ಕಾಂಗ್ರೆಸ್‌ನ ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆ

By Kannadaprabha News  |  First Published Dec 7, 2020, 1:56 PM IST

ಶಾಸಕ ಚರಂತಿಮಠ ಅಭಿವೃದ್ಧಿ ಕಾರ್ಯಗಳು, ಜನಸ್ನೇಹಿ ಕೆಲಸಗಳನ್ನು ಮೆಚ್ಚಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆ| ಶಾಸಕ ವೀರಣ್ಣ ಚರಂತಿಮಠ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ| ಬಾಗಲಕೋಟೆ ತಾಲೂಕಿನ ರಾಂಪೂರ ಗ್ರಾಮದ ಕಾಂಗ್ರೆಸ್‌ ಪಕ್ಷದ ಪ್ರಮುಖರು| 


ಬಾಗಲಕೋಟೆ(ಡಿ.07): ತಾಲೂಕಿನ ರಾಂಪೂರ ಗ್ರಾಮದ ಕಾಂಗ್ರೆಸ್‌ನ ಪ್ರಮುಖರು ಭಾನುವಾರ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 

ಪ್ರಮುಖರಾದ ಮಲ್ಲಪ್ಪ ಜಂಬಲದಿನ್ನಿ, ಗೋಪಾಲ ಘಂಟಿ, ಹನಮಂತ ಗಂಗೂರ, ಗ್ಯಾನಪ್ಪ ಕಾಳಗಿ, ಮಲ್ಲಿಕಾರ್ಜುನ ಮಾದರ ಇವರು ಶಾಸಕರಾದ ಚರಂತಿಮಠ ಅಭಿವೃದ್ಧಿ ಕಾರ್ಯಗಳು, ಜನಸ್ನೇಹಿ ಕೆಲಸಗಳನ್ನು ಮೆಚ್ಚಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

Tap to resize

Latest Videos

ಬಿಗ್‌3 ಇಂಪ್ಯಾಕ್ಟ್‌: ಗುಳೇದಗುಡ್ಡದ ನಿವೃತ್ತ ಶಿಕ್ಷಕರ ಸಂಕಷ್ಟಕ್ಕೆ ಮುಕ್ತಿ, ಜನ ಫುಲ್‌ ಖುಷ್‌..! 

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ನಾರಾಯಣಸಾ ಭಾಂಡಗೆ, ಗ್ರಾಮೀಣ ಘಟಕ ಅಧ್ಯಕ್ಷ ಸುರೇಶ ಕೊಣ್ಣೂರು, ರಮೇಶ ಕೊಣ್ಣೂರು, ಸೋಮಸಿಂಗ ಲಮಾಣಿ, ಪರಶುರಾಮ ಭಜಂತ್ರಿ, ರಾಮಣ್ಣ ಕಮತಗಿ, ಮುದಪ್ಪ ಗೌಡರ, ಶಿವರುದ್ರಪ್ಪ ಕುಂಬಾರ, ಸಂಗಮೇಶ ಕೆಂಜೋಡಿ, ಸಂಗಮೇಶ ಮಂಕಣಿ, ಮಹಾದೇವ ಹರಿಜನ ಸೇರಿದಂತೆ ರಾಂಪೂರ ಗ್ರಾಮ ಪ್ರಮುಖರು ಉಪಸ್ಥಿತರಿದ್ದರು.
 

click me!