
ಗೋಕಾಕ(ಮಾ.06): 'ಇದು ರಾಜಕೀಯ ಷಡ್ಯಂತ್ರ, ಈ ಕೇಸ್‌ನಲ್ಲಿ ರಮೇಶಣ್ಣ ಗೆದ್ದು ಬರ್ತಾರೆ’ ಎಂದು ಉದ್ಯಮಿ, ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಮೊದಲ ಬಾರಿ ಪ್ರತಿಕ್ರಿಯಿಸಿದ ಅವರು, ಸೋದರ ರಮೇಶ್ ಅವರನ್ನು ರಾಜಕೀಯವಾಗಿ ಮುಗಿಸಲು ಈ ರೀತಿ ನಕಲಿ ಸಿ.ಡಿ. ಮಾಡಲಾಗಿದೆ. ರಾಜಕೀಯವಾಗಿ ಬೆಳೆಯುವ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ಆದರೆ, ಇದರಲ್ಲಿ ವಿರೋಧಿಗಳು ಯಶಸ್ವಿಯಾಗುವುದಿಲ್ಲ ಎಂದರು.
ರಾಸಲೀಲೆ ವಿಡಿಯೋ ಹಿಂದೆ ಕನಕಪುರ, ಬೆಳಗಾವಿಯ ಷಡ್ಯಂತ್ರ: ಹೊಸ ಬಾಂಬ್
ಕ್ಷೇತ್ರದ ಜನ ಅವರನ್ನು ರಮೇಶಣ್ಣ ಎಂದು ಕರೆಯುತ್ತಾರೆ. ಅವರು ಹೀಗೆ ಮಾಡುತ್ತಾರೆ ಅಂತ ಯಾರಿಗೂ ಅನಿಸುವುದಿಲ್ಲ. ರಮೇಶಣ್ಣನನ್ನು ಕ್ಷೇತ್ರದ ಜನ ಬಿಟ್ಟು ಕೊಡೋಕೆ ತಯಾರಿಲ್ಲ ಹಾಗೂ ಕ್ಷೇತ್ರದ ಜನ ಇದನ್ನು ನಂಬಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಮೊದಲಿಂದಲೂ ಜಾರಕಿಹೊಳಿ ಸೋದರರು ಒಂದಾಗಿ ಹೋಗುತ್ತಿದ್ದೇವೆ. ಜನರನ್ನೂ ಸರಿ ಸಮನಾಗಿ ನೋಡಿಕೊಂಡು ಸಾಗುತ್ತಿದ್ದೇವೆ. ಇದು ಕೆಲವೇ ದಿನಗಳ ಕಹಿ ಘಟನೆ. ಮತ್ತೆ ರಮೇಶಣ್ಣನಿಗೆ ಒಳ್ಳೆಯ ದಿನಗಳು ಬರುತ್ತವೆ. ಇಂದು ಮೋಡ ಕವಿದ ವಾತಾವರಣದ ನಿರ್ಮಾಣ ಆಗಿದೆ, ಮೋಡ ಹೋದ ಮೇಲೆ ಬೆಳದಿಂಗಳು ಬಂದೇ ಬರುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿ ಕೆಲಸ ಮಾಡಿವೆ. ನಾನು ಸೋದರನ ಬೆಂಬಲಕ್ಕಿದ್ದೇನೆ ಎಂದರು ಲಖನ್.