ವಿಶ್ವನಾಥ್‌ ಬಗ್ಗೆ ಟಿಬಿ ಜಯಚಂದ್ರ ಸ್ಫೋಟಕ ಹೇಳಿಕೆ

Kannadaprabha News   | Asianet News
Published : Jan 16, 2021, 01:32 PM IST
ವಿಶ್ವನಾಥ್‌ ಬಗ್ಗೆ ಟಿಬಿ ಜಯಚಂದ್ರ ಸ್ಫೋಟಕ ಹೇಳಿಕೆ

ಸಾರಾಂಶ

ಕಾಂಗ್ರೆಸ್‌ ಮುಖಂಡ ಟಿ ಬಿ ಜಯಂದ್ರ ವಿಶ್ವನಾಥ್ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರು  ಹೇಳಿದ್ದೇನು..? 

ತುಮಕೂರು (ಜ.16) :  ಯಾರ ಹತ್ತಿರ ಸಿಡಿ ಇಲ್ಲ ಅಂದರೂ, ನನ್ನ ಸ್ನೇಹಿತ ವಿಶ್ವನಾಥ ಬಳಿ ಸಿಡಿ ಇದ್ದೇ ಇರುತ್ತೆ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಚಟಾಕಿ ಹಾರಿಸಿದರು.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿಡಿ ಬಗ್ಗೆ ಯತ್ನಾಳ್‌ ಕೂಡ ಮಾತನಾಡುತ್ತಿದ್ದಾರೆ. ಸಿಡಿ ಬಗ್ಗೆ ಇಷ್ಟೆಲ್ಲಾ ಬಹಿರಂಗ ಚರ್ಚೆ ಆಗುತ್ತಿದ್ದು ಹೊರಗೆ ಬಂದೇ ಬರುತ್ತದೆ ಎಂದರು.

 ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪಕ್ಷದ ಮುಖಂಡರು ಮಾತನಾಡುತ್ತಿರುವುದನ್ನು ನೋಡಿದರೆ ಅವರ ಬಳಿ ಸಿಡಿ ಇದೆ ಎಂಬುದು ಅರ್ಥವಾಗುತ್ತದೆ ಎಂದರು. ಸಿಡಿಯಲ್ಲಿ ಏನಿದೆ, ಯಾರು ಯಾರು ಪಾತ್ರ ಮಾಡಿದ್ದಾರೆ ನೋಡೋಣ ಎಂದರು.

CD ಬಾಂಬ್ ಹಾಕಿ ಅಬ್ಬರಿಸಿ ಬೊಬ್ಬಿರಿದಿದ್ದ ಯತ್ನಾಳ್ ಇಂದು ಸೈಲೆಂಟ್..! ...

ರಾಜ್ಯ ರಾಜಕೀಯದಲ್ಲಿ ಸಿಡಿ ವಿಚಾರ ಸಾಕಷ್ಟು ಚರ್ಚೆಯಾಗುತ್ತಿರವ ಬೆನ್ನಲ್ಲೇ ಈ ರೀತಿಯ ಹೇಳಿಕೆ ನೀಡಿದ್ದಾರೆ.

PREV
click me!

Recommended Stories

ಸಚಿವ ದಿನೇಶ್‌ ಗುಂಡೂರಾವ್‌ ಕಾರ್ಯಕ್ರಮದ ವೇಳೆ ಅಗ್ನಿ ಅವಘಡ
ರಂಧ್ರ ಬಿದ್ದು ತುಂಗಭದ್ರಾ ನದಿಯಲ್ಲಿ ನಿಂತ ನಾಡದೋಣಿ, ಬರೋಬ್ಬರಿ 3 ಜಿಲ್ಲೆಗಳ ಸಂಪರ್ಕ ಕಡಿತ! ಜನರ ಪರದಾಟ