ಕೋವಿಡ್ ಲಸಿಕೆ ಪಡೆಯಲು ಸ್ಟಾಫ್ ನರ್ಸ್‌ ಹಿಂದೇಟು

By Suvarna NewsFirst Published Jan 16, 2021, 1:20 PM IST
Highlights

ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ನಡೆದ ಘಟನೆ| ಸ್ಟಾಫ್ ನರ್ಸ್ ಮನವೊಲಿಸಿದ ಸಚಿವ‌ ಶ್ರೀರಾಮುಲು| ಸಚಿವರು ಹೇಳಿದ ಬಳಿಕ ಲಸಿಕೆ ಪಡೆದ ಸ್ಟಾಫ್ ನರ್ಸ್| ಇಂದಿನಿಂದ ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭ| 

ಚಿತ್ರದುರ್ಗ(ಜ.16):  ಕೋವಿಡ್ ಲಸಿಕೆ ಪಡೆಯಲು ಸ್ಟಾಫ್ ನರ್ಸ್‌ವೊಬ್ಬರು ಹಿಂದೇಟು ಹಾಕಿದ ಘಟನೆ ನಗರದ ಜಿಲ್ಲಾಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಇಂದು(ಶನಿವಾರ) ನಡೆದಿದೆ. 

ಸ್ಟಾಫ್ ನರ್ಸ್ ಚಿಕ್ಕಮ್ಮ ಎಂಬುವರಿಗೆ ಕೋವಿಡ್ ಲಸಿಕೆ ಹಾಕಕು ಮುಂದಾದಾಗ ಲಸಿಕೆ ಪಡೆಯಲು ಚಿಕ್ಕಮ್ಮ ಹಿಂದೇಟು ಹಾಕಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಉಪಸ್ಥಿತರಿದ್ದ ಸಚಿವ‌ ಶ್ರೀರಾಮುಲು ಚಿಕ್ಕಮ್ಮ ಅವರ ಜೊತೆ ಮಾತನಾಡಿ ಮನವೊಲಿಸಿದ್ದರು.

ಅಮೃತಂಗಮಯ: ಜಗತ್ತಿನ ಅತಿದೊಡ್ಡ ಕೊರೋನಾ ಲಸಿಕೆ ವಿತರಣೆ ಆಂದೋಲನಕ್ಕೆ ಮೋದಿ ಚಾಲನೆ!

ಸಚಿವರು ಮನವೊಲಿಸಿದ ಬಳಿಕ ಚಿಕ್ಕಮ್ಮ ಅವರು ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದ ನರ್ಸ್ ಚಿಕ್ಕಮ್ಮ ಅವರಿಗೆ ಸಚಿವ‌ ಶ್ರೀರಾಮುಲು ಅವರು ಶಾಲು ಹೊದಿಸಿ ಗೌರವಿಸಿದ್ದಾರೆ.  ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿದೆ. ಸ್ವದೇಶಿ ನಿರ್ಮಿತ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳು ದೇಶದ ಜನರನ್ನು ‘ಮೃತ್ಯೋರ್ಮಾ ಅಮೃತಂಗಮಯ’ ಎಂಬ ಭರವಸೆಯೊಂದಿಗೆ ಹೊಸ ಸಂವತ್ಸರದತ್ತ ಕೈಹಿಡಿದು ನಡೆಸಲು ಸನ್ನದ್ಧವಾಗಿವೆ.
 

click me!