ಬಿಜೆಪಿ ಸೇರಿದ ಕಾಂಗ್ರೆಸ್ ಹಿರಿಯರು, ಮುಖಂಡರು ಮತ್ತು ಯುವಕರು| ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಕಾಂಗ್ರೆಸ್ ಮುಖಂಡರು| ಪಕ್ಷದ ಧ್ವಜ ನೀಡಿ ಬರಮಾಡಿಕೊಂಡ ಬಿಜೆಪಿ ಮುಖಂಡರು|
ನರಗುಂದ(ಮಾ.06): ತಾಲೂಕಿನ ಶಿರೋಳ ಗ್ರಾಮದ ಕಾಂಗ್ರೆಸ್ ಹಿರಿಯರು, ಮುಖಂಡರು ಮತ್ತು ಯುವಕರು ಬಿಜೆಪಿ ಸೇರಿದ್ದಾರೆ. ಈ ಮೊದಲೇ ಸೇರ್ಪಡೆಗೊಂಡ ಪ್ರಕಾಶಗೌಡ ತಿರಕನಗೌಡ್ರ ಹಾಗೂ ಸಿದ್ದಯ್ಯ ಹೊಸಮನಿ ನೇತೃತ್ವ ವಹಿಸಿದ್ದರು.
ಶಿರೋಳ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಶಿದ್ದಪ್ಪ ಗುಂಡ್ಲೂರ, ಉಪಾಧ್ಯಕ್ಷ ಗುರುಬಸಯ್ಯ ನಾಗಲೋಟಿಮಠ, ಗ್ರಾಪಂ ಮಾಜಿ ಅಧ್ಯಕ್ಷರಾದ ಬೀರಪ್ಪ ಕಾಡಪ್ಪನವರ, ಮುತ್ತಪ್ಪ ಚಿಕ್ಕನರಗುಂದ, ಪ್ರಭಯ್ಯ ಅಂಕ್ಲಿಮಠ, ಗ್ರಾಪಂ ಮಾಜಿ ಸದಸ್ಯ ಬಸವರಾಜ ಹೂಗಾರ, ವ್ಯಾಪಾರಸ್ಥ ಮಲ್ಲಿಕಸಾಬ್ ನದಾಫ್, ದ್ಯಾಮಣ್ಣ ತೆಗ್ಗಿ, ಶ್ರೀಧರ ಶಿಪ್ಪಿ, ಯೋಗಪ್ಪ ಶಾಂತಗೇರಿ, ದ್ಯಾಮಣ್ಣ ಶಾಂತಗೇರಿ, ಶಿವಕುಮಾರ ಕಾಡಪ್ಪನವರ, ರಮೇಶ ಬಾಗಲಕೋಟೆ, ಜಗದಯ್ಯ ಹಿರೇಮಠ ಸೇರ್ಪಡೆಯಾದ ಪ್ರಮುಖರು.
ಗದಗ: ಕಪ್ಪತ್ತಗುಡ್ಡದ ಸಸ್ಯ ಆಹುತಿ ಪಡೆಯುತ್ತಿರುವ ಬೆಂಕಿ..!
ಬಿಜೆಪಿ ನರಗುಂದ ಮಂಡಲ ಅಧ್ಯಕ್ಷ ಗುರುನಾಥ ಆದೆಪ್ಪನವರ, ಯುವನಾಯಕ ಉಮೇಶಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ಪ್ರಶಾಂತ ಜೋಶಿ, ಬಿಜೆಪಿ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜು ಮೆಣಸಗಿ, ಪಕ್ಷದ ಮುಖಂಡರಾದ ಚಂದ್ರು ದಂಡಿನ, ಬಸು ಪಾಟೀಲ ಮುಂತಾದವರ ಹಾಜರಿದ್ದರು. ಪಕ್ಷದ ಧ್ವಜವನ್ನು ನೀಡಿ ಬರಮಾಡಿಕೊಳ್ಳಲಾಯಿತು.