'ನಿಷ್ಠಾ​ವಂತ​ರನ್ನೂ ಉಳಿ​ಸಿ​ಕೊ​ಳ್ಳ​ದ​ ದಳ​ಪತಿ : ಈ ಕಾರಣಕ್ಕೆ ಬಿಟ್ಟು ಹೋದರು'

By Kannadaprabha News  |  First Published Dec 7, 2020, 1:52 PM IST

ಜೆಡಿಎಸ್ ನಾಯಕರು  ನಿಷ್ಠಾವಂತರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಚುನಾವಣೆ ಬೆನ್ನಲ್ಲೇ ಹಲವು ಮುಖಂಡರು ಪಕ್ಷ ತೊರೆಯುತ್ತಿದ್ದು ಜೆಡಿಎಸ್ ಸಂಕಷ್ಟ ಎದುರಿಸುವಂತಾಗಿದೆ. 


 ರಾಮ​ನ​ಗರ (ಡಿ.07):  ಸ್ಥಳೀಯ ಸಂಸ್ಥೆ​ಯಲ್ಲಿ ಅವ​ಕಾಶ ಇದ್ದರೂ ಅಧಿ​ಕಾರ ಕೊಡಿ​ಸ​ಲು ಪ್ರಯ​ತ್ನಿ​ಸ​ಲಿಲ್ಲ ಎಂಬ ಕಾರ​ಣಕ್ಕೆ ಜೆಡಿ​ಎಸ್‌ನ ಜನ​ಪ್ರ​ತಿ​ನಿ​ಧಿ​ಗಳು ಕಾಂಗ್ರೆಸ್‌ ಪಕ್ಷ ಸೇರಿ ಅಧಿ​ಕಾರ ಅನು​ಭ​ವಿ​ಸಿ​ದರು. ಅವ​ರನ್ನು ಪಕ್ಷ​ದಲ್ಲಿ ಉಳಿ​ಸಿ​ಕೊ​ಳ್ಳುವ ಪ್ರಯತ್ನವನ್ನು ಜೆಡಿ​ಎಸ್‌ ವರಿ​ಷ್ಠರು ಮಾಡ​ಲಿಲ್ಲ. 

ಈಗ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ ಅಭ್ಯ​ರ್ಥಿ​ಗಳ ಗೆಲು​ವಿ​ಗಾ​ಗಿ ಹಾಗೂ ಪಕ್ಷ​ದ ಸಂಘ​ಟ​ನೆ​ಗಾಗಿ ಹಗ​ಲಿ​ರಳು ಶ್ರಮಿ​ಸಿದ ಗ್ರಾಮ ಮಟ್ಟ​ದ​ಲ್ಲಿ​ರುವ ಪಕ್ಷದ ಮುಖಂಡರು - ಕಾರ್ಯ​ಕ​ರ್ತರನ್ನು ಸೆಳೆ​ಯಲು ಕಾಂಗ್ರೆಸ್‌ ಮತ್ತು ಬಿಜೆಪಿ ನಾಯ​ಕರು ಪೈಪೋ​ಟಿಗೆ ಇಳಿ​ದಿ​ದ್ದಾರೆ. ಇಷ್ಟಾ​ದರೂ ದಳ​ಪ​ತಿ​ಗ​ಳನ್ನು ನಿಷ್ಠಾ​ವಂತ​ರನ್ನು ಉಳಿ​ಸಿ​ಕೊ​ಳ್ಳಲು ಮನಸ್ಸು ಮಾಡದೆ ಮೌನ ವಹಿ​ಸಿ​ದ್ದಾ​ರೆ.

Tap to resize

Latest Videos

ಕಾಂಗ್ರೆಸ್‌ - ಬಿಜೆ​ಪಿಯಿಂದ ಜೆಡಿ​ಎಸ್‌ ಮನೆಗೆ ಕನ್ನ ! ಪಕ್ಷ ಬಿಟ್ಟು ತೆರಳಿದ ಮುಖಂಡರು

ಕುಮಾ​ರ​ಸ್ವಾ​ಮಿ​ಯ​ವರು ಮುಖ್ಯ​ಮಂತ್ರಿ​ಯಾ​ಗಿ​ದ್ದಾಗ ಜಿಲ್ಲೆ​ಯಲ್ಲಿ ಮಾಡಿದ್ದ ಅಭಿ​ವೃದ್ಧಿ ಕಾರ್ಯ​ಗ​ಳನ್ನು ಮೆಚ್ಚಿ ಅನ್ಯ ಪಕ್ಷದ ಮುಖಂಡ​ರಾ​ಗಲಿ ಅಥವಾ ಕಾರ್ಯ​ಕ​ರ್ತ​ರಾ​ಗಲಿ ಜೆಡಿ​ಎಸ್‌ ನತ್ತ ಒಲವು ತೋರು​ತ್ತಿಲ್ಲ. ಇದರ ಅರ್ಥ ಚುನಾ​ವ​ಣೆ​ಗಳಲ್ಲಿ ಅಭಿ​ವೃದ್ಧಿ ಮಾನ​ದಂಡ ಆಗು​ವು​ದಿಲ್ಲ ಎನ್ನು​ತ್ತಾರೆ ಜೆಡಿ​ಎಸ್‌ ನಾಯ​ಕ​ರೊ​ಬ್ಬ​ರು.

ಗ್ರಾಮ ಪಂಚಾ​ಯಿತಿ ಚುನಾ​ವಣೆ ಕಾವು ಜೋರಾ​ಗಿ​ದದು, ಮೂರು ಪಕ್ಷದ ನಾಯ​ಕರು ಗ್ರಾಮ​ಗ​ಳಿಗೆ ತೆರ​ಳು​ತ್ತಿ​ದ್ದಾರೆ. ಇದ​ರಿಂದ ಚುನಾ​ವಣೆ ಹೊತ್ತಿ​ನಲ್ಲಿ ಇನ್ನಷ್ಟುಮುಖಂಡರು - ಕಾರ್ಯ​ಕ​ರ್ತರು ಮೂಲ ಪಕ್ಷ ತೊರೆದು ಇತರೆ ಪಕ್ಷಕ್ಕೆ ಪಕ್ಷಾಂತ​ರ​ಗೊ​ಳ್ಳುವ ಸಾಧ್ಯ​ತೆ​ಗ​ಳಿವೆ. ಒಟ್ಟಾರೆ ಕಾಂಗ್ರೆಸ್‌ - ಬಿಜೆಪಿಯಿಂದ ಜೆಡಿ​ಎಸ್‌ ಶಕ್ತಿ​ಯನ್ನು ಕುಗ್ಗಿಸುವ ಕಾರ್ಯ ನಡೆ​ಯು​ತ್ತಿ​ದೆ.

click me!