ಸಿದ್ದರಾಮಯ್ಯ ವೀಕ್ ಸಿಎಂ ಆಗಿದ್ದರಿಂದಲೇ ಕಾಂಗ್ರೆಸ್ ಸೋತಿದೆ: ಕೆ.ಎಸ್ ಈಶ್ವರಪ್ಪ

Published : Dec 15, 2022, 01:57 PM IST
ಸಿದ್ದರಾಮಯ್ಯ ವೀಕ್ ಸಿಎಂ ಆಗಿದ್ದರಿಂದಲೇ ಕಾಂಗ್ರೆಸ್ ಸೋತಿದೆ: ಕೆ.ಎಸ್ ಈಶ್ವರಪ್ಪ

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ ಲೀಡರ್ ಆಗಿದ್ದಕ್ಕೆ ಅವರು ಮತ್ತು ಅವರ ಪಕ್ಷ ಸೋತಿದ್ದು, ಅವರು ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ಕೆ. ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ಡಿ.15): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ ಲೀಡರ್ ಆಗಿದ್ದಕ್ಕೆ ಅವರು ಮತ್ತು ಅವರ ಪಕ್ಷ ಸೋತಿದ್ದು, ಅವರು ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ಕೆ. ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ನಿನ್ನೆ ತಾನೆ ಬಸವರಾಜ ಬೊಮ್ಮಾಯಿ ಅವರನ್ನು ವೀಕ್ ಸಿಎಂ ಕರೆದ ಹಿನ್ನೆಲೆಯಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಒಮ್ಮೆ ಬಾದಾಮಿ, ಒಮ್ಮೆ ಕೋಲಾರ, ಒಮ್ಮೆ ವರುಣ ಎನ್ನುವ ಸಿದ್ದರಾಮಯ್ಯಗೆ ಅಪ್ಪ- ಅಮ್ಮ (ಕ್ಷೇತ್ರ) ಯಾರೆಂದೆ  ಗೊತ್ತಿಲ್ಲ. ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರೆಸಿದ ಮಾಜಿ ಸಚಿವ ಈಶ್ವರಪ್ಪ, ಯಾವಾಗಲೂ ಯಾರೂ ವೀಕ್ ಅಂತಿರ್ತಾರೋ ಅವರೇ ವೀಕ್ ಆಗಿರುತ್ತಾರೆ. ಬೊಮ್ಮಾಯಿ ವೀಕ್ ಅಂತ ಹೇಳಿ ಇವರು ಸ್ಟ್ರಾಂಗ್ ಅಂತಿದ್ದಾರೆ ಇರಲಿ ಎಂದ ಅವರು ನೀವು ಅಪ್ಪ ಅಮ್ಮ ಯಾರೂ ಅಂತಲೇ ನೀವು ಹೇಳ್ತಿಲ್ಲ.

ಒಂದ್ಸಾರಿ ಬಾದಾಮಿ, ಒಂದ್ಸಾರಿ ಕೋಲಾರ, ವರುಣ ಅಂತೀರಿ. ನಿಮಗೆ ನಿಮ್ಮ ಅಪ್ಪ ಅಮ್ಮ ಯಾರೂ ಅಂತಲೇ ಗೊತ್ತಿಲ್ಲ.ನಿಮ್ಮ ಕ್ಷೇತ್ರವೇ ಗೊತ್ತಿಲ್ಲ. ಆದರೆ  ಅಭಿವೃದ್ಧಿ ನೋಡಿ ನೀವೆ ನಿಲ್ಲಿ ಅನ್ನೋ ಪರಿಸ್ಥಿತಿ ಬಿಜೆಪಿಯಲ್ಲಿದೆ ಎಂದರು.

ಕ್ಯಾಪ್ಟನ್ ಗೆ ಪ್ಲೇಸ್ ಇಲ್ಲ,ಇವನನ್ನು  ಪಾಪ ಫಾಲೋವರ್ಸ್ ಗತಿಯೇನು ಎಂದು ಪ್ರಶ್ನಿಸಿದ ಈಶ್ವರಪ್ಪ, ಸಿದ್ದರಾಮಯ್ಯ ಆಡುವ ಆಟ ಬಿಜೆಪಿ ಮೇಲಾಗಲಿ,  ರಾಜ್ಯದ ಜನರ ಮೇಲೂ ನಡೆಯಲ್ಲ, ಕಾಂಗ್ರೆಸ್ ನಲ್ಲಿ ಮಾತ್ರ ನಡೆಯೋದು ಎಂದರು.

ಬಿಜೆಪಿ ಕೆಜೆಪಿ ಒಡೆದು ಸಿದ್ದರಾಮಯ್ಯ ಸಿಎಂ ಆದರು ಎಂದು ಆದೋಪಿಸಿದ ಅವರು ಈಗ ಬಿಜೆಪಿ ಒಡೆಯಲು ಆಗುತ್ತಿಲ್ಲ. ಹೀಗಾಗಿ ಬೊಮ್ಮಾಯಿ ನಾಯಕತ್ವ ಸರಿಯಿಲ್ಲ ಎನ್ನುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಜಾತಿ ಹೆಸರಲ್ಲಿ ಓಟ್ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಕುರುಬರ, ಹಿಂದುಳಿದವರ, ಅಲ್ಪಸಂಖ್ಯಾತರ ನಾಯಕ ನಾನು ಅಂತಿದ್ದಾರೆ. ನಾನು ಎಲ್ಲ ಜನಾಂಗದ ನಾಯಕ ಅಂತ ಬಾಯಿಂದ  ಹೇಳುತ್ತಿದ್ದಾರೆ. ಅವರು ಎಲ್ಲ ಜನಾಂಗದ ನಾಯಕನಾಗಲು ಆಗಲ್ಲ.ಕುರುಬರ ನಾಯಕನೂ ಆಗೋಲ್ಲ ಎಂದರು.

ಇಡೀ ರಾಜ್ಯದ ತುಂಬ ಅಭಿವೃದ್ಧಿ ಮತ್ತು ಕಟೀಲ್ ನೇತೃತ್ವದಲ್ಲಿ ಸಂಘಟನೆ ಆಗುತ್ತಿದೆ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬೊಮ್ಮಾಯಿ, ಯಡಿಯೂರಪ್ಪ ನಾಯಕತ್ವ ಇದೆ ಎಂದರು.

ತಾಯಿ ಸ್ವರೂಪಿಯಾಗಿರುವ ಪಕ್ಷ ನಿರ್ಧರಿಸಿದ್ದನ್ನ ನಿಷ್ಠೆಯಿಂದ ಮಾಡುತ್ತೇನೆ. ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಮಂತ್ರಿ ಸ್ಥಾನದ ಬಗ್ಗೆ ಕೇಂದ್ರ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೊ ಅದಕ್ಕೆ ಬದ್ದನಿದ್ದು, ಮಂತ್ರಿ ಆಗು ಅಂದರೆ ಆಗ್ತಿನಿ ಇಲ್ಲ ಶಾಸಕ ಆಗಿರ್ತಿನಿ. ಈಗಾಗಲೇ ಎಲ್ಲ ಇಲಾಖೆ ಮಂತ್ರಿ ಮಂತ್ರಿ ಅಗಿ ಕೆಲಸ ಮಾಡಿದ್ದೇನೆ. ಇನ್ನೇನು ಮೂರು ನಾಲ್ಕು ತಿಂಗಳು ಉಳಿದಿದೆ, ನನ್ನ ತಾಯಿ ಸ್ವರೂಪಿಯಾಗಿರುವ ಪಕ್ಷ ಹೇಳಿದ್ದನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದರು.

ಖರ್ಗೆ ಅವರಿಗೆ ಯಾರಾದ್ರೂ ಇಂಜಕ್ಷನ್ ಕೊಡಬೇಕು: ಈಶ್ವರಪ್ಪ
ಖರ್ಗೆ ಅವರು ಕಾಂಗ್ರೆಸ್ ಪಕ್ಷಕ್ಕೆ ಇಂಜಕ್ಷನ್ ಕೊಡ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿ, ಖರ್ಗೆ ಅವರಿಗೆ ಇಂಜಕ್ಷನ್ ಕೊಡಬೇಕಾಗಿದೆ,  ನನ್ನ ಪಕ್ಷ ನನಗೆ ತಾಯಿ, ತಾಯಿ ಹೇಳಿದಂತೆ ನಾನು ಕೇಳ್ತೇನೆ.ತಾಯಿ ಹೇಳಿದಂತೆ ಡಿಕೆ.ಶಿವಕುಮಾರ್ ಸಿದ್ದರಾಮಯ್ಯ ಕೇಳ್ತಾರಾ? ಎಂದು ಈಶ್ಚರಪ್ಪ ಪ್ರಶ್ನಿಸಿದರು. ಇನ್ನು ಅವರಿಗೆ ತಾಯಿ ಯಾರೂ ಅಂತಾನೇ ಗೊತ್ತಿಲ್ಲ ಅವರಿಗೆ. ರಾಹುಲ್ ಗಾಂಧಿನೋ, ಸೋನಿಯಾ ಗಾಂಧಿನೋ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು. ಈಗ ಪಾಪ (ಖರ್ಗೆ) ಯಜಮಾನರನ್ನ ತಂದು ಕಟ್ಟಿದ್ದಾರೆ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ನನಗೆ ಗೌರವ ಇದೆ. ಸತ್ತೋಗ್ತಾ ಇರೋ ಪಾರ್ಟಿಗೆ, ಇಂಜಕ್ಷನ್ ಕೊಡೋ ಪ್ರಯತ್ನ ಕಾಂಗ್ರೆಸ್ ಮಾಡ್ತಿದೆ ಎಂದರು.

ಕೇಂದ್ರ ನಾಯಕರು ಏನು ತೀರ್ಮಾಣ ಮಾಡ್ತಾರೋ ಅದೇ ಫೈನಲ್
ಇನ್ನು ಗುಜರಾತ್ ಮಾದರಿ ಟಿಕೆಟ್ ಹಂಚಿಕೆ, ಹಿರಿಯರಿಗೆ ಟಿಕೆಟ್ ಕೈತಪ್ಪುತ್ತಾ? ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರ ನಾಯಕರು ಏನು ತೀರ್ಮಾಣ ಮಾಡ್ತಾರೋ ಅದೇ ಫೈನಲ್ ಎಂದ ಅವರು, ನಾನು ಇವತ್ತೋ, ನಿನ್ನೆ ಬಿಜೆಪಿಯಲ್ಲಿಲ್ಲ, ಸಿದ್ದರಾಮಯ್ಯ ಮೂರು‌, ಮೂರು ಪಾರ್ಟಿ ಚೇಂಜ್ ಮಾಡಿದ್ರು. ನಾನು ಬಿಜೆಪಿಯಲ್ಲೇ ಹುಟ್ಟಿದ್ದು, ಬಿಜೆಪಿಯಲ್ಲೇ ಸಾಯೋದು. ಬಿಜೆಪಿ ನಾಯಕರು ಅಂದ್ರೆ ನಮ್ಮ ಅಪ್ಪ ಅಮ್ಮ ಇದ್ದಂಗೆ.

ಬೀದಿಯಲ್ಲಿರುವ ನಾಯಿಯೂ ಜೆಡಿಎಸ್‌ಗೆ ಹೋಗಲ್ಲ: ಈಶ್ವರಪ್ಪ

ಪಕ್ಷ ನನ್ನ ತಾಯಿ ಸ್ವರೂಪ, ನನ್ನ ತಾಯಿ ಏನು ಹೇಳ್ತಾರೋ ಅದನ್ನ ಕೇಳ್ತೀನಿ.ನಿಂತ್ಕೋ ಅಂದ್ರೆ ನಿಂತ್ಕೋತಿನಿ, ಮನೆಯಲ್ಲಿ ಮಲಗು ಅಂದ್ರೆ ಮಲ್ಕೋತಿನಿ.ಮನೆಯಲ್ಲಿ ಮಲಗಲ್ಲ, ಸಂಘಟನೆ ಕಟ್ಟಿ, ಇಡೀ ರಾಜ್ಯ ಹಾಗೂ ದೇಶದಲ್ಲಿ ಸಂಘಟನೆ ಮಾಡ್ತೇನೆ. ರಾಜ್ಯದಲ್ಲೂ ಬಿಜೆಪಿ ಇದೆ, ಕೇಂದ್ರದಲ್ಲೂ ಬಿಜೆಪಿ ಇದೆ. ತಾಯಿ ಹೇಳಿದಂತೆ ನಾನು ಕೇಳ್ತೇನೆ.

ಸರ್ಕಾರಿ ಕಾರ್ಯಕ್ರಮದಲ್ಲಿ ಈಶ್ವರಪ್ಪ ಪುತ್ರನ ಫೋಟೋ: ಪರಿಷತ್ ಸದಸ್ಯರು ಗರಂ

ಬಿಜೆಪಿಯಲ್ಲಿ ಹಿರಿಯರು, ಕಿರಿಯರು, ಬುದ್ದಿವಂತರು ಅಂತಾ ಇಲ್ಲ, ಕೇಂದ್ರ ನಾಯಕರ ತೀರ್ಮಾಣಕ್ಕೆ ನಾವೆಲ್ಲ ಬದ್ಧ ಎಂದ ಈಶ್ವರಪ್ಪ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ಬಸವರಾಜ್ ಯಂಕಂಚಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ತನಗೆ ಮದುವೆ ಮಾಡಿದ್ದ ಪುರೋಹಿತಗೂ ರಾಜೀವ್‌ ಲಾಂಗ್‌ ತೋರಿಸಿ ಧಮ್ಕಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ 8 ಬಡಾವಣೆಗಳನ್ನು ಜಿಬಿಎಗೆ ಒಪ್ಪಿಸುವಂತೆ ಆದೇಶ