ಗದಗ: ಕೋವಿಡ್‌ ಕೇರ್‌ ಸೆಂಟರ್‌ ನಿರ್ಮಿಸಿದ ಶಾಸಕ ಎಚ್ಕೆ

Kannadaprabha News   | Asianet News
Published : May 24, 2021, 08:33 AM ISTUpdated : May 24, 2021, 08:43 AM IST
ಗದಗ: ಕೋವಿಡ್‌ ಕೇರ್‌ ಸೆಂಟರ್‌ ನಿರ್ಮಿಸಿದ ಶಾಸಕ ಎಚ್ಕೆ

ಸಾರಾಂಶ

* ಕೇವಲ 10 ದಿನದಲ್ಲಿ ಸಿದ್ಧವಾದ ಆಸ್ಪತ್ರೆ  * ಹುಲಕೋಟಿಯ ರೂರಲ್‌ ಮೆಡಿಕಲ್‌ ಸರ್ವಿಸಸ್‌ ಸೊಸೈಟಿಯ ನುರಿತ ವೈದ್ಯರ ತಂಡ ಚಿಕಿತ್ಸೆಗೆ ಸಿದ್ಧ * 65 ಆಕ್ಸಿಜನ್‌ ಬೆಡ್‌ ಹೊಂದಿದ ಕೋವಿಡ್‌ ಕೇರ್‌ ಆಸ್ಪತ್ರೆ 

ಗದಗ(ಮೇ.24): ಕೋವಿಡ್‌ 2ನೇ ಅಲೆಗೆ ಗದಗ ಜಿಲ್ಲೆ ತತ್ತರಿಸಿದ್ದು, ನಿತ್ಯವೂ ಬೆಡ್‌ ಆಕ್ಸಿಜನ್‌ ಸಿಗದೇ ಸರಾಸರಿ 5ಕ್ಕೂ ಹೆಚ್ಚು ಸೋಂಕಿತರು ಸಾಯುತ್ತಿದ್ದಾರೆ. ಸೋಂಕಿತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಗದಗ ಶಾಸಕ ಎಚ್‌.ಕೆ.ಪಾಟೀಲ 65 ಆಕ್ಸಿಜನ್‌ ಬೆಡ್‌ ಹೊಂದಿದ ಕೋವಿಡ್‌ ಕೇರ್‌ ಆಸ್ಪತ್ರೆ ನಿರ್ಮಿಸಿದ್ದಾರೆ.

ಇಲ್ಲಿನ ಜಿಲ್ಲಾಡಳಿತ ಭವನದ ಎದುರಿಗಿರುವ ಇಂಡಸ್ಟ್ರೀಯಲ್‌ ಎಸ್ಟೇಟ್‌ ಕಟ್ಟಡದಲ್ಲಿ ಕೇವಲ 10 ದಿನದಲ್ಲಿ ಸಿದ್ಧವಾಗಿರುವ ಆಸ್ಪತ್ರೆ ಇಂದು(ಸೋಮವಾರ) ಲೋಕಾರ್ಪಣೆಗೊಳ್ಳಲಿದೆ. 

"

ಲಕ್ಷ್ಮೇಶ್ವರ: 4 ಗಂಟೆ ಅವಧಿಯಲ್ಲಿ ಕೊರೋನಾಗೆ ತಂದೆ, ಮಗ ಬಲಿ..!

ಕೆ.ಎಚ್‌.ಪಾಟೀಲ ಪ್ರತಿಷ್ಠಾನ, ಶ್ರೀಮದ್‌ ರಾಮಚಂದ್ರ ಲವ್‌ ಆ್ಯಂಡ್‌ ಕೇರ್‌ ಸಂಸ್ಥೆ, ಗದಗ ಕೋ ಆಪ್‌ ರೇಟಿವ್‌ ಇಂಡಸ್ಟ್ರೀಸ್‌, ಸಹಕಾರಿಗಳು, ಕೆಲವು ಖಾಸಗಿ ವೈದ್ಯರು ಈ ಮಹತ್ಕಾರ್ಯಕ್ಕೆ ಸಾಥ್‌ ನೀಡಿದ್ದಾರೆ. 

ಹುಲಕೋಟಿಯ ರೂರಲ್‌ ಮೆಡಿಕಲ್‌ ಸರ್ವಿಸಸ್‌ ಸೊಸೈಟಿಯ ನುರಿತ ವೈದ್ಯರ ತಂಡ ಚಿಕಿತ್ಸೆಗೆ ಸಿದ್ಧವಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು