ಲವ್ ಜಿಹಾದ್ ಬಗ್ಗೆ ಎಷ್ಟೇ ಹೇಳಿದ್ರೂ ಕಾಂಗ್ರೆಸ್ ತಲೆಕೆಡಿಸಿಕೊಂಡಿಲ್ಲ: ಸಚಿವ ಆರ್.ಅಶೋಕ್

By Suvarna News  |  First Published Dec 15, 2022, 3:00 PM IST

ಲವ್ ಜಿಹಾದ್ ಹಾಗೂ PFI ಸಂಘಟನೆ ಕುರಿತು ಕೋಲಾರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಲವ್ ಜಿಹಾದ್ ಬಗ್ಗೆ ಎಷ್ಟೇ ಹೇಳಿದ್ರೂ ಕಾಂಗ್ರೆಸ್ ನವರು ತಲೆಕೆಡಿಸಿಕೊಂಡಿಲ್ಲ ಎಂದಿದ್ದಾರೆ.


ಕೋಲಾರ (ಡಿ.15): ಲವ್ ಜಿಹಾದ್ ಹಾಗೂ PFI ಸಂಘಟನೆ ಕುರಿತು ಕೋಲಾರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಲವ್ ಜಿಹಾದ್ ಬಗ್ಗೆ ಎಷ್ಟೇ ಹೇಳಿದ್ರೂ ಕಾಂಗ್ರೆಸ್ ನವರು ತಲೆಕೆಡಿಸಿಕೊಂಡಿಲ್ಲ. ದಿನ ನಿತ್ಯ ಅಮಾಯಕ ಹೆಣ್ಣು ಮಕ್ಕಳು ಬಲಿ ಆಗ್ತಿದ್ದಾರೆ. ನಾನು ಗೃಹ ಸಚಿವ ಇದ್ದಾಗ ಇದರ ಬಗ್ಗೆ ತಿಳಿದುಕೊಂಡಿದ್ದೇನೆ. ಮೊದಲು ಇದರ ಬಗ್ಗೆ ಟ್ರೈನಿಂಗ್ ನೀಡಲಾಗುತ್ತೆ. ಒಬ್ಬ ಹಿಂದೂ ಯುವತಿಯನ್ನು ಮತಾಂತರ ಮಾಡಿದ್ರೆ ನಾಲ್ಕೈದು ಲಕ್ಷ ನೀಡಲಾಗ್ತಿದೆ. ಮುಸ್ಲಿಂ ಯುವಕರಿಗೆ ಬಾಡಿ ಬಿಲ್ಡಿಂಡ್, ಜಿಮ್, ಸಿನಿಮಾ ಗೆ ಕರೆದುಕೊಂಡು ಹೋಗೋದಕ್ಕೆ ಹಣ ಖರ್ಚು ಮಾಡ್ತಿದ್ದಾರೆ. ಮತಾಂತರ ಆದ ಬಳಿಕ ಕೆಲವೇ ತಿಂಗಳಲ್ಲಿ ಇನ್ನೆರೆಡು ಮದುವೆ ಆಗ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಕಟ್ಟನಿಟ್ಟಾಗಿ ಜಾರಿಗೆ ಬರಬೇಕು ಎಂದು ಸಿಎಂ ಜೊತೆ ಚರ್ಚೆ ಮಾಡ್ತೇನೆ. ದೇಶದ್ರೋಹಿ ಸಂಘಟನೆಗಳನ್ನು, ಮಟ್ಟ ಹಾಕಿ ಬಗ್ಗು ಬಡಿಯುತ್ತೇವೆ. ಇವರು ಒಂದು ಸಂಘಟನೆ ಬ್ಯಾನ್ ಮಾಡಿದ್ರೆ ಇನ್ನೊಂದು ಹೊಸ ಸಂಘಟನೆ ಮಾಡುವ ಗೋಮುಕ ವ್ಯಾಘ್ರಗಳು ಎಂದಿದ್ದಾರೆ.

ಇನ್ನು ತಮಿಳುನಾಡು ರಾಜ್ಯದಲ್ಲಿ ದೇವಸ್ಥಾನಗಳಲ್ಲಿ ಮೊಬೈಲ್ ಬಂದ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದ ಮಾತನಾಡಿದ ಅಶೋಕ್, ಮೊಬೈಲ್ ನಿಷೇಧ ಮಾಡಿರುವುದು ಒಳ್ಳೆಯದು. ಸಚಿವೆ ಶಶಿಕಲಾ ಜೊಲ್ಲೆ ಬಳಿ ನಾನು ಸಹ ಚರ್ಚೆ ಮಾಡುತ್ತೇನೆ. ಮೊಬೈಲ್ ನಿಂದ ಪೂಜಾರಿಗಳು ಮಂತ್ರ ಹೇಳೊದಕ್ಕೂ ಕಷ್ಟವಾಗ್ತಿದೆ. ನಮ್ಮ ರಾಜ್ಯದ ದೇವಸ್ಥಾನಗಳಲ್ಲೂ ಮೊಬೈಲ್ ಬಂದ್ ಮಾಡಿದ್ರೆ ಒಳ್ಳೇದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest Videos

undefined

Assembly election: ಜೆಡಿಎಸ್ ನಿಂದ ಬಿಜೆಪಿಗೆ ಎಂದ ಅಶೋಕ್ ಹೇಳಿಕೆಗೆ ವ್ಯತಿರಿಕ್ತ ಉತ್ತರ ನೀಡಿದ ಸಿಟಿ ರವಿ 

ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿದ ಅವರು ಗುಜರಾತ್ ನಲ್ಲಿ ಕಾಂಗ್ರೆಸ್ ದೂಳಿಪಟ ಆಗಿದೆ. ಸಿದ್ದು ಹಾಗೂ ಡಿಕೆಶಿ ನಡುವೆ ಬೀದಿ ರಂಪಟವಾಗಿದೆ. ದೆಹಲಿಗೆ ಹೋದ್ರು ಅವರ ಜಗಳ ನಿಂತಿಲ್ಲ. ಜನರು ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ಬಯಸಿದ್ದಾರೆ. ರಾಜ್ಯದ ಖಜಾನೆ ತುಂಬಿದೆ, ಜನರ ನೋವಿಗೆ ಸ್ಪಡಿಸುತ್ತೇವೆ. ಯಡಿಯೂರಪ್ಪ ನವರನ್ನು ನಾವು ಎಲ್ಲೂ ಕಡೆಗಣಿಸಿಲ್ಲಾ. ಯಡಿಯೂರಪ್ಪ ಈ ಬಗ್ಗೆ ಎಲ್ಲೂ ಹೇಳಿಲ್ಲ. ಆಡಳಿತ ಪಕ್ಷದಿಂದ ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆಯುತ್ತಿಲ್ಲ. ಅವರ ನೇತೃತ್ವದಲ್ಲೇ ನಾವು ಚುನಾವಣೆಗೆ ಹೋಗುತ್ತಿದ್ದೇವೆ. ಗುಜರಾತ್ ಮಾಡಲ್ ಗೂ ಕರ್ನಾಟಕಕ್ಕೂ ಸಂಬಂಧವಿಲ್ಲ. 

ನಾಡಿದ್ದು ಸಿಎಂ ತವರಲ್ಲಿ ಅಶೋಕ್‌ ಗ್ರಾಮವಾಸ್ತವ್ಯ

ಮೋದಿ ಹಾಗೂ ಅಮಿತ್ ಶಾ ಕಂಡರೆ ಎಷ್ಟು ಭಯ ಇದೆ ಎಂದು ಖರ್ಗೆ ಅವರ ಹೇಳಿಕೆ ಯಿಂದ ಗೊತ್ತಾಗ್ತಿದೆ. ಸಮ್ಮಿಶ್ರ ಸರ್ಕಾರ ಇದ್ದಾಗ 17 ಜನ ಬಂದಿದ್ದಾರೆ. ಅವರನ್ನೇ ತಡೆಯುವ ಯೋಗ್ಯತೆ ಇಲ್ಲ ಅವರಿಗೆ. ಸುಮಾರು 10 ಜನರ ಕಾಂಗ್ರೆಸ್ ಶಾಸಕರ ಟೀಂ ಬಿಜೆಪಿ ಗೆ ಬರ್ತಿದ್ದಾರೆ. ನೂತನ ಜಿಲ್ಲಾ ಬಿಜೆಪಿ ಕಚೇರಿಯ ಉದ್ಘಾಟನೆ ಬಳಿಕ ಅಶೋಕ್ ಹೇಳಿಕೆ ನೀಡಿದ್ದಾರೆ.

click me!