'ಬ್ಲಾಕ್‌ಮೇಲ್‌ ಅಂದ್ರೇನೆ ಸಿದ್ದ​ರಾ​ಮ​ಯ್ಯ'

Kannadaprabha News   | Asianet News
Published : Jan 16, 2021, 01:00 PM ISTUpdated : Jan 16, 2021, 01:17 PM IST
'ಬ್ಲಾಕ್‌ಮೇಲ್‌ ಅಂದ್ರೇನೆ ಸಿದ್ದ​ರಾ​ಮ​ಯ್ಯ'

ಸಾರಾಂಶ

ಯಾವ ವಿಚಾರಕ್ಕೆ ಬ್ಲಾಕ್‌ಮೇಲ್‌ ಪದಗಳು ಬಳಕೆಯಾಗುತ್ತಿವೆ ಗೊತ್ತಿಲ್ಲ| ಮಂತ್ರಿ ಸ್ಥಾನ ಸಿಗದಂತಹ ಕೆಲವರು ಪಕ್ಷದ ವಿರುದ್ಧ ಮಾತನಾಡಿದ್ದಾರೆ, ಅದು ಸತ್ಯವೂ ಕೂಡ| ಪಕ್ಷದಲ್ಲಿನ ಅಸಮಾಧಾನವನ್ನು ಸರಿ​ಪ​ಡಿಸಿ ಮುಂದೆ ಹೋಗುವ ಶಕ್ತಿ ಪಕ್ಷದ ಮುಖಂಡರಿಗಿದೆ: ಈಶ್ವರಪ್ಪ| 

ಬ್ಯಾಡಗಿ( ಜ.16):  ಬಿಜೆಪಿ ಸಿದ್ಧಾಂತವಿರುವ ಪಕ್ಷ, ಆದರೆ ಬ್ಲಾಕ್‌ಮೇಲ್‌ ಅಂದ್ರೇನೆ ಸಿದ್ದರಾಮಯ್ಯ, ಬ್ಲಾಕ್‌ಮೇಲ್‌ ಬಗ್ಗೆ ಅವರೇ ಹೇಳಲಿ ಎಂದು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಪಡೆಯುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಹೋರಾಟ ಕಾರ್ಯಕ್ರಮದ ನಿಮಿತ್ತ ಕಾಗಿನೆಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬ್ಲಾಕ್‌ಮೇಲ್‌ ಗಿರಾಕಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವ ವಿಚಾರಕ್ಕೆ ಬ್ಲಾಕ್‌ಮೇಲ್‌ ಪದಗಳು ಬಳಕೆಯಾಗುತ್ತಿವೆ ಗೊತ್ತಿಲ್ಲ, ಮಂತ್ರಿ ಸ್ಥಾನ ಸಿಗದಂತಹ ಕೆಲವರು ಪಕ್ಷದ ವಿರುದ್ಧ ಮಾತನಾಡಿದ್ದಾರೆ, ಅದು ಸತ್ಯವೂ ಕೂಡ ಎಂದರು.

ವಿಶ್ವನಾಥ್‌ಗೂ ಮಂತ್ರಿ ಮಾಡಲು ಒತ್ತಾಯಿಸುತ್ತೇವೆ: ಆರ್‌.ಶಂಕರ್‌

ಪಕ್ಷದಲ್ಲಿನ ಅಸಮಾಧಾನವನ್ನು ಸರಿ​ಪ​ಡಿಸಿ ಮುಂದೆ ಹೋಗುವ ಶಕ್ತಿ ಪಕ್ಷದ ಮುಖಂಡರಿಗಿದೆ, ರಾಜಕೀಯ ಪಕ್ಷಗಳಲ್ಲಿ ಇದೊಂದು ಸಾಮಾನ್ಯ ಪ್ರಕ್ರಿಯೆ, ಎಲ್ಲವನ್ನೂ ಸರಿಪಡಿಸಿ ಸ್ವಚ್ಛ ಹಾಗೂ ಸುಭದ್ರ ಸರ್ಕಾರ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
 

PREV
click me!

Recommended Stories

ಸವದತ್ತಿಯ ಭೀರೇಶ್ವರ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ, ಮೂರ್ತಿ ಕದ್ದು ಹೊರವಲಯದಲ್ಲಿ ಬಿಸಾಕಿದ ಕಳ್ಳರು
ಬಿಗ್‌ ಟ್ವಿಸ್ಟ್: ಡಿಜಿಪಿ ರಾಮಚಂದ್ರರಾವ್ ರಂಗಿನಾಟಕ್ಕೆ ಕುಂದಾನಗರಿ ಬೆಳಗಾವಿ ನಂಟು?