ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ‘ಬೆಳಗಾವಿ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಅಧಿವೇಶನದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಸ್ಯಾನಿಟೈಸ್ ಮಾಡುವುದು ಮತ್ತು ಆಸನ ವ್ಯವಸ್ಥೆಯನ್ನು ಕೋವಿಡ್ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡುವ ಮೂಲಕ ಸುರಕ್ಷಿತವಾಗಿ ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸಲಾಗುವುದು’ ಎಂದರು.