ಜೆಡಿಎಸ್ಗೆ ಸಡ್ಡು ಹೊಡೆಯಲು ಸಜ್ಜು : ಭದ್ರಕೋಟೆಯಲ್ಲಿ ಕಾಂಗ್ರೆಸ್ ಕಾರ್ಯತಂತ್ರ

By Kannadaprabha NewsFirst Published Sep 25, 2021, 1:37 PM IST
Highlights
  • ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರ ಓಟ್ ಬ್ಯಾಂಕ್‌ನಿಂದ ಅತೀವ ರಾಜಕೀಯ ನಷ್ಟ ಅನುಭವಿಸಿದ್ದ ಕಾಂಗ್ರೆಸ್ 
  • 2023ರ ಚುನಾವಣೆ ವೇಳೆಗೆ ಜೆಡಿಎಸ್‌ಗೆ ಸರಿಸಮನಾಗಿ ಒಕ್ಕಲಿಗರ ಮತ ಗಳಿಕೆಗೆ ಕಾರ್ಯತಂತ್ರ

ವರದಿ : ಮಂಡ್ಯ ಮಂಜುನಾಥ  

ಮಂಡ್ಯ (ಸೆ.25): ಕಳೆದ ವಿಧಾನಸಭಾ ಚುನಾವಣೆಯಲ್ಲಿ (Election) ಒಕ್ಕಲಿಗರ ಓಟ್ ಬ್ಯಾಂಕ್‌ನಿಂದ ಅತೀವ ರಾಜಕೀಯ (Politics) ನಷ್ಟ ಅನುಭವಿಸಿದ್ದ ಕಾಂಗ್ರೆಸ್ (congress) 2023ರ ಚುನಾವಣೆ ವೇಳೆಗೆ ಜೆಡಿಎಸ್‌ಗೆ ಸರಿಸಮನಾಗಿ ಒಕ್ಕಲಿಗರ ಮತ ಗಳಿಕೆಗೆ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. 

ಜೆಡಿಎಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಪುನರ್ ಪ್ರತಿಷ್ಠಾಪಿಸಲು ರಾಜ್ಯ ನಾಯಕರ ನಿರ್ದೇಶನದ ಮೇರೆಗೆ ಅಗತ್ಯ ಸಿದ್ಧತೆ ಗಳನ್ನು ನಡೆಸುತ್ತಿದ್ದು, ಅದರಲ್ಲಿ ಒಕ್ಕಲಿಗರ ವೋಟ್ ಬ್ಯಾಂಕ್ ಸೆಳೆಯುವುದೇ ಪ್ರಧಾನ ಅಂಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಪೂರ್ವ ತಯಾರಿ ಆರಂಭ: 2018ರ ವಿಧಾನಸಭಾ ಚುನಾವಣೆಯಲ್ಲಿ ಬಹುಸಂಖ್ಯಾತ ಒಕ್ಕಲಿಗರ ವಿರೋ ಧಕ್ಕೆ ಗುರಿಯಾಗಿದ್ದ ಕಾಂಗ್ರೆಸ್ ಹೀನಾಯವಾದ ಸೋಲನ್ನು ಅನುಭವಿಸಿದ್ದು ಇತಿಹಾಸವಾದರೂ ಅದೇ ಕರಾಳ ಇತಿಹಾಸ ಮರುಕಳಿಸಬಾರದೆಂಬ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಳೇ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯುವ ಪೂರ್ವ ತಯಾರಿ ಹಳೇ ಮೈಸೂರಿನಾದ್ಯಂತ ಆರಂಭಗೊಂಡಿದ್ದು, ಅದರಲ್ಲಿ ಮಂಡ್ಯ ಜಿಲ್ಲೆ ಕೂಡ ಹೊರತಾಗಿಲ್ಲ.

ರಾಜ್ಯ ಗೆಲ್ಲುವ ರೋಚಕ ರಣತಂತ್ರ ಅದೇ ನಾ ಡಿಕೆ ಪ್ಲಾನ್? ಬೇಟೆಗಾರನ ನಿಗೂಢ ಹೆಜ್ಜೆ..! 

ಇತ್ತೀಚೆಗಷ್ಟೇ ಕಾಂಗ್ರೆಸ್‌ನ ರಾಜ್ಯ ನಾಯಕರು ಹಳೇ ಮೈಸೂರು ಪ್ರಾಂತ್ಯದ ಹಾಲಿ ಮತ್ತು ಮಾಜಿ ಶಾಸಕರ ಸಭೆ ನಡೆಸಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರಾದ ಅಹಿಂದ ವೋಟ್ ಬ್ಯಾಂಕ್ ಜೊತೆಗೆ ಒಕ್ಕಲಿಗರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆ ಮೂಲಕ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವಂತೆ ನೋಡಿಕೊಳ್ಳುವುದು ಮುಖ್ಯ ಉದ್ದೇಶವಾಗಿದ್ದು, ಈದಿಕ್ಕಿನಲ್ಲಿ ಮಂಡ್ಯ ಜಿಲ್ಲೆಯೊಳಗೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನಾಯಕತ್ವದಲ್ಲಿ ಒಕ್ಕಲಿ ಗರ ಓಲೈಕೆ ರಾಜಕಾರಣ ಮುಂದುವರೆದಿದೆ ಎಂದು ಹೇಳಲಾಗಿದೆ. 

ಕಾಂಗ್ರೆಸ್‌ನವರಲ್ಲಿ ಹೊಸ ಆತ್ಮಸ್ಥೈರ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಗಳಲ್ಲೂ ಜೆಡಿಎಸ್ ಜಯಭೇರಿ ಬಾರಿಸುವುದ ರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಿತ್ತು. ಮೈತ್ರಿ ಸರ್ಕಾರದ ಅಸ್ತಿತ್ವದ ನಡುವೆಯೂ ಚುನಾವಣಾ ಆಘಾತದಿಂದ ಹೊರಬರಲಾಗದ ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಪರಾಭವ ಪರೋಕ್ಷವಾಗಿ ಕಾಂಗ್ರೆಸ್‌ಗೆ ಆತ್ಮಸ್ಥೈರ್ಯವನ್ನು ಮೂಡಿಸಿತ್ತು. 

ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮಾಸ್ಟರ್ ಪ್ಲಾನ್ : ಇವರ ಮೇಲೆ ಕೈ ಕಣ್ಣು

2020ರ ಕೆ.ಆರ್ .ಪೇಟೆ ಉಪ ಚುನಾವಣೆಯಲ್ಲಿ ಕೆ.ಸಿ.ನಾರಾಯಣ ಗೌಡರ ಗೆಲುವು ರಾಜಕಾರಣದಲ್ಲಿ ಎಲ್ಲವೂ ಸಾಧ್ಯ ಎನ್ನುವುದನ್ನು ಸಾಬೀತುಪಡಿಸಿತ್ತು. ಆನಂತರ ಕಾಂಗ್ರೆಸ್ಸಿಗರು ಮೈಕೊಡವಿ ಹೊರಬರಲಾರಂಭಿಸಿ ದರು. ಜೆಡಿಎಸ್ ವಿರುದ್ಧ ದನಿ ಎತ್ತುವ ಧೈರ್ಯವನ್ನು ಮಾಡಿದ್ದರು. 2023ರ ಚುನಾವಣೆ ಸನ್ನಿಹಿತವಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ವಿವಿಧ ಕಾರ್ಯತಂತ್ರಗಳಿಗೆ ಮೊರೆಹೋಗುತ್ತಿದೆ. ಅದರಲ್ಲಿ ಕಾಂಗ್ರೆಸ್‌ನಿಂದ ಕನಿಷ್ಠ ಅಂತರ ಕಾಯ್ದುಕೊಂಡಂತೆ ಕಂಡುಬರುತ್ತಿರುವ ಒಕ್ಕಲಿಗ ಮತಗಳನ್ನು ಸೆಳೆಯಲು ವಿಶೇಷ ಆದ್ಯತೆ ನೀಡಿದಂತೆ ಕಂಡುಬರುತ್ತಿದೆ.

ಡಿಕೆಶಿ ನೇತೃತ್ವದಲ್ಲಿ ಸಂಘಟನೆ: ಸದ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದವರೇ ಆಗಿದ್ದು, ಅದನ್ನೇ ಮುಂದಿಟ್ಟು ಕೊಂಡು ಹಳೇ ಮೈಸೂರು ಪ್ರಾಂತ್ಯ ಅದರಲ್ಲೂ ವಿಶೇಷವಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಅಗತ್ಯ ಸಿದ್ಧತೆಗಳನ್ನು ಕಳೆದ ಒಂದು ವರ್ಷಗಳಿಂದಲೂ ಮಾ ಡಿಕೊಳ್ಳುತ್ತಿದ್ದು, ಬೆಂಗಳೂರಿನಲ್ಲಿ ನಡೆದ ಈ ಸಭೆ ಅಧಿಕೃತ ಪ್ರಕ್ರಿಯೆಗೆ ಚಾಲನೆ ನೀಡಿ ದಂತಾಗಿದೆ. 

2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೋಡೆತ್ತಿನಂತೆ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಶ್ರಮಿಸಿ ಒಕ್ಕಲಿಗ ಮತದಾರರನ್ನು ಕೊ್ರೀಢೀಕರಿಸುವ ಪ್ರಯತ್ನ ನಡೆಸಿ ದ್ದರು. ಆದರೆ, ಅಂಬರೀಶ್ ಅಭಿಮಾನಿ ವರ್ಗ ಮತ್ತು ಇತರೆ ಸಮುದಾಯಗಳು ಜೆಡಿಎಸ್ ವಿರುದ್ಧ ಬಂಡಾಯ ಸಾರಿದ ಪರಿಣಾಮ ಸುಮಲತಾ ಗೆಲುವು ಸುಲಭವಾಯಿತು. 

ಪ್ರತ್ಯೇಕ ಅಸ್ತಿತ್ವಕ್ಕೆ ಹೋರಾಟ: ಈಗ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಪ್ರತ್ಯೇಕ ಅಸ್ತಿತ್ವಕ್ಕೆ ಹೋರಾಟ ನಡೆಸುತ್ತಿದ್ದು, ಒಕ್ಕಲಿಗರ ಮತಕೇಂದ್ರದ ಮೇಲೆ ಕಣ್ಣಿಟ್ಟಿದ್ದು, ಪರಸ್ಪರ ಸಂಘರ್ಷ ಅನಿವಾ ರ್ಯವೇ ಆಗಿದೆ. ಒಕ್ಕಲಿಗರ ವೋಟ್ ಬ್ಯಾಂಕ್‌ನ್ನೇ (Vote bank) ನೆಚ್ಚಿಕೊಂಡು ಹಳೇ ಮೈಸೂರು (Mysuru) ಪ್ರಾಂತ್ಯದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಂಡಿರುವ ಜೆಡಿಎಸ್ ತನ್ನ ಮೂಲ ಮತದಾರರನ್ನು ಸಂರಕ್ಷಣೆ ಮಾಡಿಕೊಳ್ಳಲು ಮುಂದಾಗುತ್ತಿದ್ದರೆ, ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಹಿಂದ ಮತಗಳನ್ನು ಒಗ್ಗೂಡಿಸುವುದರ ಜೊತೆಗೆ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಒಕ್ಕಲಿಗರನ್ನು ಸೆಳೆಯುವ ಕಾರ್ಯಾಚರಣೆ ಮುಂದುವರೆಸಿದೆ. 

ಬಿಜೆಪಿಯಿಂದಲೂ ಹರಸಾಹಸ: ಜೆಡಿಎಸ್‌ಗೆ ಪರ್ಯಾಯವಾಗಿ ಒಕ್ಕಲಿಗ ನಾಯಕತ್ವವನ್ನು ಪೋಷಿಸುತ್ತಾ ಬಂದಿರುವ ಕಾಂಗ್ರೆಸ್, 2023ರ ಚುನಾವಣೆಯಲ್ಲಿ ಜೆಡಿಎಸ್‌ನಷ್ಟೇ ಪ್ರಮಾಣದಲ್ಲಿ ಕಾಂಗ್ರೆ ಸ್‌ನಲ್ಲಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮುಂದು ವರೆಸಿದ್ದು, ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಡಿ.ಕೆ.ಶಿವ ಕುಮಾರ್ ನಡುವೆ ಪ್ರತಿಷ್ಠೆ ತಲೆಎತ್ತಿದೆ. ಕಾಂಗ್ರೆಸ್-ಜೆಡಿಎಸ್‌ನ ಒಕ್ಕಲಿಗರ ವೋಟ್ ಬ್ಯಾಂಕ್ ಪೈಪೋಟಿ ನಡುವೆ ಬಿಜೆಪಿ ಕೂಡ ತನ್ನ ಪ್ರಾಬಲ್ಯ ಸಾಧಿಸುವ ಸಾಹಸಕ್ಕೆ ಮುಂದಾಗಿದೆ. ಕೆ. ಆರ್.ಪೇಟೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ರಾಜಕೀಯ ದಾಖಲೆ ಸೃಷ್ಟಿಸಿರುವ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ.   

click me!