ಕಾಂಗ್ರೆಸ್‌ ಇಬ್ಬರು ಮುಖಂಡರ ವಿರಸ : ಭಾರೀ ಅಸಮಾಧಾನ ಸ್ಫೋಟ

Kannadaprabha News   | Asianet News
Published : Sep 05, 2021, 03:02 PM ISTUpdated : Sep 05, 2021, 03:05 PM IST
ಕಾಂಗ್ರೆಸ್‌  ಇಬ್ಬರು ಮುಖಂಡರ ವಿರಸ : ಭಾರೀ ಅಸಮಾಧಾನ ಸ್ಫೋಟ

ಸಾರಾಂಶ

ಜೋಯಿಡಾ-ಹಳಿಯಾಳ ಕ್ಷೇತ್ರದ ಕಾಂಗ್ರೆಸ್‌ ಇಬ್ಭಾಗವಾಗುವುದೇ ಎನ್ನುವ ಪ್ರಶ್ನೆ  ಶಾಸಕ ಆರ್‌.ವಿ. ದೇಶಪಾಂಡೆ-ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ್‌ ನಡುವೆ ಹಲವು ದಿನಗಳಿಂದ ಮುಸುಕಿನ ಗುದ್ದಾಟ 

 ಜೋಯಿಡಾ(ಸೆ.05): ಜೋಯಿಡಾ-ಹಳಿಯಾಳ ಕ್ಷೇತ್ರದ ಕಾಂಗ್ರೆಸ್‌ ಇಬ್ಭಾಗವಾಗುವುದೇ ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.

ಶಾಸಕ ಆರ್‌.ವಿ. ದೇಶಪಾಂಡೆ-ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ್‌ ನಡುವೆ ಹಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕೂಡ ಅಭ್ಯರ್ಥಿ ಎಂದು ಘೋಟ್ನೇಕರ್‌ ಘೋಷಿಸಿದ್ದಾರೆ. ಜತೆಗೆ ಹಲವು ದಿನಗಳಿಂದ ಜನರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಆರ್‌.ವಿ. ದೇಶಪಾಂಡೆ ಮುಂದಿನ ನಡೆ ಏನು? ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ? ಎನ್ನುವ ಕುತೂಹಲ ಜನರಲ್ಲಿದೆ.

ಹಳಿಯಾಳ, ದಾಂಡೇಲಿ, ಜೋಯಿಡಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಘೋಟ್ನೇಕರ್‌ ಅವರನ್ನು ಸಾಕಷ್ಟು ಕಾಡಿಸುತ್ತಿದ್ದಾರೆ. ಅವರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೇ ಅಸಡ್ಡೆ ತೋರಿಸುತ್ತಿರುವುದು, ಅವರ ಬಗ್ಗೆ ಶಾಸಕ ದೇಶಪಾಂಡೆ ಅವರಿಗೆ ತಪ್ಪುಕಲ್ಪನೆ ಮೂಡಿಸುತ್ತಿರುವುದು, ಕೆಲವೇ ಕೆಲವರ ಗುಂಪು ಕಟ್ಟಿತಮ್ಮವರ ಕೆಲಸ ಅಷ್ಟೇ ಮಾಡುವುದು, ಹಲವಾರು ಕಾಮಗಾರಿಗಳನ್ನು ತಮಗೆ ಹೇಗೆ ಬೇಕೋ ಹಾಗೆ ದೇಶಪಾಂಡೆ ಅವರಿಂದ ಮಾಡಿಸಿಕೊಳ್ಳುವುದು ಕಾಂಗ್ರೆಸ್‌ನ ಒಂದು ವಲಯದವರ ಆಕ್ರೋಶಕ್ಕೆ ಕಾರಣವಾಗಿದೆ.

RV ದೇಶಪಾಂಡೆ ವಿರುದ್ಧ ಕಾಂಗ್ರೆಸ್‌ ನಾಯಕನ ಆಕ್ರೋಶ

ಅಧಿಕಾರಿ ವರ್ಗದವರಿಗೂ ದೇಶಪಾಂಡೆ ಹೆಸರು ಹೇಳಿ ಅನೇಕ ಕಾಮಗಾರಿಗಳನ್ನು ಹೇಗೆ ಬೇಕು ಹಾಗೆ ಬದಲಾಯಿಸುತ್ತಾರೆ, ಸತತ ಗುಂಪುಗಾರಿಕೆ ಮೂಲಕ ಪಕ್ಷದವರನ್ನು ಕಡೆಗಣಿಸುತ್ತಾರೆ ಎಂಬುದು ಕೆಲವು ಕಾರ್ಯಕರ್ತರ ಆರೋಪ. ಘೋಟ್ನೇಕರ ಅವರ ಬಳಿ ಕೆಲವು ಕಾರ್ಯಕರ್ತರು ಅಸಮಧಾನ ತೋಡಿಕೊಂಡಿದ್ದಾರೆ. ಆದರೆ ದೇಶಪಾಂಡೆ ಅವರು ಅಧ್ಯಕ್ಷರ ಮಾತನ್ನೇ ನಂಬುತ್ತಾರೆ ಎನ್ನುವುದು ಅವರ ಆಕ್ಷೇಪ.

ದೇಶಪಾಂಡೆ ಅವರಿಗೆ ತಪ್ಪು ಸಂದೇಶ ನೀಡುವ ಕಾರ್ಯಕರ್ತರನ್ನು ದೂರವಿಡಬೇಕು, ತಾಪಂ-ಜಿಪಂ ಚುನಾವಣೆಯಲ್ಲಿ ಅಂಥವರಿಗೆ ಬೆಂಬಲ ನೀಡಬಾರದು ಎಂಬುದು ಕಾಂಗ್ರೆಸ್‌ ಒಂದು ಗುಂಪಿನ ನಿಲುವು.

ಇಂತಹುದೇ ಬೆಳವಣಿಗೆಗಳು ದೇಶಪಾಂಡೆ-ಘೋಟ್ನೇಕರ ವಿರಸಕ್ಕೆ ಕಾರಣವಾಗಿದೆಯೇ? ದೇಶಪಾಂಡೆ-ಘೋಟ್ನೇಕರ ವಿರಸಕ್ಕೆ ತೆರೆ ಬೀಳುವುದೇ ಎನ್ನುವ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ.

PREV
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ