ಚಾಮರಾಜಪೇಟೆಯಲ್ಲಿ ಗಣೇಶ ಪ್ರತಿಷ್ಠಾಪನೆ: ಹಿಂದೂ ಹಬ್ಬ ಮಾಡದ ಜಮೀರ್ ಈ ಬಾರಿ ಗಣೇಶೋತ್ಸವ ಆಚರಿಸ್ತಿರೋದ್ಯಾಕೆ?

By Girish GoudarFirst Published Sep 4, 2022, 2:35 PM IST
Highlights

ಚಾಮರಾಜಪೇಟೆ ಶಾಸಕರ ಕಚೇರಿಯಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಯುತ್ತಿದೆ. ಹಿಂದೂ ಸಂಘಟನೆಗಳ ಟೀಕೆಗಳ ಬಳಿಕ ಜಮೀರ್ ಕಚೇರಿಯಲ್ಲಿ ಗಣೇಶೋತ್ಸವ ಆಚರಣೆಗೆ ನಿರ್ಧಾರ 

ಬೆಂಗಳೂರು(ಸೆ.04):  ಚಾಮರಾಜಪೇಟೆಯಲ್ಲಿ ನಾಳೆ(ಸೋಮವಾರ) ಶಾಸಕ ಜಮೀರ್ ಅಹಮದ್‌ ಖಾನ್‌ ಅವರ ನೇತೃತ್ವದಲ್ಲಿ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆದಿದೆ. ಚಾಮರಾಜಪೇಟೆ ಶಾಸಕರ ಕಚೇರಿಯಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಯುತ್ತಿದೆ. ಹಿಂದೂ ಸಂಘಟನೆಗಳ ಟೀಕೆಗಳ ಬಳಿಕ ಜಮೀರ್ ಕಚೇರಿಯಲ್ಲಿ ಗಣೇಶೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಶಾಸಕ ಜಮೀರ್ ಅಹಮದ್‌ ಖಾನ್‌ ಈದ್ಗಾ ಮೈದಾನದ ವಿವಾದದಲ್ಲಿ ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಸಿಗದ ಹಿನ್ನಲೆಯಲ್ಲಿ ತಂತ್ರಗಾರಿಕೆ ಹೆಣೆಯಲು ಶಾಸಕರು ಮುಂದಾದ್ರಾ ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. 

ಕಚೇರಿಯಲ್ಲೇ ಗಣೇಶ ಪ್ರತಿಷ್ಠಾಪಿಸಿ ಎಲ್ಲವನ್ನು ಪ್ಯಾಚಪ್ ಮಾಡಿಕೊಳ್ಳಲು ಶಾಸಕ ಜಮೀರ್ ಅಹಮದ್‌ ಖಾನ್‌ ಹಿಂದೂ ಹಬ್ಬ ಆಚರಣೆ ಮಾಡ್ತಿದ್ದಾರಾ..? ಎಂದು ಹೇಳಲಾಗುತ್ತಿದೆ. ಹೀಗಾಗಿ ಜಮೀರ್‌ ಒಂದು ದಿನದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧಾರ ಮಾಡಿದ್ದಾರೆ.

ಗಣೇಶ ಮೂರ್ತಿ ಬೇಡ ಎನ್ನಲು ಜಮೀರ್‌ ಯಾರು?: ಸಿ.ಟಿ.ರವಿ

ಚಾಮರಾಜಪೇಟೆಯ ವರ್ತಕರ ಬೀದಿಯಲ್ಲಿರುವ ಶಾಸಕರ ಕಚೇರಿಯಲ್ಲಿ ನಾಳೆ(ಸೋಮವಾರ) ಬೆಳಗ್ಗೆ 9:15 ರಿಂದ 10 ಗಂಟೆಯೊಳಗೆ ಗಣೇಶ ಪ್ರತಿಷ್ಠಾಪನೆಗೆ ತಯಾರಿ ನಡೆಯುತ್ತಿದೆ. ಸಂಜೆ 4 ಗಂಟೆಗೆ ಬಾಣಬಿರುಸುಗಳೊಂದಿಗೆ ಅದ್ಧೂರಿ ಮರವಣಿಗೆಗೂ ಸಿದ್ಧತೆ ನಡೆಯುತ್ತಿದೆ. ಅಖಿಲ ಕರ್ನಾಟಕ ಜಿ.ಜೆಡ್ ಜಮೀರ್ ಅಹ್ಮದ್ ಖಾನ್ ಒಕ್ಕೂಟದಿಂದ ಗಣೇಶೋತ್ಸವ ಆಚರಣೆಗೆ ನಿರ್ಧರಿಸಲಾಗಿದೆ. 

ನಾಲ್ಕು ಬಾರಿ ಶಾಸಕರಾದ್ರೂ ಕೂಡ ಜಮೀರ್‌ ತಮ್ಮ ಕಚೇರಿಯಲ್ಲಿ ಗಣೇಶ ಪ್ರತಿಷ್ಠಾಪಿಸಿದ್ದರು. ಈ ಬಾರಿ ಗಣೇಶ ಪ್ರತಿಷ್ಠಾಪಿಸುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಶಾಸಕರಾಗಿದ್ರೂ ಹಿಂದೂ ಧಾರ್ಮಿಕ ಹಬ್ಬಗಳನ್ನು ಮಾಡದೆ ಇದ್ದ ಜಮೀರ್ ಈ ಬಾರಿ ಯಾಕೆ ಗಣೇಶ ಕೂರಿಸ್ತಿದ್ದಾರೆ..?, ಈ ಬಾರಿ ಗಣೇಶನ ಮುಖ ನೋಡಿ ಜಮೀರ್‌ಗೆ ಮತ ಹಾಕೋದಿಲ್ಲ ಅಂತ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
 

click me!