Council Election Result : ಮಂಕಾಗಿದ್ದ ಕಾಂಗ್ರೆಸ್ ಸಕ್ಕರೆ ನಾಡಲ್ಲಿ ಮತ್ತೆ ಎದ್ದಿದೆ

By Kannadaprabha News  |  First Published Dec 16, 2021, 2:26 PM IST
  • ಮಂಕಾಗಿದ್ದ ಕಾಂಗ್ರೆಸ್ ಸಕ್ಕರೆ ನಾಡಲ್ಲಿ ಮತ್ತೆ ಎದ್ದಿದೆ
  • ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಪಕ್ಷಾತೀತವಾಗಿ ಸಹಕಾರ

 ಮಂಡ್ಯ (ಡಿ.16):  ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಪಕ್ಷಾತೀತವಾಗಿ ಎಲ್ಲರೂ ನೀಡಿದ ಸಹಕಾರ ಹಾಗೂ ಕಾಂಗ್ರೆಸ್‌ (Congress) ಪಕ್ಷದ ಎಲ್ಲ ಮುಖಂಡರೂ ಒಟ್ಟಿಗೇ ಚುನಾವಣೆ (election) ಎದುರಿಸಿದ್ದೇ ಕಾರಣ ಎಂದು ಕೆಪಿಸಿಸಿ (KPCC) ವಕ್ತಾರ ಎನ್‌. ಚಲುವರಾಯಸ್ವಾಮಿ (Cheluvarayaswamy) ವಿಶ್ಲೇಷಿಸಿದರು.  ನಾವು ಸ್ವಾಭಿಮಾನದ ಚುನಾವಣಾ ರೀತಿಯಲ್ಲಿ ಕೆಲಸ ಮಾಡಿದ್ದೇವೆ. ಇದಕ್ಕೆ ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ (DK Shivakmar) ಸೇರಿದಂತೆ ಪಕ್ಷದ ವರಿಷ್ಠರು ಸಾಥ್‌ ನೀಡಿದ್ದರು. ಜಿಲ್ಲೆಗೆ ಭೇಟಿ ನೀಡಿ ಪ್ರಚಾರ ಕಾರ‍್ಯದಲ್ಲೂ ತೊಡಗಿದ್ದರು. ಜೊತೆಗೆ ಜಿಲ್ಲಾ ತಂಡ ಉತ್ತಮವಾಗಿ ಕೆಲಸ ಮಾಡಿ ಗೆಲುವಿಗೆ ಶ್ರಮಿಸಿದೆ ಎಂದು ಫಲಿತಾಂಶದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly Election) ಸೋಲಿನ ಹತಾಶೆಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸ್ವಲ್ಪ ಮಟ್ಟಿಗೆ ಮಂಕಾಗಿತ್ತು. ಈ ಚುನಾವಣೆಯನ್ನು (Election) ಆತ್ಮವಿಶ್ವಾಸದಿಂದ ಎದುರಿಸಿದ್ದೇವೆ. ಅನೇಕ ಪ್ರಯತ್ನಗಳನ್ನು ಮಾಡಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಕನಸನ್ನು ಕಂಡಿದ್ದೇವೆ ಎಂದರು.

Latest Videos

undefined

ಒಂದು ಕಾಲದಲ್ಲಿ ಮಂಡ್ಯ (Mandya) ಅಭಿವೃದ್ಧಿ ವಿಚಾರದಲ್ಲಿ ತುಂಬಾ ಮುಂದೆ ಇತ್ತು. ಮಧ್ಯದಲ್ಲಿ ಅಭಿವೃದ್ಧಿ ಹಿಂದೆ ಬಿದ್ದಿತ್ತು. ಈಗ ಜಿಲ್ಲೆಯ ಅಭಿವೃದ್ಧಿಗೆ ನಾವೆಲ್ಲಾ ಕನಸನ್ನು ಕಂಡಿದ್ದೇವೆ. ಬೆಂಗಳೂರು-ಮೈಸೂರು ಯಾವ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಿದೆಯೋ ಅದೇ ಮಾದರಿಯಲ್ಲಿ ಮಂಡ್ಯವೂ ಸಹ ಅಭಿವೃದ್ಧಿಯಲ್ಲಿ ಮುಂಚೂಣಿ ಇರುವಂತೆ ಮಾಡುವುದೇ ನಮ್ಮ ಧ್ಯೇಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಪ್ರತಿಯೊಬ್ಬರಿಗೂ ಗೆಲುವು ಸಮರ್ಪಣೆ:  ಇಲ್ಲಿನ ಪ್ರತಿಯೊಬ್ಬ ಯುವಕರು, ಮಹಿಳೆಯರಿಗೆ (Woman) ಉದ್ಯೋಗ ನೀಡುವುದು ಸಹ ನಮ್ಮ ಆದ್ಯತೆಯಾಗಿದೆ. ಇಲ್ಲಿಯವರೆಗೆ ರಾಜಕೀಯ (Politics) ಮಾಡಿದ್ದೇ ಒಂದು, ಮುಂದೆ ಇಲ್ಲಿನ ಜನರಿಗಾಗಿ ಪ್ರತಿಯೊಬ್ಬರೂ ಹೋರಾಟ ಮಾಡುತ್ತೇವೆ. ಈ ಗೆಲುವು ಪ್ರತಿಯೊಬ್ಬ ಜನರಿಗೂ ಸಮರ್ಪಣೆ ಮಾಡುತ್ತೇವೆ ಎಂದು ಹೇಳಿದರು.

ವಿಧಾನಸಭೆಗಾಗಲೀ, ವಿಧಾನ ಪರಿಷತ್ತಿಗಾಗಿ ಈ ಜಿಲ್ಲೆಯಿಂದ ಕಾಂಗ್ರೆಸ್‌ (Congress) ಪ್ರತಿನಿಧಿ ಇಲ್ಲ ಎಂಬ ಕೊರಗು ನಮ್ಮದಾಗಿತ್ತು. ಈ ಚುನಾವಣೆಯಲ್ಲಿ ಜಿಲ್ಲೆಯ ಪ್ರತಿನಿಧಿಗಳು ಕೊರಗನ್ನು ನೀಗಿಸಿದ್ದಾರೆ. ನಮ್ಮ ಪಕ್ಷದ ಪ್ರತಿನಿಧಿ ಪರಿಷತ್ತಿನಲ್ಲಿ ಕೆಲಸ ಮಾಡುತ್ತಾರೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲೂ (Election) ಸಹ ಇದೇ ಮಾದರಿಯಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ‍್ಯಕರ್ತರು ಒಟ್ಟಾಗಿ ಸೇರಿ ಚುನಾವಣೆಯನ್ನು ಎದುರಿಸಿ ಅಧಿಕಾರ ಹಿಡಿಯುತ್ತೇವೆ. ಮತದಾರರು ನಮ್ಮನ್ನು ಕೈ ಬಿಟ್ಟಿಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದರು.  ಮಾಜಿ ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ, ಎಂ.ಎಸ್‌. ಆತ್ಮಾನಂದ, ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ಕೆ.ಬಿ. ಚಂದ್ರಶೇಖರ್‌, ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್‌ ಸೇರಿದಂತೆ ಇತರರು ಹಾಜರಿದ್ದರು.

ಇವರೇ ಕಿಂಗ್ ಮೇಕರ್ :  ಜೆಡಿಎಸ್‌ (JDS) ಭದ್ರ ಕೋಟೆಯನ್ನು ಛಿದ್ರಗೊಳಿಸಿದ್ದು ಅಲ್ಲದೇ ನೆಲೆಯೂರಲು ಹವಣಿಸುತ್ತಿದ್ದ ಬಿಜೆಪಿಯನ್ನೂ (BJP) ಧೂಳಿಪಟ ಮಾಡಿರುವ ಕಾಂಗ್ರೆಸ್‌ (Congress) ಅಭ್ಯರ್ಥಿ ದಿನೇಶ್‌ ಗೂಳಿಗೌಡ ಮತ್ತೆ ಮಂಡ್ಯದಲ್ಲಿ (Mandya) ಕಾಂಗ್ರೆಸ್‌ (Congress) ಮತ್ತೆ ನೆಲೆ ಕಂಡುಕೊಳ್ಳುವ ದಾರಿ ಸುಗಮಗೊಳಿಸಿದ್ದಾರೆ.  ಜಿಲ್ಲೆಯ ಏಳು ವಿಧಾನಸಭಾ (Assembly election ) ಕ್ಷೇತ್ರಗಳ ಪೈಕಿ ಆರರಲ್ಲಿ ಜೆಡಿಎಸ್‌ ಶಾಸಕರಿದ್ದು, ಕೆ.ಆರ್‌.ನಗರದಲ್ಲಿ ಗೆದ್ದಿರುವ ಕೆ.ಸಿ.ನಾರಾಯಣಗೌಡ ಮಂಡ್ಯ (Mandya) ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. ಜೊತೆಗೆ ತಮ್ಮ ಪ್ರತಿಸ್ಪರ್ಧಿ ವಿಧಾನ ಪರಿಷತ್ತು ಹಾಲಿ ಸದಸ್ಯರಾಗಿದ್ದರೂ ಅವರ ವಿರುದ್ಧ ದಿನೇಶ್‌ ಗೂಳಿಗೌಡ 167 ಮತಗಳ ಅಂತರದ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.

14 ವರ್ಷ ಕಾಲ ಮಾಧ್ಯಮ ಉಸ್ತುವಾರಿ:  ಮೂಲತಃ ಮಂಡ್ಯ (Mandya) ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಮಾರ ಸಿಂಗನಹಳ್ಳಿಯ ರೈತನ ಮಗನಾದ ದಿನೇಶ್‌ ಗೂಳಿ ಗೌಡ ಅವರು, 1988ರಲ್ಲಿ ಎಸ್‌.ಎಂ.ಕೃಷ್ಣ (SM Krishan) ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ (Congress) ಸೇರ್ಪಡೆಗೊಂಡಿದ್ದರು. ನಾಲ್ಕು ವರ್ಷದ ಬಳಿಕ ಕೆಪಿಸಿಸಿ (KPCC) ಕಚೇರಿಯಲ್ಲಿ ಮಾಧ್ಯಮ ಉಸ್ತುವಾರಿಯಾಗಿ ಸೇರ್ಪಡೆಗೊಂಡ ಅವರು ಸುಮಾರು 14 ವರ್ಷಗಳ ಕಾಲ ಮಾಧ್ಯಮ ಉಸ್ತುವಾರಿಯಾಗಿಯೇ ಕೆಲಸ ಮಾಡಿದ್ದರು.

2013ರಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್‌ (Congress) ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗ ಅಂದಿನ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ (Dr Parameshwar) ಅವರ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದರು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಜಿ.ಪರಮೇಶ್ವರ್‌ (G parameshwat) ಅವರ ವಿಶೇಷಾಧಿಕಾರಿಯಾಗಿದ್ದರು. ನಂತರ ಎಸ್‌.ಟಿ. ಸೋಮಶೇಖರ್‌ (ST Somashekar) ಜೊತೆಗೆ ಹೋಗಿದ್ದ ದಿನೇಶ್‌ ಗೂಳಿಗೌಡ ಅವರಿಗೂ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಕಾಂಗ್ರೆಸ್‌ನಿಂದ (Congress) ಟಿಕೆಟ್‌ ಪಡೆದು ಮಂಡ್ಯ ವಿಧಾನ ಪರಿಷತ್‌ ( ಸ್ಪರ್ಧಿಸಿದ್ದರು.

click me!