ತಣ್ಣಗಿರುವ ದೋಸೆ ನೀಡಿದ ಹೊಟೆಲ್‌ಗೆ 7,000 ರೂ ದಂಡ, ಬೆಂಗಳೂರು ಮಹಿಳೆ ಹೋರಾಟಕ್ಕೆ ಸಿಕ್ಕಿತು ಫಲ!

By Chethan Kumar  |  First Published Jun 25, 2024, 3:08 PM IST

ಮಸಾಲೆ ದೋಸೆ ಆರ್ಡರ್ ಮಾಡಿದ ಮಹಿಳೆಗೆ ತಣ್ಣಗಿರುವ ದೋಸೆ ನೀಡಲಾಗಿದೆ. ಪ್ರಶ್ನಿಸಿದರೆ ಹೊಟೆಲ್ ಸಿಬ್ಬಂದಿಗಳು ಗದರಿಸಿದ್ದಾರೆ. ಆದರೆ ಮಹಿಳೆ ಕಳೆದೆರಡು ವರ್ಷದಿಂದ ಹೋರಾಟ ಮಾಡಿ ಇದೀಗ ಹೊಟೆಲ್‌‌ಗೆ ಗ್ರಾಹಕರ ಕಮಿಷನ್ ನ್ಯಾಯಾಲಯ 7,000 ರೂಪಾಯಿ ದಂಡ ವಿಧಿಸಿದೆ.


ಬೆಂಗಳೂರು(ಜೂ.25) ಕುಟುಂಬದ ತೆರಳುತ್ತಿದ್ದಾಗೆ ಹೊಟೆಲ್‌ಗೆ ತೆರಳಿ ದೋಸೆ ಆರ್ಡರ್ ಮಾಡಿದ ಮಹಿಳೆಗೆ ತಣ್ಣಗಿರುವ ದೋಸೆ ನೀಡಿದ್ದಾರೆ. ಈ ದೋಸೆ ತಣ್ಣಗಿದೆ, ಬಿಸಿಯಾದ ದೋಸೆ ಮಾಡಿಕೊಡಿ ಎಂದರೆ ಸಿಬ್ಬಂದಿಗಳು ಗದರಿಸಿ ಕಳುಹಿಸಿದ್ದಾರೆ. ಆಕ್ರೋಶಗೊಂಡ ಮಹಿಳೆ ಗ್ರಾಹಕರ ಕಮಿಷನ್‌ನಲ್ಲಿ ದೂರು ನೀಡಿದ್ದಾರೆ. ಇದೀಗ  ಮಹಿಳೆ ಕಳೆದ ಎರಡು ವರ್ಷದಿಂದ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ. ತಣ್ಣಗಿರುವ ದೋಸೆ ನೀಡಿ ಗದರಿಸಿದ ಹೊಟೆಲ್‌ಗೆ ತಕ್ಕ ಪಾಠ ಕಲಿಸುವಲ್ಲಿ ಮಹಿಳೆ ಯಶಸ್ವಿಯಾಗಿದ್ದಾರೆ. ಹೊಟೆಲ್‌ಗೆ 7,000 ರೂಪಾಯಿ ದಂಡ ವಿಧಿಸಲಾಗಿದೆ.

ಕೋರಮಂಗಲದ 56 ವರ್ಷದ ತಹರಾ ಕುಟುಂಬದ ಜೊತೆ ಬೆಂಗಳೂರಿನಿಂದ ಹಾಸನಕ್ಕೆ ಪ್ರವಾಸ ಹೊರಟಿದ್ದರು. ಈ ವೇಳೆ ಬೆಂಗಳೂರಿನ ಹೊರವಲಯದ ಉಡುಪಿ ಗಾರ್ಡನ್ ಹೊಟೆಲ್‌ಗೆ ತೆರಳಿದ್ದಾರೆ. ಮಹಿಳೆ ದೋಸೆ ಆರ್ಡರ್ ಮಾಡಿದ್ದಾರೆ. ಆದರೆ ಮೊದಲೆ ರೆಡಿ ಮಾಡಿದ್ದ ತಣ್ಣಗಿರುವ ದೋಸೆಯನ್ನು ಮಹಿಳೆಗೆ ನೀಡಲಾಗಿದೆ. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಮಹಿಳೆ ಬೇರೆ ದೋಸೆ ಮಾಡಿಕೊಡುವಂತೆ ಒತ್ತಾಯಿಸಿದ್ದಾಳೆ. 

Latest Videos

undefined

ಬೆಂಗಳೂರಿಂದ ಹೊರಟ ಏರ್ ಇಂಡಿಯಾದಲ್ಲಿ ಪ್ರಯಾಣಕನಿಗೆ ಶಾಕ್, ಆಹಾರದಲ್ಲಿ ಸಿಕ್ತು ಕಬ್ಬಿಣದ ತುಂಡು!

ಮಹಿಳೆ ಬೇಡಿಕೆಗೆ ಸೊಪ್ಪು ಹಾಕದ ಸಿಬ್ಬಂದಿಗಳು ಕೇಳಿಸಿಕೊಳ್ಳದ ರೀತಿಯಲ್ಲಿ ತಮ್ಮ ಪಾಡಿಗೆ ಇದ್ದರು. ಮತ್ತೆ ವಿನಂತಿಸಿದ ಮಹಿಳೆಗೆ ಹೊಟೆಲ್ ಸಿಬ್ಬಂದಿಗಳು ಗದರಿಸಿದ್ದಾರೆ. ದೋಸೆ ಇಡೀ ದಿನ ಬಿಸಿ ಇರುವುದಿಲ್ಲ. ಬದಲಿಸಿಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಬೆಳಗಿನ ಆಹಾರ ಮಿಸ್ ಆಗಿದೆ. ಇದರ ಪರಿಣಾಮ ಮಹಿಳೆ ಬಿಪಿ-ಶುಗರ್ ವ್ಯತ್ಯಾಸವಾಗಿದೆ. ಪರಿಣಾಮ ಅದೇ ದಿನ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಎದುರಾಗಿದೆ.

ಆರೋಗ್ಯದ ಏರುಪೇರಾಗಿ ಕಾರಣರಾದ ಹೊಟೆಲ್ ವಿರುದ್ದ ಮಹಿಳೆ ಗ್ರಾಹಕರ ವೇದಿಕೆಯಲ್ಲಿ ದೂರು ಸಲ್ಲಿಸಿದ್ದಾರೆ. ಹೊಟೆಲ್‌ನಲ್ಲಿನ ಬಿಲ್ ಸೇರಿದಂತೆ ಇತರ ಮಾಹಿತಿಗಳನ್ನು ಮಹಿಳೆ ನೀಡಿದ್ದಾಳೆ. ಈ ಕುರಿತು ದೂರು ಸ್ವೀಕರಿಸಿ ತನಿಖೆ ನಡೆಸಿದ ಕಮಿಷನ್ ತಂಡ, ಹೊಟೆಲ್ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ.

ಈ ವೇಳೆ ಮಹಿಳೆ ದೋಸೆಯನ್ನು ಹಿಡಿದು ವಾಪಸ್ ತೆರಳಿ ಸಿಬ್ಬಂದಿಗಳಲ್ಲಿ ವಾದ ಮಾಡುತ್ತಿರುವುದು ಹಾಗೂ ಸಿಬ್ಬಂದಿಗಳುು ಗದರಿಸುತ್ತಿರು ವಿಡಿಯೋಗಳು ಲಭ್ಯವಾಗಿದೆ. 2022ರಲ್ಲಿ ದಾಖಲಾದ ಪ್ರಕರಣದ ಸುದೀರ್ಘ ವಿಚಾರಣೆ ನಡೆದಿದೆ. ಬಳಿಕ ಇದೀಗ ತೀರ್ಪು ಹೊರಬಿದ್ದಿದೆ. ಈ ಪ್ರಕರಣದಲ್ಲಿ ಹೊಟೆಲ್ ತಪ್ಪಸಗಿದೆ ಎಂದು ಗ್ರಾಹಕರ ಕಮಿಷನ್ ಹೇಳಿದೆ. ಹೀಗಾಗಿ 5,000 ರೂಪಾಯಿ ದಂಡ ಹಾಗೂ 2,000 ರೂಪಾಯಿ ವ್ಯಾಜ್ಯಕ್ಕಾಗಿ ಖರ್ಚು ಮಾಡಿದ ವೆಚ್ಚ ಒಟ್ಟು 7,000 ರೂಪಾಯಿ ದಂಡ ಪಾವತಿಸುವಂತೆ ಉಡುಪಿ ಗಾರ್ಡನ್ ಹೊಟೆಲ್‌ಗೆ ಆದೇಶಿಸಿದೆ.

ಯುವಜನರಲ್ಲಿ ಕ್ಯಾನ್ಸರ್ ಹೆಚ್ಚಳ; ಆಹಾರವೇ ಕಾರಣ!
 

click me!